ಕೋಲಾರ: ಅವರೆಲ್ಲ ರಸ್ತೆಗಳಲ್ಲಿ ಬೇಡಿ ಬದುಕುತ್ತಿದ್ದವರು. ಸಮಾಜದಲ್ಲಿ ಶೋಷಣೆಗೆ ಒಳಗಾಗಿ ಸದಾ ಕಣ್ಣೀರು ಹಾಕುತ್ತಿದ್ದ ಜನ. ಈ ಮಧ್ಯೆ, ಕೊರೊನಾ ಲಾಕ್ಡೌನ್, ಮಹಾಮಾರಿ ಕೊರೊನಾ ಸಾಕಷ್ಟು ಜನರಿಗೆ ಸಂಕಷ್ಟ ತಂದಿಟ್ಟಿದ್ರೆ, ಮತ್ತಷ್ಟು ಜನರಿಗೆ ಜೀವನ ಪರಿವರ್ತನೆಗೇ ದಾರಿ ಮಾಡಿಕೊಟ್ಟಿದೆ.
ಕೊರೊನಾ ಲಾಕ್ಡೌನ್ನಿಂದ ಸಾಕಷ್ಟು ತೊಂದರೆಯಾಗಿ ಅದೆಷ್ಟೋ ಜನರ ಬದುಕು ಬೀದಿಗೆ ಬಿದ್ದಿದ್ರೆ, ಅದೆಷ್ಟೋ ಲಕ್ಷಾಂತರ ಜನರು ಹಸಿವಿನಿಂದ ನರಳಿ ನೊಂದು ಬೆಂದಿದ್ದಾರೆ. ಇದರ ಮಧ್ಯೆ ಅದೆಷ್ಟೋ ಜನರ ಬದುಕಲ್ಲಿ ಪರಿವರ್ತನೆಯಾಗಿದೆ. ಅದಕ್ಕೊಂದು ಜೀವಂತ ನಿದರ್ಶನ ಅಂದ್ರೆ ಕೋಲಾರದ ಈ ಮಂಗಳಮುಖಿಯರ ಕೇಂದ್ರ.
ಸಾಮಾನ್ಯವಾಗಿ ಮಂಗಳಮುಖಿಯರು ಅಂದ್ರೆ ಸಮಾಜದಲ್ಲಿ ಅವರನ್ನು ನೋಡೋ ರೀತಿಯೇ ಬೇರೆ ಇಂಥ ಪರಿಸ್ಥಿತಿಯಲ್ಲಿರುವ ಮಂಗಳಮುಖಿಯರು ಇಂದು ಜೀವನ ನಡೆಸುವುದು ಕಷ್ಟಕರವಾಗಿದೆ. ಲಾಕ್ಡೌನ್ ನಂತರ ಅವರು ಬದುಕು ಕಟ್ಟಿಕೊಳ್ಳುವುದು ದುಃಸ್ಥರವಾಗಿದೆ. ಪ್ರತಿ ದಿನ ಬಸ್ ನಿಲ್ದಾಣ, ಜನಸಂದಣಿ ಇರುವ ಪ್ರದೇಶದಲ್ಲಿ ಮತ್ತು ಸಂತೆ ನಡೆಯುವ ಕಡೆ ಓಡಾಡಿ ಒಂದಿಷ್ಟು ಹಣ ಬೇಡಿ ಜೀವನ ನಡೆಸುತ್ತಿದ್ದವರು. ಆದ್ರೆ ಇಂಥ ಲಾಕ್ಡೌನ್ ನಿಂದ ಇಡೀ ದೇಶವೇ ಸ್ಥಬ್ದವಾದಾಗ ಇಂಥವರ ಬದುಕು ಹೇಗಿರಬಹುದು ಎಂಬುದನ್ನು ಊಹೆ ಮಾಡಿಕೊಳ್ಳೋದೂ ಕಷ್ಟ.
ಲಾಕ್ಡೌನ್ ಸಂದರ್ಭದಲ್ಲಿ ಈ ಮಂಗಳಮುಖಿಯರು ಮಾಡಿದ್ದೇನು?
ಕಳೆದ ನವೆಂಬರ್ನಲ್ಲಿ ಆರಂಭ ಮಾಡಿದ ಸಂಕಲ್ಪ ಟ್ರಸ್ಟ್ ಮೂಲಕ ಇವರಿಗೆ ಸಾಲ ಸೌಲಭ್ಯ ಕೂಡಾ ಸಿಕ್ಕಿದ್ದು, ಅದರಲ್ಲಿ ಹೈನುಗಾರಿಕೆ ಆರಂಭ ಮಾಡಿದ್ದಾರೆ. ಈಗಾಗಲೇ ಇವರು ಹಸು, ಕರು, ಎಮ್ಮೆಗಳನ್ನು ಸಾಕಿಕೊಂಡಿದ್ದಾರೆ. ಬರುವ ಹಾಲನ್ನು ಡೈರಿಗೆ ಹಾಗೂ ಹೋಟೆಲ್ಗಳಿಗೆ ಹಾಕಿ ತಮ್ಮ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಈ ಮೂಲಕ ಇನ್ನಷ್ಟು ದೊಡ್ಡ ಮಟ್ಟದ ಕನಸುಗಳನ್ನು ಕಾಣುತ್ತಿದ್ದಾರೆ. ಸರ್ಕಾರದಿಂದ ಕೆಲವು ಸೌಲಭ್ಯಗಳ ನಿರೀಕ್ಷೆಯಲ್ಲಿರುವ ಇವರು ತಮ್ಮದೇ ಸಂಕಲ್ಪ ಬ್ರಾಂಡ್ನಲ್ಲಿ ಹಾಲಿನ ಉತ್ಪನ್ನಗಳನ್ನು ತಯಾರು ಮಾಡಿ ದೇಶದ ಗಮನ ಸೆಳೆಯುವ ಕನಸು ಕಟ್ಟಿಕೊಂಡಿದ್ದಾರೆ.
ಲಾಕ್ಡೌನ್ ನಲ್ಲಿ ಇವರನ್ನು ನೋಡಿ ಬದಲಾದವರು ಹಲವು ಜನ!
ಲಾಕ್ಡೌನ್ನಿಂದ ಎಲ್ಲವೂ ಬಂದ್ ಆಗಿ ಹೋಗಿತ್ತು. ಹೆದ್ದಾರಿ ಬಂದ್ ಆಗಿತ್ತು. ಸಭೆ ಸಮಾರಂಭಗಳಿರಲಿಲ್ಲ, ಜಾತ್ರಗಳಿಲ್ಲ, ಜನರ ಓಡಾಟವೇ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಭಿಕ್ಷೆ ಬೇಡಿ ತಿನ್ನುತ್ತಿದ್ದ ಈ ಸಮುದಾಯದ ಅದೆಷ್ಟೋ ಜನರು ಇವರ ಬಳಿ ಬಂದು ಸ್ವಾವಲಂಭಿ ಬದುಕಿಗೆ ಸೇರಿಕೊಂಡಿದ್ದಾರೆ. ಇಬ್ಬರಿಂದ ಆರಂಭವಾದ ಈ ಮನೆಯಲ್ಲಿ ಇಂದು ಹತ್ತು ಜನರಿದ್ದಾರೆ. ಲಾಕ್ಡೌನ್ನಿಂದ ಸಂಕಷ್ಟದಲ್ಲಿದ್ದ ಅದೆಷ್ಟೋ ಮಂಗಳಮುಖಿಯರು ಇವರ ಆಶ್ರಯದಲ್ಲಿ ನೆಮ್ಮದಿಯ ಹಾಗೂ ಸ್ವಾವಲಂಭಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇವರನ್ನು ಕೀಳಾಗಿ ಕಾಣುತ್ತಿದ್ದವರ ಮುಂದೆ ಇವರೇ ತಲೆಎತ್ತಿ ಬದುಕುವಷ್ಟು ಉತ್ಸಾಹ ಇವರಲ್ಲಿ ಮೂಡಿದೆ.
ಇದೆಲ್ಲವೂ ಒಂದೇ ದಿನದಲ್ಲಿ ಆಗಲಿಲ್ಲ ಸಾಕಷ್ಟು ದಿನ ಇವರ ಮನ ಪರಿವರ್ತನೆ, ಕೌನ್ಸಿಲಿಂಗ್ ಮಾಡಿಸಿ ಅವರನ್ನು ಇಂಥ ಬದುಕಿಗೆ ಕರೆತರಲಾಗಿದೆ. ಹಾಗಾಗಿ ಈಗ ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಲ್ಲೂ ಕೂಡಾ ನೂರಾರು ಜನ ಮಂಗಳಮುಖಿಯರು ಈ ರೀತಿ ಬದುಕು ನಡೆಸಲು ಮುಂದಾಗಿದ್ದಾರೆ ಅನ್ನೋದು ಅಶ್ವಿನಿ ರಾಜನ್ ಮಾತು.
ಸ್ವಾವಲಂಭಿ ಬದುಕಲ್ಲಿ ನೆಮ್ಮದಿ ಕಾಣುತ್ತಿರುವ ಮಂಗಳ ಮುಖಿಯರು:
Published On - 4:30 pm, Wed, 3 June 20