ಪಾರ್ಕ್ ಬಳಿ ಅನಾಥ ಶವ ಕಂಡ ಕಾರ್ಪೊರೇಟರ್ ಕೊನೆಗೆ ಮಾಡಿದ್ದೇನು ಗೊತ್ತಾ?
ಬೆಂಗಳೂರು: ಮಲ್ಲಸಂದ್ರ ಪಾರ್ಕ್ ಬಳಿ ಅನಾಥ ಶವವೊಂದು ಪತ್ತೆಯಾಗಿರುವ ಘಟನೆ ನಡೆದಿದೆ. ದಾಸರಹಳ್ಳಿಯ ಮಲ್ಲಸಂದ್ರ ಪಾರ್ಕ್ನಲ್ಲಿ ಅಪರಿಚಿತ ವೃದ್ಧನೊಬ್ಬನ ಶವವನ್ನು ಕಂಡ ಸ್ಥಳೀಯರಲ್ಲಿ ಸ್ವಲ್ಪ ಹೊತ್ತು ಆತಂಕ ಮನೆಮಾಡಿತ್ತು. ಕೂಡಲೇ ಸ್ಥಳಕ್ಕೆ ಭೇಟಿಕೊಟ್ಟ ಸ್ಥಳೀಯ ಕಾರ್ಪೊರೇಟರ್ N.ಲೋಕೇಶ್ ಶವವನ್ನು ಸಾಗಿಸಲು ಸೂಚಿಸಿದರು. ಆದರೆ, ನೆರೆದಿದ್ದ ವ್ಯೆದ್ಯರು ಹಾಗೂ ಸ್ಥಳೀಯರು ಶವವನ್ನು ಸಾಗಿಸಲು ಹಿಂದೇಟು ಹಾಕಿದ್ದಾರೆ. ಇದನ್ನು ಕಂಡ ಲೋಕೇಶ್ ಕೊನೆಗೆ ತಾವೇ PPE ಕಿಟ್ ಧರಿಸಿ ಮೃತದೇಹವನ್ನು ಅಂಬ್ಯೂಲನ್ಸ್ಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜೊತೆಗೆ, ನಮ್ಮ […]

ಬೆಂಗಳೂರು: ಮಲ್ಲಸಂದ್ರ ಪಾರ್ಕ್ ಬಳಿ ಅನಾಥ ಶವವೊಂದು ಪತ್ತೆಯಾಗಿರುವ ಘಟನೆ ನಡೆದಿದೆ. ದಾಸರಹಳ್ಳಿಯ ಮಲ್ಲಸಂದ್ರ ಪಾರ್ಕ್ನಲ್ಲಿ ಅಪರಿಚಿತ ವೃದ್ಧನೊಬ್ಬನ ಶವವನ್ನು ಕಂಡ ಸ್ಥಳೀಯರಲ್ಲಿ ಸ್ವಲ್ಪ ಹೊತ್ತು ಆತಂಕ ಮನೆಮಾಡಿತ್ತು.
ಕೂಡಲೇ ಸ್ಥಳಕ್ಕೆ ಭೇಟಿಕೊಟ್ಟ ಸ್ಥಳೀಯ ಕಾರ್ಪೊರೇಟರ್ N.ಲೋಕೇಶ್ ಶವವನ್ನು ಸಾಗಿಸಲು ಸೂಚಿಸಿದರು. ಆದರೆ, ನೆರೆದಿದ್ದ ವ್ಯೆದ್ಯರು ಹಾಗೂ ಸ್ಥಳೀಯರು ಶವವನ್ನು ಸಾಗಿಸಲು ಹಿಂದೇಟು ಹಾಕಿದ್ದಾರೆ. ಇದನ್ನು ಕಂಡ ಲೋಕೇಶ್ ಕೊನೆಗೆ ತಾವೇ PPE ಕಿಟ್ ಧರಿಸಿ ಮೃತದೇಹವನ್ನು ಅಂಬ್ಯೂಲನ್ಸ್ಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜೊತೆಗೆ, ನಮ್ಮ ದಾಸರಹಳ್ಳಿಯ ಭಾಗದಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ. ಅದ್ದರಿಂದ ಈ ರೀತಿ ಸಮಸ್ಯೆ ಆಗಿದೆ. ಮುಂದೆ ಹೀಗೆ ಆಗದಂತೆ ಸರ್ಕಾರದ ಗಮನಕ್ಕೆ ತರುವೆ ಎಂದು ಸಹ ಹೇಳಿದ್ದಾರೆ.

Published On - 1:50 pm, Mon, 13 July 20



