AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್ ಆಗಿದೆ ಬೆಂಗಳೂರು ಖಾಸಗಿ ಆಸ್ಪತ್ರೆ ವೈದ್ಯರ ಕೋವಿಡ್ ಕರೆ, ಏನದು?

ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸಕ್ಕೆ ಜನ ದಂಗಾಗಿ ಹೋಗಿದ್ದಾರೆ. ಅದರಲ್ಲೂ ಪಿಪಿಇ ಕಿಟ್ ಧರಿಸಿ ಯುದ್ಧಕ್ಕೆ ಸಜ್ಜಾಗಿರುವ ವೈದ್ಯರಿಗೂ ಕೊರೊನಾ, ಭಯ ಹುಟ್ಟಿಸಿಬಿಟ್ಟಿದೆ. ಈ ನಡುವೆ ಬೆಂಗಳೂರು ಖಾಸಗಿ ಆಸ್ಪತ್ರೆ ವೈದ್ಯರ ಕರೆ ವೈರಲ್ ಆಗಿದೆ. ನಿಜಕ್ಕೂ ನನ್ನ ಕೈ ಕಟ್ಟಿ ಹಾಕಿದಂಗಿದೆ.. ಆಸ್ಪತ್ರೆಗಳಲ್ಲಿ ಸೌಕರ್ಯ ಇದೆ, ಆದರೆ ವೈದ್ಯರು ಮತ್ತು ನರ್ಸ್​ಗಳೇ ಬರ್ತಿಲ್ಲ. ಎಷ್ಟೊಂದು ಜೀವಗಳನ್ನು ಉಳಿಸುವ ಸಾಧ್ಯತೆ ಇದ್ರೂ ಅಸಹಾಯಕತೆ ತೋಡಿಕೊಂಡಿದ್ದಾರೆ ಡಾ. ತಹ ಮತೀನ್. ಎಚ್ಬಿಸಿಎಸ್ ಆಸ್ಪತ್ರೆಯಲ್ಲಿ 30 ಕೊವಿಡ್ ರೋಗಿಗಳಿಗೆ ಚಿಕಿತ್ಸೆ […]

ವೈರಲ್ ಆಗಿದೆ ಬೆಂಗಳೂರು ಖಾಸಗಿ ಆಸ್ಪತ್ರೆ ವೈದ್ಯರ ಕೋವಿಡ್ ಕರೆ, ಏನದು?
ಆಯೇಷಾ ಬಾನು
|

Updated on:Jul 06, 2020 | 11:48 AM

Share

ಬೆಂಗಳೂರು: ನಗರದಲ್ಲಿ ಕೊರೊನಾ ಅಟ್ಟಹಾಸಕ್ಕೆ ಜನ ದಂಗಾಗಿ ಹೋಗಿದ್ದಾರೆ. ಅದರಲ್ಲೂ ಪಿಪಿಇ ಕಿಟ್ ಧರಿಸಿ ಯುದ್ಧಕ್ಕೆ ಸಜ್ಜಾಗಿರುವ ವೈದ್ಯರಿಗೂ ಕೊರೊನಾ, ಭಯ ಹುಟ್ಟಿಸಿಬಿಟ್ಟಿದೆ. ಈ ನಡುವೆ ಬೆಂಗಳೂರು ಖಾಸಗಿ ಆಸ್ಪತ್ರೆ ವೈದ್ಯರ ಕರೆ ವೈರಲ್ ಆಗಿದೆ.

ನಿಜಕ್ಕೂ ನನ್ನ ಕೈ ಕಟ್ಟಿ ಹಾಕಿದಂಗಿದೆ.. ಆಸ್ಪತ್ರೆಗಳಲ್ಲಿ ಸೌಕರ್ಯ ಇದೆ, ಆದರೆ ವೈದ್ಯರು ಮತ್ತು ನರ್ಸ್​ಗಳೇ ಬರ್ತಿಲ್ಲ. ಎಷ್ಟೊಂದು ಜೀವಗಳನ್ನು ಉಳಿಸುವ ಸಾಧ್ಯತೆ ಇದ್ರೂ ಅಸಹಾಯಕತೆ ತೋಡಿಕೊಂಡಿದ್ದಾರೆ ಡಾ. ತಹ ಮತೀನ್. ಎಚ್ಬಿಸಿಎಸ್ ಆಸ್ಪತ್ರೆಯಲ್ಲಿ 30 ಕೊವಿಡ್ ರೋಗಿಗಳಿಗೆ ಚಿಕಿತ್ಸೆ ಕೊಡುವ ಸೌಕರ್ಯ ಇದೆ. ಆದರೆ ಚಿಕಿತ್ಸೆ ನೀಡಲು ವೈದ್ಯರು ಮತ್ತು ದಾದಿಯರು ಮುಂದೆ ಬರ್ತಿಲ್ಲ. ಇಡೀ ಆಸ್ಪತ್ರೆಯಲ್ಲಿ ಕೊವಿಡ್ ಟ್ರೀಟ್ಮೆಂಟ್​ಗೆ ಒಬ್ಬ ವೈದ್ಯ ಮತ್ತು ಒಬ್ಬ ಸಹಾಯಕ ಮಾತ್ರ ಇದ್ದಾರೆ. ಕನಿಷ್ಟ ದಿನಕ್ಕೆ 6 ಗಂಟೆಗಳಾದ್ರೂ ಕೆಲಸ ಮಾಡಿ, ಸಹಾಯ ಮಾಡಿ ಎಂದು ಎಲ್ಲಾ ವೈದ್ಯರನ್ನು ಡಾ. ತಹ ಮತೀನ್ ಕೇಳಿಕೊಂಡಿದ್ದಾರೆ.

ಇದು ನಾವು ಮಾನವೀಯತೆ ತೋರಿಸುವ ನಿಜವಾದ ಸಮಯ. ಸೈನಿಕರು, ಪೊಲೀಸರು ಪ್ರತಿಯೊಬ್ಬರು ತಮ್ಮ ಸೇವೆ ಮಾಡಿದ್ದಾರೆ. ಈಗ ನಮ್ಮ ಸೇವೆಗೆ ಟೈಮ್ ಬಂದಿದೆ ದಯವಿಟ್ಟು ಬನ್ನಿ ಚಿಕಿತ್ಸೆ ಕೊಡೋಣ ಮೈ ಫ್ರೆಂಡ್ಸ್ ಅಂತಾ ಅವರು ಬೇಡಿಕೊಂಡಿದ್ದಾರೆ. ಅನೇಕ ಆಸ್ಪತ್ರೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಕೊವಿಡ್ ಕಂಡು ಡಾಕ್ಟರ್ಸ್, ನರ್ಸ್ ಓಡಿ ಹೋಗ್ತಿದ್ದಾರೆ. ಇತ್ತೀಚೆಗಷ್ಟೇ ಮತ್ತೊಂದು ಖಾಸಗಿ ಆಸ್ಪತ್ರೆಯ ನರ್ಸ್ ಗೆ ಕೊರೊನಾ ಎಂದಾಗ ಚಿಕಿತ್ಸೆ ನೀಡಲು ಯಾರೂ ಮುಂದೆ ಬಂದಿರಲಿಲ್ಲ. ಆದ್ದರಿಂದ ಆಕೆಯನ್ನು ವಿಕ್ಟೋರಿಯಾಗೆ ರವಾನೆ ಮಾಡಲಾಗಿತ್ತು ಎಂದಿದ್ದಾರೆ.

Published On - 10:31 am, Mon, 6 July 20

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?