AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಸಂಕಷ್ಟ: ಮಗುವಿಗೆ ಜನ್ಮ ನೀಡಿದ್ರು ನೋಡುವ ಭಾಗ್ಯ ಇಲ್ಲ ಹಡೆದ ತಾಯಿಗೆ

ಗದಗ: ಕೊರೊನಾ ತಂದ ಸಂಕಷ್ಟ ಒಂದಾ.. ಎರಡಾ.. ಕಣ್ಣಿಗೆ ಕಾಣದ ಈ ಚಿಕ್ಕ ವೈರಸ್ ಬಹಳಷ್ಟು ಬದಲಾಯಿಸಿದೆ. ಹೆತ್ತ ಮಗುವನ್ನು ತಾಯಿಯಿಂದ ದೂರ ಮಾಡಿದೆ. ಹೆತ್ತ ಮಗುವನ್ನು ನೋಡಲಾಗದೆ ತಾಯಿ ಕಣ್ಣೀರು ಹಾಕುವಂತಹ ಪರಿಸ್ಥಿತಿಯನ್ನು ತಂದೊಡ್ಡಿದೆ. ಕರುಳು ಹಿಂಡುವಂತಿದೆ ತಾಯಿಯ ರೋಧನೆ ಕಥೆ. ಗದಗ ಜಿಮ್ಸ್‌ನಲ್ಲಿ ಕೊರೊನಾ ಸೋಂಕಿತೆ ಮಗುವಿಗೆ ಜನ್ಮ ನೀಡಿದ್ರು. ಶಸ್ತ್ರಚಿಕಿತ್ಸೆ ಮಾಡಿ ಜಿಮ್ಸ್ ವೈದ್ಯರ ತಂಡ ಹೆರಿಗೆ ಮಾಡಿಸಿದ್ದರು. ಆಗ ತಾನೆ ಜನಿಸಿದ ಮಗುವಿಗೆ ಉಸಿರಾಟ ಸಮಸ್ಯೆ ಕಂಡುಬಂತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ […]

ಕೊರೊನಾ ಸಂಕಷ್ಟ: ಮಗುವಿಗೆ ಜನ್ಮ ನೀಡಿದ್ರು ನೋಡುವ ಭಾಗ್ಯ ಇಲ್ಲ ಹಡೆದ ತಾಯಿಗೆ
ಆಯೇಷಾ ಬಾನು
ಆಯೇಷಾ ಬಾನು|

Updated on: Jul 06, 2020 | 9:01 AM

Share

ಗದಗ: ಕೊರೊನಾ ತಂದ ಸಂಕಷ್ಟ ಒಂದಾ.. ಎರಡಾ.. ಕಣ್ಣಿಗೆ ಕಾಣದ ಈ ಚಿಕ್ಕ ವೈರಸ್ ಬಹಳಷ್ಟು ಬದಲಾಯಿಸಿದೆ. ಹೆತ್ತ ಮಗುವನ್ನು ತಾಯಿಯಿಂದ ದೂರ ಮಾಡಿದೆ. ಹೆತ್ತ ಮಗುವನ್ನು ನೋಡಲಾಗದೆ ತಾಯಿ ಕಣ್ಣೀರು ಹಾಕುವಂತಹ ಪರಿಸ್ಥಿತಿಯನ್ನು ತಂದೊಡ್ಡಿದೆ. ಕರುಳು ಹಿಂಡುವಂತಿದೆ ತಾಯಿಯ ರೋಧನೆ ಕಥೆ.

ಗದಗ ಜಿಮ್ಸ್‌ನಲ್ಲಿ ಕೊರೊನಾ ಸೋಂಕಿತೆ ಮಗುವಿಗೆ ಜನ್ಮ ನೀಡಿದ್ರು. ಶಸ್ತ್ರಚಿಕಿತ್ಸೆ ಮಾಡಿ ಜಿಮ್ಸ್ ವೈದ್ಯರ ತಂಡ ಹೆರಿಗೆ ಮಾಡಿಸಿದ್ದರು. ಆಗ ತಾನೆ ಜನಿಸಿದ ಮಗುವಿಗೆ ಉಸಿರಾಟ ಸಮಸ್ಯೆ ಕಂಡುಬಂತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು ಹೆತ್ತ ತಾಯಿಯಿಂದ ಮಗುವನ್ನು ದೂರವಾಗಿಟ್ಟಿದ್ದಾರೆ.

ಮಗುವಿಗೆ ಜನ್ಮ ನೀಡಿದ್ರು ಹಡೆದ ತಾಯಿಗೆ ಮಗುವನ್ನು ನೋಡುವ ಭಾಗ್ಯ ಇಲ್ಲ. ಮಗುವಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿದೆ. ಕೊವಿಡ್ ಟೆಸ್ಟ್ ವರದಿ ಬರುವವರೆಗೆ ನಿಗಾದಲ್ಲಿಡಲಾಗುತ್ತೆ. ಅಲ್ಲಿಯ ವರೆಗೆ ಮಗುವನ್ನು ಯಾರು ನೋಡುವಂತಿಲ್ಲ. ಮಗುವನ್ನು ನೋಡಲು ಪೋಷಕರೂ ಬರುವಂತಿಲ್ಲ. ಇತ್ತ ಹೆತ್ತ ತಾಯಿಯೂ ನೋಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಂದೆ ಕೂಡ ತನ್ನ ಪುಟ್ಟ ಕಂದಮ್ಮನನ್ನು ನೋಡಿಲ್ಲ. ತನಗೆ ಎಲ್ಲರೂ ಇದ್ದರೂ ಯಾರೂ ಇಲ್ಲದಂತೆ ಆ ಮಗುವಿದೆ.

Follow Us
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ
ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ