ದೆಹಲಿ: ದೇಶದ ರಾಜಧಾನಿಯಲ್ಲಿ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಈ ಮಧ್ಯೆ ನಗರದ ಹಲವೆಡೆ ನೀರು ನಿಂತು ವಾಹನಗಳು ಮುಳುಗಡೆಯಾಗಿದ್ದು ಸಹ ಕಂಡಿತ್ತು. ಆದರೆ, ಇದೀಗ ಭಾರಿ ಮಳೆಯಿಂದ ನಗರದ ಪ್ರಮುಖ ಸ್ಥಳದಲ್ಲಿರುವ ಅಶೋಕ್ ರಸ್ತೆಯ ಒಂದು ಭಾಗ ಬಾಯಿಬಿಟ್ಟಿದೆ. ರಸ್ತೆಯ ಡಾಂಬರು ಕುಸಿದು ದೊಡ್ಡ ಹಳ್ಳವೇ ಸೃಷ್ಟಿಯಾಗಿದೆ.