ಅರ್ಧ ಲಕ್ಷ ರೂಪಾಯಿ ಗಡಿ ದಾಟಿಯೇ ಬಿಟ್ಟಿತು ಬಂಗಾರದ ದರ!
[lazy-load-videos-and-sticky-control id=”iK1xWN14F-0″] ಕೊರೊನಾ ಕಾಲಿಟ್ಟಿದ್ದೇ ಇಟ್ಟಿದ್ದು, ಜಗತ್ತಿನಾದ್ಯಂತ ಪ್ರತಿಯೊಬ್ಬರೂ ಸಂಕಷ್ಟಗಳ ಸರಮಾಲೆ ಎದುರಿಸುವಂತಾಗಿದೆ. ಈ ಬೆನ್ನಲ್ಲೇ ಉದ್ಯೋಗಗಳೂ ಕಡಿತವಾಗುತ್ತಿವೆ. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಚಿನ್ನ ಮಾತ್ರ ಗಗನಮುಖಿಯಾಗುತ್ತಿದೆ. ಚಿನ್ನ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಕಡುಬಡವನಾದರೂ ಒಂದಷ್ಟು ಚಿನ್ನ ಇರಲೇಬೇಕು. ಹೀಗಾಗಿ ಚಿನ್ನದ ದರ ಏರುತ್ತಲೇ ಸಾಗಿದೆ. ಗೋಲ್ಡ್ ಮೇಲೆ ಇನ್ವೆಸ್ಟ್ ಮಾಡೋರ ಸಂಖ್ಯೆಯೂ ಕಡಿಮೆ ಏನಿಲ್ಲ. ಯಾಕಂದ್ರೆ ಹೂಡಿಕೆದಾರರಿಗೂ ಚಿನ್ನವೇ ಸಿಕ್ಕಾಪಟ್ಟೆ ಫೇವರೆಟ್. ಯಾಕಂದ್ರೆ ಹೂಡಿಕೆ ಮಾಡಿದವರ ಜೇಬಿಗೆ ಚಿನ್ನ ಎಂದೆಂದೂ ಮೋಸ […]
[lazy-load-videos-and-sticky-control id=”iK1xWN14F-0″]
ಕೊರೊನಾ ಕಾಲಿಟ್ಟಿದ್ದೇ ಇಟ್ಟಿದ್ದು, ಜಗತ್ತಿನಾದ್ಯಂತ ಪ್ರತಿಯೊಬ್ಬರೂ ಸಂಕಷ್ಟಗಳ ಸರಮಾಲೆ ಎದುರಿಸುವಂತಾಗಿದೆ. ಈ ಬೆನ್ನಲ್ಲೇ ಉದ್ಯೋಗಗಳೂ ಕಡಿತವಾಗುತ್ತಿವೆ. ಆದರೆ ಇದ್ಯಾವುದನ್ನೂ ಲೆಕ್ಕಿಸದೆ ಚಿನ್ನ ಮಾತ್ರ ಗಗನಮುಖಿಯಾಗುತ್ತಿದೆ.
ಚಿನ್ನ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಕಡುಬಡವನಾದರೂ ಒಂದಷ್ಟು ಚಿನ್ನ ಇರಲೇಬೇಕು. ಹೀಗಾಗಿ ಚಿನ್ನದ ದರ ಏರುತ್ತಲೇ ಸಾಗಿದೆ. ಗೋಲ್ಡ್ ಮೇಲೆ ಇನ್ವೆಸ್ಟ್ ಮಾಡೋರ ಸಂಖ್ಯೆಯೂ ಕಡಿಮೆ ಏನಿಲ್ಲ. ಯಾಕಂದ್ರೆ ಹೂಡಿಕೆದಾರರಿಗೂ ಚಿನ್ನವೇ ಸಿಕ್ಕಾಪಟ್ಟೆ ಫೇವರೆಟ್. ಯಾಕಂದ್ರೆ ಹೂಡಿಕೆ ಮಾಡಿದವರ ಜೇಬಿಗೆ ಚಿನ್ನ ಎಂದೆಂದೂ ಮೋಸ ಮಾಡಿಲ್ಲ. ಈಗಲೂ ಅಷ್ಟೇ ಚಿನ್ನವನ್ನು ನಂಬಿ ಹೂಡಿಕೆ ಮಾಡಿದವರಿಗೆ ಬಂಪರ್ ಲಾಭ ಸಿಕ್ಕಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ದಾಖಲೆಯ ಏರಿಕೆ! ಯೆಸ್, ಕೊರೊನಾ ಕಂಟಕದ ನಡುವೆ ಜಗತ್ತಿನ ಪ್ರತಿಯೊಂದು ವಸ್ತುವಿನ ಬೆಲೆ ಕುಸಿಯುತ್ತಿದ್ದರೆ ಚಿನ್ನ ಮಾತ್ರ ಏರಿಕೆ ಕಾಣುತ್ತಿದೆ. ಇದೇ ಮೊದಲಬಾರಿ 10 ಗ್ರಾಂ ಚಿನ್ನದ ಬೆಲೆ 50 ಸಾವಿರದ ಗಡಿ ದಾಟಿ ದಾಖಲೆ ನಿರ್ಮಿಸಿದೆ. 24 ಕ್ಯಾರೆಟ್ನ 1 ಗ್ರಾಂ ಬಂಗಾರದ ಬೆಲೆ ಬರೋಬ್ಬರಿ 5157 ರೂಪಾಯಿ ಆಗಿದೆ. ಕೊರೊನಾ ಕಾಟಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ.
ಬೆಳ್ಳಿ ದರದಲ್ಲೂ ಭಾರಿ ಏರಿಕೆ! ಅತ್ತ ಬಂಗಾರದ ದರ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದ್ದರೆ, ಇತ್ತ ಬೆಳ್ಳಿ ರೇಟ್ ಕೂಡ ಭಾರಿ ಏರಿಕೆಯನ್ನು ಕಂಡಿದೆ. ನಿನ್ನೆಯ ಹೊತ್ತಿಗೆ ಒಂದು ಕೆ.ಜಿ. ಬೆಳ್ಳಿಯ ಬೆಲೆ ಬರೋಬ್ಬರಿ 61 ಸಾವಿರ ರೂಪಾಯಿ ದಾಖಲಾಗಿದೆ. ಇದು ಕೂಡ ಹೊಸ ದಾಖಲೆಯೇ ಆಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆ ಕಾಣುವ ಮೂಲಕ ಭಾರಿ ಅಚ್ಚರಿಗೆ ಕಾರಣವಾಗಿದೆ.
24 ಕ್ಯಾರೆಟ್ ಗೋಲ್ಡ್ ಹೂಡಿಕೆದಾರರ ಕೈಯಲ್ಲಿರುವ ಹಿನ್ನೆಲೆ ಹೆಚ್ಚಿನ ಪ್ರಮಾಣದಲ್ಲಿ ಚಿನ್ನದ ಮೇಲೆ ಹೂಡಿಕೆ ನಡೆಯುತ್ತಿದೆ. ಇದರಿಂದ ಗೋಲ್ಡ್ ರೇಟ್ ಹೆಚ್ಚಳವಾಗ್ತಿದೆ. ಇದೇ ರೀತಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಾತ್ತಾ ಸಾಗಿದ್ರೆ ಭವಿಷ್ಯದಲ್ಲಿ ಚಿನ್ನದ ದರದಲ್ಲಿ ಮತ್ತೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗೋದರಲ್ಲಿ ಯಾವುದೇ ಡೌಟ್ ಇಲ್ಲ.
Published On - 11:29 am, Thu, 23 July 20