ರಾಯಚೂರಿನ ಕೊವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಂದ ಗಲಾಟೆ, ಸಿಬ್ಬಂದಿ ಜೊತೆ ವಾಗ್ವಾದ
ರಾಯಚೂರು: ಕೊವಿಡ್ ಆಸ್ಪತ್ರೆಯಲ್ಲಿ ಸೋಂಕಿತರು ಗಲಾಟೆ, ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ ಘಟನೆ ನಗರದ ಓಪೆಕ್ ಕೊವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಕೊರೊನಾ ಚಿಕಿತ್ಸೆಗಾಗಿ ದಾಖಲಾಗಿ ಒಂದು ತಿಂಗಳು ಕಳೆದರೂ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಸೋಂಕಿತರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರಿನಲ್ಲಿರುವ ಓಪೆಕ್ ಕೊವಿಡ್ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗಾಗಿ ಬಂದ ಕೆಲವರನ್ನು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷಿಸುತ್ತಿದ್ದಾರಂತೆ. ಆಸ್ಪತ್ರೆಯಲ್ಲಿ ಸಾಮಾಜಿಕ ಅಂತರವೂ ಕಾಪಾಡ್ತಿಲ್ಲ. ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ. ಹಾಗೂ ಪಾಸಿಟಿವ್ ಪತ್ತೆಯಾದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ […]
ರಾಯಚೂರು: ಕೊವಿಡ್ ಆಸ್ಪತ್ರೆಯಲ್ಲಿ ಸೋಂಕಿತರು ಗಲಾಟೆ, ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ ಘಟನೆ ನಗರದ ಓಪೆಕ್ ಕೊವಿಡ್ ಆಸ್ಪತ್ರೆಯಲ್ಲಿ ನಡೆದಿದೆ. ಕೊರೊನಾ ಚಿಕಿತ್ಸೆಗಾಗಿ ದಾಖಲಾಗಿ ಒಂದು ತಿಂಗಳು ಕಳೆದರೂ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಸೋಂಕಿತರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಚೂರಿನಲ್ಲಿರುವ ಓಪೆಕ್ ಕೊವಿಡ್ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆಗಾಗಿ ಬಂದ ಕೆಲವರನ್ನು ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷಿಸುತ್ತಿದ್ದಾರಂತೆ. ಆಸ್ಪತ್ರೆಯಲ್ಲಿ ಸಾಮಾಜಿಕ ಅಂತರವೂ ಕಾಪಾಡ್ತಿಲ್ಲ. ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಸೋಂಕಿತರು ಆರೋಪಿಸಿದ್ದಾರೆ. ಹಾಗೂ ಪಾಸಿಟಿವ್ ಪತ್ತೆಯಾದವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಆದರೆ ಕೆಲವರಿಗೆ ಒಂದು ತಿಂಗಳಿಂದಲೂ ಚಿಕಿತ್ಸೆ ನೀಡುತ್ತಿದ್ರು ಇನ್ನು ಬಿಡುಗಡೆ ಭಾಗ್ಯ ಮಾತ್ರ ಸಿಕ್ಕಿಲ್ಲ. ಚಿಕಿತ್ಸೆ ನೀಡುದ್ರೂ ರೋಗಿಗಳು ಗುಣಮುಖರಾಗುತ್ತಿಲ್ಲವಾ ಎಂಬ ಪ್ರಶ್ನೆ ಆತಂಕ ಹುಟ್ಟಿಸ್ತಿದೆ. ಈಗಾಗಲೇ ಆಸ್ಪತ್ರೆಯ ನಾಲ್ಕು ನರ್ಸ್ ಮತ್ತು ಇಬ್ಬರು ಅಟೆಂಡರ್ಸ್ಗೆ ವೈರಸ್ ಹಬ್ಬಿದೆ. ಹೀಗಾಗಿ ಸಿಬ್ಬಂದಿಗಳಲ್ಲೂ ಆತಂಕ ಸೃಷ್ಟಿಯಾಗಿದೆ.
Published On - 8:42 am, Fri, 12 June 20