ಇನ್ನೂ ಕೊರೊನಾ ಔಷಧಿಯೇ ಬಂದಿಲ್ಲ; ಆಗಲೇ ಖದೀಮರು ಕಣಕ್ಕಿಳಿದರು, ಅರೆಸ್ಟೂ ಆದ್ರು!
ಮುಂಬೈ: ದೇಶದಲ್ಲಿ ಕೊರೊನಾ ಮದ್ದಿನ ಲಭ್ಯತೆ ಕಡಿಮೆ ಪ್ರಮಾಣದಲ್ಲಿರುವ ಕಾರಣದಿಂದ ರೆಮ್ಡೆಸಿವಿರ್ ಮತ್ತು ಟೋಸಿಲಿಜುಮಾಬ್ ಕೊರೊನಾ ಔಷಧಿಗಳ ಕಾಳಸಂತೆ ಮಾರಾಟ ಹೆಚ್ಚಾಗಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಇದು ವಿಪರೀತಕ್ಕೆ ತಲುಪಿದೆ. ಇದಕ್ಕೆ ಸಂಬಂಧಿಸಿದಂತೆ ಕೊರೊನಾ ಔಷಧಿಗಳ ಕಾಳಸಂತೆ ಮಾರಾಟಮಾಡುತ್ತಿದ್ದ ಗ್ಯಾಂಗ್ ಅನ್ನು ರಾಜ್ಯದ ಥಾಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಥಾಣೆಯ ಕ್ರೈಮ್ ಬ್ರಾಂಚ್ ವಿಭಾಗದ ಪೊಲೀಸರು ಗ್ಯಾಂಗ್ನ ಐವರು ಸದಸ್ಯರನ್ನು ಬಂಧಿಸಿದ್ದಾರೆ. ಬಂಧಿತರು ಔಷಧಿಯ ನಿಗದಿತ ದರಕ್ಕಿಂತ ಐದು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು […]
ಮುಂಬೈ: ದೇಶದಲ್ಲಿ ಕೊರೊನಾ ಮದ್ದಿನ ಲಭ್ಯತೆ ಕಡಿಮೆ ಪ್ರಮಾಣದಲ್ಲಿರುವ ಕಾರಣದಿಂದ ರೆಮ್ಡೆಸಿವಿರ್ ಮತ್ತು ಟೋಸಿಲಿಜುಮಾಬ್ ಕೊರೊನಾ ಔಷಧಿಗಳ ಕಾಳಸಂತೆ ಮಾರಾಟ ಹೆಚ್ಚಾಗಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಇದು ವಿಪರೀತಕ್ಕೆ ತಲುಪಿದೆ.
ಇದಕ್ಕೆ ಸಂಬಂಧಿಸಿದಂತೆ ಕೊರೊನಾ ಔಷಧಿಗಳ ಕಾಳಸಂತೆ ಮಾರಾಟಮಾಡುತ್ತಿದ್ದ ಗ್ಯಾಂಗ್ ಅನ್ನು ರಾಜ್ಯದ ಥಾಣೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಥಾಣೆಯ ಕ್ರೈಮ್ ಬ್ರಾಂಚ್ ವಿಭಾಗದ ಪೊಲೀಸರು ಗ್ಯಾಂಗ್ನ ಐವರು ಸದಸ್ಯರನ್ನು ಬಂಧಿಸಿದ್ದಾರೆ. ಬಂಧಿತರು ಔಷಧಿಯ ನಿಗದಿತ ದರಕ್ಕಿಂತ ಐದು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಗ್ರಾಹಕರ ಸೋಗಿನಲ್ಲಿ ಬಂದು ಆರೋಪಿಗಳನ್ನು ಸೆರೆ ಹಿಡಿದ ಪೊಲೀಸರು, ಖದೀಮರು ರೆಮ್ಡೆಸಿವಿರ್ ಔಷಧಿಯನ್ನ 25 ಸಾವಿರಕ್ಕೆ ಹಾಗೂ ಟೋಸಿಲಿಜುಮಾಬ್ 80 ಸಾವಿರ ರೂಪಾಯಿಗೆ ಮಾರುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.
Published On - 3:44 pm, Thu, 23 July 20