
ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 40 ಜನರ ಬಲಿಯಾಗಿದ್ದಾರೆ ಮತ್ತು 2,967 ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಕೊರೊನಾ ಸೋಂಕಿನಿಂದ ಸತ್ತವರ ಸಂಖ್ಯೆ ಎರಡು ಸಾವಿರ (2005) ಗಡಿ ದಾಟಿದೆ ಮತ್ತು ಸೋಂಕಿತರ ಸಂಖ್ಯೆ1,32,092ಕ್ಕೇರಿದೆ.
ರಾಜ್ಯದಲ್ಲಿ 2,54,626 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ ಉಳಿದ 90,999 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಹಾಗೆಯೇ, ಬೆಂಗಳೂರಿನ ಒಟ್ಟು 1,32,092 ಸೋಂಕಿತರಲ್ಲಿ 91,180 ಜನ ಚೇತರಿಸಿಕೊಂಡು ಮನೆಗಳಿಗೆ ಹಿಂದಿರುಗಿದ್ದಾರೆ. ಉಳಿದ 38,906 ಸೋಂಕಿತರು ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ