ತೋಟದ ಮನೆಯಲ್ಲಿದ್ದ ಮೂವರಿಗೆ ಕೊರೊನಾ, ತತ್ತರಿಸಿದೆ ಬೆಳಗಾವಿ ಜಿಲ್ಲೆ
ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ 36 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ಮಧ್ಯೆ ಜಿಲ್ಲೆಯಿಂದ ಮತ್ತೊಂದು ಆತಂಕಕಾರಿ ಸುದ್ದಿ ಬಂದಿದೆ. ಅಕ್ಷರಶಃ ಗ್ರೀನ್ ಜೋನ್ನಲ್ಲಿ ತೋಟದ ಮನೆಯಲ್ಲಿದ್ದ ಮೂವರಿಗೂ ಕೊರೊನಾ ಸೋಂಕು ಹರಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. ಕುಡಚಿ ಪಟ್ಟಣದ ತೋಟದ ಮನೆಯಲ್ಲಿ ವಾಸವಿದ್ದ ಮೂವರಿಗೆ ಕೊರೊನಾ ಸೋಂಕು ಹತ್ತಿದೆ. ಅಣ್ಣ 55 ವರ್ಷದ ಪಿ.574, ತಮ್ಮ 50 ವರ್ಷದ ಪಿ.576, ಅಣ್ಣನ ಮಗಳು 30 […]
ಬೆಳಗಾವಿ: ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ 36 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಈ ಮಧ್ಯೆ ಜಿಲ್ಲೆಯಿಂದ ಮತ್ತೊಂದು ಆತಂಕಕಾರಿ ಸುದ್ದಿ ಬಂದಿದೆ. ಅಕ್ಷರಶಃ ಗ್ರೀನ್ ಜೋನ್ನಲ್ಲಿ ತೋಟದ ಮನೆಯಲ್ಲಿದ್ದ ಮೂವರಿಗೂ ಕೊರೊನಾ ಸೋಂಕು ಹರಡಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಪೀಡಿತರ ಸಂಖ್ಯೆ 70ಕ್ಕೆ ಏರಿಕೆಯಾಗಿದೆ.
ಕುಡಚಿ ಪಟ್ಟಣದ ತೋಟದ ಮನೆಯಲ್ಲಿ ವಾಸವಿದ್ದ ಮೂವರಿಗೆ ಕೊರೊನಾ ಸೋಂಕು ಹತ್ತಿದೆ. ಅಣ್ಣ 55 ವರ್ಷದ ಪಿ.574, ತಮ್ಮ 50 ವರ್ಷದ ಪಿ.576, ಅಣ್ಣನ ಮಗಳು 30 ವರ್ಷದ ಮಹಿಳೆ ಪಿ.575 ಇವರಿಗೆ ಕೊರೊನಾ ಸೋಂಕು ಬಂದಿದೆ. ಆರೋಗ್ಯ ಸಿಬ್ಬಂದಿ ಸೋಂಕಿತರಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಜಿಲ್ಲೆಯ 301ನೇ ಸೋಂಕಿತನ ದ್ವಿತೀಯ ಸಂಪರ್ಕದಿಂದ ಕೊರೊನಾ ಬಂದಿರುವ ಸಾಧ್ಯತೆಯಿದೆ. ಆದ್ರೆ ಈತನಿಗೂ ಇಂದು ಸೋಂಕು ದೃಢಪಟ್ಟವರಿಗೂ ನೇರ ಸಂಬಂಧವಿಲ್ಲ.
Published On - 2:22 pm, Fri, 1 May 20