Corona Vaccine ವ್ಯಾಕ್ಸಿನ್ ಪಡೆಯಲು ವಾರಿಯರ್ಸ್​ಗಳಿಂದಲೇ ಹಿಂದೇಟು.. ಕೊರೊನಾಗಿಂತ ವ್ಯಾಕ್ಸಿನ್​ನಿಂದಲೇ ಹೆಚ್ಚುತ್ತಿದೆಯಾ ಭಯ?

|

Updated on: Feb 11, 2021 | 7:56 AM

Corona Warriors Step Back to Take Corona Vaccine | ದಾವಣಗೆರೆಗೆ 22,200 ಕೊವಿಶೀಲ್ಡ್ ಹಾಗೂ 720 ಕೊವ್ಯಾಕ್ಸಿನ್ ಲಸಿಕೆ ತರಿಸಲಾಗಿತ್ತು. ಲಸಿಕೆ ನೀಡಲು 21,369 ಜನ ಕೊರೊನಾ ವಾರಿಯರ್​ಗಳನ್ನ ಗುರುರ್ತಿಸಲಾಗಿತ್ತು. ಇವರಲ್ಲಿ 9533 ಜನ ಮಾತ್ರ ಲಸಿಕೆ ಪಡೆದಿದ್ದು, ಉಳಿದ 11,836 ಜನ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದೇ ಇಲ್ಲಾ.

Corona Vaccine ವ್ಯಾಕ್ಸಿನ್ ಪಡೆಯಲು ವಾರಿಯರ್ಸ್​ಗಳಿಂದಲೇ ಹಿಂದೇಟು.. ಕೊರೊನಾಗಿಂತ ವ್ಯಾಕ್ಸಿನ್​ನಿಂದಲೇ ಹೆಚ್ಚುತ್ತಿದೆಯಾ ಭಯ?
ಕೊರೊನಾ ಲಸಿಕೆ
Follow us on

ದಾವಣಗೆರೆ: ಮಹಾಮಾರಿ ಕೊರೊನಾಗೆ ಈಗಾಗಲೇ ಔಷಧಿ ಕಂಡು ಹಿಡಿದಿದ್ದಾರೆ. ಆದ್ರೆ, ಔಷಧಿ ಕಂಡು ಹಿಡಿದಿದ್ರೂ, ವ್ಯಾಕ್ಸಿನ್ ಪಡೆಯಲು ಜನ ಮುಂದಾಗ್ತಿಲ್ಲ. ದಾವಣಗೆರೆ ಜಿಲ್ಲೆಯಲ್ಲಿ 22,336 ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಮಹಾಮಾರಿಗೆ 263 ಜನ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಕಾಲ ಬದಲಾಗಿದೆ. ಕೊರೊನಾ ವೈರಸ್ ಹಾವಳಿ ತಗ್ಗಿದೆ. ಜೊತೆಗೆ ಔಷಧಿ ಕೂಡ ಸಿಕ್ಕಿದೆ. ಹೀಗಿದ್ರೂ, ಜನ ಔಷಧಿ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ವಿಶೇಷವಾಗಿ ಕೊವಿಡ್ ವಾರಿಯರ್​ಗಳೇ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕ್ತಿರೋದು ಅಚ್ಚರಿಯ ವಿಚಾರ. ಇದೇ ಕಾರಣಕ್ಕೆ ಪೂರ್ವ ವಲಯ ಐಜಿಪಿ ರವಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್​ಪಿ ಹನುಮಂತರಾಯ ಜನರಲ್ಲಿ ಜಾಗೃತಿ ಮೂಡಿಸಲು ತಾವೇ ಲಸಿಕೆ ಹಾಕಿಸಿಕೊಂಡು ಜನರಿಗೆ ಧೈರ್ಯ ತುಂಬಿದ್ರು.

ದಾವಣಗೆರೆಗೆ 22,200 ಕೊವಿಶೀಲ್ಡ್ ಹಾಗೂ 720 ಕೊವ್ಯಾಕ್ಸಿನ್ ಲಸಿಕೆ ತರಿಸಲಾಗಿತ್ತು. ಲಸಿಕೆ ನೀಡಲು 21,369 ಜನ ಕೊರೊನಾ ವಾರಿಯರ್​ಗಳನ್ನ ಗುರುರ್ತಿಸಲಾಗಿತ್ತು. ಇವರಲ್ಲಿ 9533 ಜನ ಮಾತ್ರ ಲಸಿಕೆ ಪಡೆದಿದ್ದು, ಉಳಿದ 11,836 ಜನ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬಂದೇ ಇಲ್ಲಾ. ಕೇಳಿದ್ರೆ ನಮಗೆ ಕೊರೊನಾ ಬಂದಿಲ್ಲ. ನಮಗ್ಯಾಕೆ ಲಸಿಕೆ ಅಂತಿದ್ದಾರೆ. ಇದೇ ಕಾರಣಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಎಲ್ಲ ಪೊಲೀಸ್ ಸಿಬ್ಬಂದಿಗೆ ಲಸಿಕೆ ಹಾಕಿಸಲು ಮುಂದಾಗಿದ್ದಾರೆ

ಕೆಲ ತಿಂಗಳ ಹಿಂದೆ ಸಾವಿನ ಭಯದಿಂದ ಜನ ಮನೆ ಬಿಟ್ಟು ಹೊರಗೆ ಬರುತ್ತಿರಲಿಲ್ಲ. ಭಯ ದೂರ ಮಾಡಲು ವಿಜ್ಞಾನಿಗಳು ಹಗಲು ರಾತ್ರಿ ಎನ್ನದೆ ಔಷಧಿ ಕಂಡು ಹಿಡಿದ್ರು. ಈಗ ಔಷಧಿ ಪಡೆಯಲು ಕೊರೊನಾ ವಾರಿಯರ್​ಗಳು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಜನಸಾಮಾನ್ಯರು ಲಸಿಕೆ ಬಗ್ಗೆ ಹೇಗೆ ನಂಬಿಕೆ ಇಡ್ತಾರೆ ಅನ್ನೋ ಪ್ರಶ್ನೆ ಎದುರಾಗಿದೆ.

ಇದನ್ನೂ ಓದಿ: ದಾವಣಗೆರೆ: ಸೋಂಕಿನ ವಿರುದ್ಧದ ಹೋರಾಟದಲ್ಲಿ ಕೊನೆಯುಸಿರೆಳೆದ ಕೊರೊನಾ ವಾರಿಯರ್

Published On - 7:34 am, Thu, 11 February 21