ಗದಗ: ಕೊರೊನಾ ತಂದ ಸಂಕಷ್ಟ ಒಂದಾ.. ಎರಡಾ.. ಕಣ್ಣಿಗೆ ಕಾಣದ ಈ ಚಿಕ್ಕ ವೈರಸ್ ಬಹಳಷ್ಟು ಬದಲಾಯಿಸಿದೆ. ಹೆತ್ತ ಮಗುವನ್ನು ತಾಯಿಯಿಂದ ದೂರ ಮಾಡಿದೆ. ಹೆತ್ತ ಮಗುವನ್ನು ನೋಡಲಾಗದೆ ತಾಯಿ ಕಣ್ಣೀರು ಹಾಕುವಂತಹ ಪರಿಸ್ಥಿತಿಯನ್ನು ತಂದೊಡ್ಡಿದೆ. ಕರುಳು ಹಿಂಡುವಂತಿದೆ ತಾಯಿಯ ರೋಧನೆ ಕಥೆ.
ಗದಗ ಜಿಮ್ಸ್‌ನಲ್ಲಿ ಕೊರೊನಾ ಸೋಂಕಿತೆ ಮಗುವಿಗೆ ಜನ್ಮ ನೀಡಿದ್ರು. ಶಸ್ತ್ರಚಿಕಿತ್ಸೆ ಮಾಡಿ ಜಿಮ್ಸ್ ವೈದ್ಯರ ತಂಡ ಹೆರಿಗೆ ಮಾಡಿಸಿದ್ದರು. ಆಗ ತಾನೆ ಜನಿಸಿದ ಮಗುವಿಗೆ ಉಸಿರಾಟ ಸಮಸ್ಯೆ ಕಂಡುಬಂತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು ಹೆತ್ತ ತಾಯಿಯಿಂದ ಮಗುವನ್ನು ದೂರವಾಗಿಟ್ಟಿದ್ದಾರೆ.
ಮಗುವಿಗೆ ಜನ್ಮ ನೀಡಿದ್ರು ಹಡೆದ ತಾಯಿಗೆ ಮಗುವನ್ನು ನೋಡುವ ಭಾಗ್ಯ ಇಲ್ಲ. ಮಗುವಿಗೆ ಕೊವಿಡ್ ಟೆಸ್ಟ್ ಮಾಡಿಸಲಾಗಿದೆ. ಕೊವಿಡ್ ಟೆಸ್ಟ್ ವರದಿ ಬರುವವರೆಗೆ ನಿಗಾದಲ್ಲಿಡಲಾಗುತ್ತೆ. ಅಲ್ಲಿಯ ವರೆಗೆ ಮಗುವನ್ನು ಯಾರು ನೋಡುವಂತಿಲ್ಲ. ಮಗುವನ್ನು ನೋಡಲು ಪೋಷಕರೂ ಬರುವಂತಿಲ್ಲ. ಇತ್ತ ಹೆತ್ತ ತಾಯಿಯೂ ನೋಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ತಂದೆ ಕೂಡ ತನ್ನ ಪುಟ್ಟ ಕಂದಮ್ಮನನ್ನು ನೋಡಿಲ್ಲ. ತನಗೆ ಎಲ್ಲರೂ ಇದ್ದರೂ ಯಾರೂ ಇಲ್ಲದಂತೆ ಆ ಮಗುವಿದೆ.