ಕೊರೊನಾ ಪೇಷಂಟ್​ ಡಿಸ್ಚಾರ್ಜ್! ವಿಕ್ಟೋರಿಯಾ ಆಸ್ಪತ್ರೆ ಮಹಾ ಎಡವಟ್ಟು..

ಬೆಂಗಳೂರು: ನಗರದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಕೊರೊನಾ ಪಾಸಿಟಿವ್ ಬಂದ ಹಲವರಲ್ಲಿ ಸೋಂಕಿನ ಮೂಲವೇ ಪತ್ತೆಯಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ನಗರದ ವಿಕ್ಟೋರಿಯಾ ಆಸ್ಪತ್ರೆ ಒಂದು ಮಹಾ ಎಡವಟ್ಟು ಮಾಡಿಬಿಟ್ಟಿದೆ. ರಿಪೋರ್ಟ್​ ಅದಲು ಬದಲು, ಪಾಸಿಟಿವ್​ ಪೇಷಂಟ್​ ಡಿಸ್ಚಾರ್ಜ್! ಜೂನ್​ 11ರಂದು ಕೊರೊನಾ ಪಾಸಿಟಿವ್​ ಆದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಮೊದಲನೇ ಸೋಂಕಿತನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಆತನ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದ್ದರು. ಈ ಮಧ್ಯೆ ಮೂರು ದಿನಗಳ ಹಿಂದೆ […]

ಕೊರೊನಾ ಪೇಷಂಟ್​ ಡಿಸ್ಚಾರ್ಜ್! ವಿಕ್ಟೋರಿಯಾ ಆಸ್ಪತ್ರೆ ಮಹಾ ಎಡವಟ್ಟು..
Edited By:

Updated on: Jun 25, 2020 | 5:33 PM

ಬೆಂಗಳೂರು: ನಗರದಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಲೇ ಇದೆ. ಕೊರೊನಾ ಪಾಸಿಟಿವ್ ಬಂದ ಹಲವರಲ್ಲಿ ಸೋಂಕಿನ ಮೂಲವೇ ಪತ್ತೆಯಾಗುತ್ತಿಲ್ಲ. ಇಂಥ ಸಂದರ್ಭದಲ್ಲಿ ನಗರದ ವಿಕ್ಟೋರಿಯಾ ಆಸ್ಪತ್ರೆ ಒಂದು ಮಹಾ ಎಡವಟ್ಟು ಮಾಡಿಬಿಟ್ಟಿದೆ.

ರಿಪೋರ್ಟ್​ ಅದಲು ಬದಲು, ಪಾಸಿಟಿವ್​ ಪೇಷಂಟ್​ ಡಿಸ್ಚಾರ್ಜ್!
ಜೂನ್​ 11ರಂದು ಕೊರೊನಾ ಪಾಸಿಟಿವ್​ ಆದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಮೊದಲನೇ ಸೋಂಕಿತನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಆತನ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದ್ದರು. ಈ ಮಧ್ಯೆ ಮೂರು ದಿನಗಳ ಹಿಂದೆ ಮತ್ತೊಬ್ಬ ಸೋಂಕಿತನು ಸಹ ಆಸ್ಪತ್ರೆಗೆ ದಾಖಲಾಗಿದ್ದ. ಹಾಗಾಗಿ ಎರಡೂ ಪೇಷಂಟ್​ಗಳ ಗಂಟಲು ದ್ರವವನ್ನ ಟೆಸ್ಟ್​ಗೆ ಕಳುಹಿಸಲಾಗಿತ್ತು.

ಆದರೆ, ಲ್ಯಾಬ್​ನಲ್ಲಿ ರಿಪೋರ್ಟ್​ಗಳೆರಡು ಅದಲುಬದಲಾಗಿ ಎರಡನೇ ಸೋಂಕಿತನಿಗೆ ಕೊರೊನಾ ಪಾಸಿಟಿವ್​ ಬಂದಿದ್ರೂ ಆತನಿಗೆ ನೆಗಟಿವ್​ ಬಂದಿದೆ ಎಂದು ಹೇಳಿ ಡಿಸ್ಚಾರ್ಜ್​ ಮಾಡಲಾಗಿದೆ. ಡಿಸ್ಚಾರ್ಜ್​ ಆಗಿದ್ದ ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ಹೊರಬಂದ ನಂತರ ಸಾಕಷ್ಟು ಜನರನ್ನು ಭೇಟಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಹೀಗಾಗಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ಮಹಾ ಎಡವಟ್ಟಿನಿಂದ ಮತ್ತಷ್ಟು ಜನರಿಗೆ ಸೋಂಕು ಹರಡಿರುವ ಭೀತಿ ಎದುರಾಗಿದೆ.

Published On - 5:05 pm, Thu, 25 June 20