ಬೆಂಗಳೂರು: ರಾಜಧಾನಿಯಲ್ಲಿ ನಟೋರಿಯಸ್ ರೌಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಖಾಕಿ ಪಡೆ ಇದೀಗ ಮತ್ತಷ್ಟು ರೌಡಿಗಳನ್ನ ಬಂಧಿಸಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ ಸಿಸಿಬಿ ಪೊಲೀಸರು ಇಂದು RX ರವಿ ಮತ್ತು ಆತನ ಗ್ಯಾಂಗ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ದರೋಡೆಗೆ ಸಂಚು ರೂಪಿಸಿದ್ದ ರವಿ ಹಾಗೂ ಆತನ ಸಹಚರರಾದ ಶರತ್ ಬಾಬು, ದೀಪಕ್ ಕುಮಾರ್ ಸೇರಿ ಆರು ಜನರನ್ನು ಅರೆಸ್ಟ್ ಮಾಡಿದ್ದಾರೆ. ಸೂಕ್ತ ಮಾಹಿತಿ ಆಧರಿಸಿ ಆರೋಪಿಗಳನ್ನ ಬಂಧಿಸಿದ CCB ಪೊಲೀಸರು ಅವರಿಂದ ಮೂರು ಲಾಂಗು, ಚಾಕು ಹಾಗೂ ಒಂದು ಖಾರದ ಪುಡಿ ಪೊಟ್ಟಣವನ್ನ ವಶಕ್ಕೆ ಪಡೆದಿದ್ದಾರೆ.
ಜೊತೆಗೆ ಕೃತ್ಯಕ್ಕೆ ಬಳಸಲು ಸಜ್ಜಾಗಿಸಿದ್ದ ವಾಹನವೊಂದನ್ನು ಸಹ ಸೀಜ್ ಮಾಡಿದ್ದಾರೆ. RX ರವಿ ಗ್ಯಾಂಗ್ ರಸ್ತೆಯಲ್ಲಿ ಬರೋರನ್ನು ತಡೆದು ದರೋಡೆ ಮಾಡಲು ಸ್ಕೆಚ್ ಹಾಕಿದ್ರಂತೆ. ಜೊತೆಗೆ, ಆರೋಪಿಗಳ ವಿರುದ್ಧ ನಗರದ ಬೇರೆ ಬೇರೆ ಠಾಣೆಗಳಲ್ಲಿ ಪ್ರಕರಣ ಸಹ ದಾಖಲಾಗಿತ್ತು.