ಮೈಸೂರು: ವಿಶ್ವವನ್ನು ನರಳುವಂತೆ ಮಾಡಿದ ಕಿಲ್ಲರ್ ಕೊರೊನಾಗೆ ಇನ್ನೆರಡು ತಿಂಗಳಲ್ಲಿ ವ್ಯಾಕ್ಸಿನ್ ಬರುತ್ತದೆ ಎಂದು ವಿಜ್ಞಾನಿ ಪ್ರೊ. ಕೆ.ಎಸ್.ರಂಗಪ್ಪ ತಿಳಿಸಿದ್ದಾರೆ. ಈ ಹಿಂದೆ ವ್ಯಾಕ್ಸಿನ್ ಕಂಡುಹಿಡಿಯಲು 2 ವರ್ಷವಾಗುತ್ತಿತ್ತು. ಆದರೆ ಕೊರೊನಾಗೆ ಮೊದಲ ದಿನದಿಂದಲೇ ಸಂಶೋಧನೆ ಶುರುವಾಗಿತ್ತು. ಸುಮಾರು 6 ಸಾವಿರ ಜನರಿಂದ ಸಂಶೋಧನೆ ನಡೆಸಲಾಗುತ್ತಿದೆ ಎಂದಿದ್ದಾರೆ.
ಎಡ್ವರ್ಡ್ ಜೆನ್ನರ್ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ನಡೆಯುತ್ತಿದೆ. ಈಗಾಗಲೇ ಹಲವರಿಗೆ ವ್ಯಾಕ್ಸಿನ್ ಪ್ರಯೋಗಿಸಲಾಗಿದೆ. ಗಾಳಿ, ನೀರಿನ ಮೂಲಕ ಕೊರೊನಾ ಸೋಂಕು ಹರಡಲ್ಲ. ಕೇವಲ ಕೊರೊನಾ ಸೋಂಕಿನಿಂದಲೇ ಜನರು ಸಾಯುತ್ತಿಲ್ಲ. ಬೇರೆ ಬೇರೆ ಆರೋಗ್ಯದ ಸಮಸ್ಯೆಯಿಂದ ಸಾಯುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
2 ಸಾವಿರಕ್ಕಿಂತ ಕಡಿಮೆ ದರಕ್ಕೆ ಕೊವಿಡ್‌ಗೆ ವ್ಯಾಕ್ಸಿನ್:
ಇನ್ನು 2 ಸಾವಿರಕ್ಕಿಂತ ಕಡಿಮೆ ದರಕ್ಕೆ ಕೊವಿಡ್‌ಗೆ ವ್ಯಾಕ್ಸಿನ್ ಸಿಗಲಿದೆ. ಕೊರೊನಾ ವೈರಸ್ ಪ್ರಾಣಿಗಳಿಂದ ಬಂದಿದೆ ಎಂದು ದೃಢಪಟ್ಟಿದೆ. ಆದರೆ ಇದು ಮ್ಯಾನ್ ಮೇಡ್ ಎಂದು ಹೇಳಲು ಸಾಧ್ಯವಿಲ್ಲ. ಚೀನಾದ ಲ್ಯಾಬ್‌ನಿಂದ ಹೊರ ಬಂದಿದ್ದು ಅಪರಾಧ. ಚೀನಾದಲ್ಲಿರುವ ವಿಜ್ಞಾನಿಗಳಲ್ಲಿ ಅಮೆರಿಕದವರೇ ಹೆಚ್ಚಿದ್ದಾರೆ. ಭಾರತ, ಚೀನಾ ಗಡಿ ವಿವಾದ ಹಿನ್ನೆಲೆಯಲ್ಲಿ 500 ಕೋಟಿ ರೂಪಾಯಿಯ ಪ್ರಾಜೆಕ್ಟ್ ಅರ್ಧಕ್ಕೆ ನಿಂತಿದೆ. ಕ್ಯಾನ್ಸರ್ ಸಂಬಂಧಿತ ಸಂಶೊಧನೆಗೆ ಚೀನಾ ಜತೆ ಒಡಂಬಡಿಕೆ. ಸದ್ಯ ತಾತ್ಕಾಲಿಕವಾಗಿ ಅದನ್ನು ಸ್ಥಗಿತಗೊಳಿಸಲಾಗಿದೆ. ಕೇಂದ್ರ ಹೇಳಿದರೆ ನಾನು ಮುಂದೆಯೂ ಅದನ್ನು ಮಾಡಲ್ಲ ಎಂದಿದ್ದಾರೆ.