ಡೆಡ್ಲಿ ವೈರಸ್ ದಾಳಿಗೆ ಕರುನಾಡು ವಿಲವಿಲ, ಬೆಣ್ಣೆನಗರಿಯಲ್ಲಿ ಸೋಂಕಿಗೆ ಮೊದಲ ಬಲಿ!

ದಾವಣಗೆರೆ: ಕಂಡ ಕಂಡವರ ದೇಹ ಹೊಕ್ಕುತ್ತಾ.. ಅಮಾಯಕರ ಪ್ರಾಣ ತೆಗೆದು ರಣಕೇಕೆ ಹಾಕುತ್ತಿರೋ ಕೊರೊನಾ ಆರ್ಭಟಕ್ಕೆ ರಾಜ್ಯದಲ್ಲಿ ಕಮ್ಮಿಯಾಗೋ ಲಕ್ಷಣವೇ ಕಾಣುತ್ತಿಲ್ಲ. ರಕ್ಕಸ ವೃರಸ್ ಕುಣಿತಕ್ಕೆ ಕರುನಾಡಿಗೆ ಕರುನಾಡೇ ನಲುಗಿ ಹೋಗಿದೆ. ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದ್ದು, ಮೃತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ 556ನೇ ಸೋಂಕಿತ 69 ವರ್ಷದ ವೃದ್ಧ ಮೃತಪಟ್ಟಿದ್ದಾನೆ. ಇದು ರಾಜ್ಯದ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ ಬೆಣ್ಣೆನಗರಿಯಲ್ಲಿ ಮೊದಲ ಬಲಿ..! ನಿನ್ನೆ ಮೃತಪಟ್ಟ ವೃದ್ಧನಿಗೆ ಮೊನ್ನೆ […]

ಡೆಡ್ಲಿ ವೈರಸ್ ದಾಳಿಗೆ ಕರುನಾಡು ವಿಲವಿಲ, ಬೆಣ್ಣೆನಗರಿಯಲ್ಲಿ ಸೋಂಕಿಗೆ ಮೊದಲ ಬಲಿ!

Updated on: May 02, 2020 | 7:27 AM

ದಾವಣಗೆರೆ: ಕಂಡ ಕಂಡವರ ದೇಹ ಹೊಕ್ಕುತ್ತಾ.. ಅಮಾಯಕರ ಪ್ರಾಣ ತೆಗೆದು ರಣಕೇಕೆ ಹಾಕುತ್ತಿರೋ ಕೊರೊನಾ ಆರ್ಭಟಕ್ಕೆ ರಾಜ್ಯದಲ್ಲಿ ಕಮ್ಮಿಯಾಗೋ ಲಕ್ಷಣವೇ ಕಾಣುತ್ತಿಲ್ಲ. ರಕ್ಕಸ ವೃರಸ್ ಕುಣಿತಕ್ಕೆ ಕರುನಾಡಿಗೆ ಕರುನಾಡೇ ನಲುಗಿ ಹೋಗಿದೆ.

ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದ್ದು, ಮೃತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ 556ನೇ ಸೋಂಕಿತ 69 ವರ್ಷದ ವೃದ್ಧ ಮೃತಪಟ್ಟಿದ್ದಾನೆ. ಇದು ರಾಜ್ಯದ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ

ಬೆಣ್ಣೆನಗರಿಯಲ್ಲಿ ಮೊದಲ ಬಲಿ..!
ನಿನ್ನೆ ಮೃತಪಟ್ಟ ವೃದ್ಧನಿಗೆ ಮೊನ್ನೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಮೃತ ವೃದ್ಧ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಮೃತನ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದಕ್ಕೆ ಜಿಲ್ಲಾಡಳಿತಕ್ಕೆ ಟೆನ್ಷನ್‌ ಆಗಿದೆ. ಸೋಂಕು ಯಾರಿಂದ ತಗುಲಿದೆ ಎಂಬುದು ಇನ್ನೂ ನಿಗೂಢವಾಗಿದೆ.ಇನ್ನು ನಿನ್ನೆ ಈ ವೃದ್ಧನ ಐವರು ಕುಟುಂಬಸ್ಥರಿಗೆ ಸೋಂಕು‌ ಇರೋದು ಪತ್ತೆಯಾಗಿದ್ದು, ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿದೆ.

ಒಟ್ನಲ್ಲಿ ಕರ್ನಾಟಕದಲ್ಲಿ ಹೆಮ್ಮಾರಿ ಕೊರೊನಾ ಡೆಡ್ಲಿ ಅಟ್ಯಾಕ್ ಮಾಡುತ್ತಿದ್ದು, ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಅದರಲ್ಲೂ ಗ್ರೀನ್‌ಜೋನ್‌ನಲ್ಲಿದ್ದ ದಾವಣಗೆರೆಯಲ್ಲಿ ಸಾಕಷ್ಟು ಆತಂಕ ಮನೆ ಮಾಡಿದ್ದು, ನಿನ್ನೆಯ ಒಂದು ಸಾವು ಜಿಲ್ಲೆಯ ಜನರ ಜನರನ್ನ ಬೆಚ್ಚಿ ಬೀಳಿಸಿದೆ.

ಹೀಗಾಗಿ ರಾಜ್ಯದ ಜನ ಲಾಕ್‌ಡೌನ್ ಸಡಿಲಿಕೆ ಆಯ್ತು ಅಂತ ನಿರ್ಲಕ್ಷ್ಯ ಮಾಡದೆ ಸಾಕಷ್ಟು ಎಚ್ಚರ ವಹಿಸಬೇಕಿದೆ. ನೀವು ಈ ವಿಷ್ಯದಲ್ಲಿ ಸ್ವಲ್ಪ ನಿರ್ಲಕ್ಷ್ಯ ಮಾಡಿದ್ರೆ ಕಂಟಕ ಗ್ಯಾರಂಟಿ.