Covid Effect: ಮಂದಿರ ಶಿಲಾನ್ಯಾಸ ಬೇಡ, ಅಲಹಾಬಾದ್ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ
ದೆಹಲಿ: ಹಿಂದೂಗಳ ಕನಸಿನ ಮಂದಿರ, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಒಂದಲ್ಲಾ ಒಂದು ತೊಂದರೆಗಳು ಎದುರಾಗುತ್ತಲೇ ಇವೆ. ಇದೇ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನಡೆಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಆದರೆ ಈಗ ಅಯೋಧ್ಯೆ ರಾಮಮಂದಿರದ ಶಿಲಾನ್ಯಾಸದ ವಿರುದ್ಧ ಅಲಹಾಬಾದ್ ಹೈಕೋರ್ಟ್‌ನಲ್ಲಿ ದೂರು ದಾಖಲಾಗಿದೆ. ಆಗಸ್ಟ್ 5ರಂದು ನಡೆಯುವ ಶಿಲಾನ್ಯಾಸಕ್ಕೆ ತಡೆ ನೀಡುವಂತೆ ಮನವಿ ಮಾಡಲಾಗಿದೆ. ದೆಹಲಿ ಮೂಲದ ಸಾಕೇತ್ ಗೋಖಲೆ ಎಂಬುವವರು ದೂರು ನೀಡಿದ್ದು, ಶಿಲಾನ್ಯಾಸ ಮಾಡುವುದು ಅನ್ಲಾಕ್ -2 ಮಾರ್ಗಸೂಚಿಯ ಉಲ್ಲಂಘನೆಯಾಗುತ್ತೆ. ಹಾಗೂ […]
ದೆಹಲಿ: ಹಿಂದೂಗಳ ಕನಸಿನ ಮಂದಿರ, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಒಂದಲ್ಲಾ ಒಂದು ತೊಂದರೆಗಳು ಎದುರಾಗುತ್ತಲೇ ಇವೆ. ಇದೇ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನಡೆಸಲು ಸಿದ್ದತೆ ಮಾಡಿಕೊಂಡಿದ್ದಾರೆ. ಆದರೆ ಈಗ ಅಯೋಧ್ಯೆ ರಾಮಮಂದಿರದ ಶಿಲಾನ್ಯಾಸದ ವಿರುದ್ಧ ಅಲಹಾಬಾದ್ ಹೈಕೋರ್ಟ್‌ನಲ್ಲಿ ದೂರು ದಾಖಲಾಗಿದೆ.
ಆಗಸ್ಟ್ 5ರಂದು ನಡೆಯುವ ಶಿಲಾನ್ಯಾಸಕ್ಕೆ ತಡೆ ನೀಡುವಂತೆ ಮನವಿ ಮಾಡಲಾಗಿದೆ. ದೆಹಲಿ ಮೂಲದ ಸಾಕೇತ್ ಗೋಖಲೆ ಎಂಬುವವರು ದೂರು ನೀಡಿದ್ದು, ಶಿಲಾನ್ಯಾಸ ಮಾಡುವುದು ಅನ್ಲಾಕ್ -2 ಮಾರ್ಗಸೂಚಿಯ ಉಲ್ಲಂಘನೆಯಾಗುತ್ತೆ. ಹಾಗೂ ಭೂಮಿ ಪೂಜೆಯಲ್ಲಿ 300 ಜನರು ಭಾಗವಹಿಸಲಿದ್ದಾರೆ. ಇದು ಅನ್ಲಾಕ್ -2 ನಿಯಮಗಳಿಗೆ ವಿರುದ್ಧವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಭೂಮಿ ಪೂಜೆಗೆ ತಡೆ ನೀಡಬೇಕೆಂದು ಎಂದು ದೂರಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತಡೆ ಕೋರಿದ್ದ ಅರ್ಜಿ ವಜಾ ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಿಮಿತ್ತ ಆಗಸ್ಟ್ 5ರ ಕಾರ್ಯಕ್ರಮಕ್ಕೆ ತಡೆ ಕೋರಿದ್ದ ಅರ್ಜಿ ಯನ್ನು ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
Published On - 11:50 am, Fri, 24 July 20