
ಬಳ್ಳಾರಿ: ಕೋವಿಡ್ ಟೆಸ್ಟ್ಗೆ ಸಾಲಿನಲ್ಲಿ ನಿಂತಿದ್ದ ವೃದ್ಧ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆಯ ತೋರಣಗಲ್ಲಿನ ಒಪಿಜಿ ಸೆಂಟರ್ನಲ್ಲಿ ನಡೆದಿದೆ.
ಕೋವಿಡ್ ಟೆಸ್ಟ್ಗೆ ಬಂದಿದ್ದ ವೃದ್ಧನಿಗೆ58 ವರ್ಷ ವಯಸ್ಸಾಗಿತ್ತು. ತೋರಣಗಲ್ಲಿನ ಕಂಟೈನ್ಮೆಂಟ್ ಪ್ರದೇಶದಲ್ಲಿ ವಾಸವಾಗಿದ್ದ ವೃದ್ಧ ಶೀತ ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಆಸ್ಪತ್ರೆಗೆ ಕೊರೊನಾ ಟೆಸ್ಟ್ಗಾಗಿ ಬಂದಾಗ ಸರತಿ ಸಾಲಿನಲ್ಲಿ ನಿಂತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಬಳಿಕ ಆ್ಯಂಟಿಜನ್ ಕಿಟ್ ಮೂಲಕ ಪರೀಕ್ಷೆ ಮಾಡಿದಾಗ ವೃದ್ಧನಿಗೆ ಕೊರೊನಾ ಸೋಂಕು ಇರುವುದು ಧೃಡವಾಗಿದೆ. ಮೃತ ದೇಹವನ್ನ ಸಂಬಂಧಿಗಳಿಗೆ ನೀಡದೆ ಎಸ್ಒಪಿ ನಿಯಮದ ಪ್ರಕಾರ ಆರೋಗ್ಯ ಇಲಾಖೆ ಅಂತ್ಯಸಂಸ್ಕಾರ ಮಾಡಿದೆ.
Published On - 9:20 am, Thu, 23 July 20