AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಡಿಪಿ ಮಹಾ ಕುಸಿತಕ್ಕೆ ಅಡ್ಡ ಕಸುಬಿ ಆರ್ಥಿಕ ನಿರ್ವಹಣೆ ಕಾರಣ: ಮೋದಿ ವಿರುದ್ಧ ಸಿದ್ದು ಗುಡುಗು

ಬೆಂಗಳೂರು: ದೇಶದ ಜಿಡಿಪಿಯ ಮಹಾ ಕುಸಿತಕ್ಕೆ ಮೋದಿ ಸರ್ಕಾರದ ಅಡ್ಡಕಸುಬಿ ಆರ್ಥಿಕ ನಿರ್ವಹಣೆಯೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ದೇಶದ ಜಿಡಿಪಿ ಶೇಕಡಾ 23.9ರಷ್ಟು ಕುಸಿತ ಕಂಡಿರುವುದು ಆಘಾತಕಾರಿ ಬೆಳವಣಿಗೆ. ಈ ಕುಸಿತದ ಪೂರ್ಣ ಹೊಣೆಯನ್ನು ಕೊರೊನಾ ರೋಗದ ಮೇಲೆ ಹೇರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಇನ್ನೂ ಹೆಚ್ಚಿನ ಆಘಾತಕಾರಿ ಬೆಳವಣಿಗೆ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಕೇಂದ್ರದಲ್ಲಿ […]

ಜಿಡಿಪಿ ಮಹಾ ಕುಸಿತಕ್ಕೆ ಅಡ್ಡ ಕಸುಬಿ ಆರ್ಥಿಕ ನಿರ್ವಹಣೆ ಕಾರಣ: ಮೋದಿ ವಿರುದ್ಧ ಸಿದ್ದು ಗುಡುಗು
Guru
|

Updated on: Sep 02, 2020 | 12:02 AM

Share

ಬೆಂಗಳೂರು: ದೇಶದ ಜಿಡಿಪಿಯ ಮಹಾ ಕುಸಿತಕ್ಕೆ ಮೋದಿ ಸರ್ಕಾರದ ಅಡ್ಡಕಸುಬಿ ಆರ್ಥಿಕ ನಿರ್ವಹಣೆಯೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ದೇಶದ ಜಿಡಿಪಿ ಶೇಕಡಾ 23.9ರಷ್ಟು ಕುಸಿತ ಕಂಡಿರುವುದು ಆಘಾತಕಾರಿ ಬೆಳವಣಿಗೆ. ಈ ಕುಸಿತದ ಪೂರ್ಣ ಹೊಣೆಯನ್ನು ಕೊರೊನಾ ರೋಗದ ಮೇಲೆ ಹೇರುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಇನ್ನೂ ಹೆಚ್ಚಿನ ಆಘಾತಕಾರಿ ಬೆಳವಣಿಗೆ ಎಂದು ಸಿದ್ದರಾಮಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ದೇಶದ ಆರ್ಥಿಕತೆ ರೋಗಗ್ರಸ್ತವಾಗಿದೆ ಎನ್ನವುದನ್ನು ಸರ್ಕಾರದ ಅಧಿಕೃತ ದಾಖಲೆಗಳೇ ಹೇಳುತ್ತಿವೆ. ಆರ್ ಬಿ ಐ ಗವರ್ನರ್ ಅವರಿಂದ ಹಿಡಿದು ಆರ್ಥಿಕ ಸಲಹೆಗಾರರ ವರೆಗೆ ದೇಶದ ಪ್ರಖ್ಯಾತ ಆರ್ಥಿಕ ತಜ್ಞರೆಲ್ಲರೂ ದೇಶದ ಆರ್ಥಿಕತೆ ಸಾಗುವ ದಾರಿ ಬಗ್ಗೆ ಆತಂಕ ಪಟ್ಟು ಎಚ್ಚರಿಸಿದ್ದಾರೆ.

ಆಗ ಕುರುಡು-ಕಿವುಡು ಆಗಿದ್ದ ಸರ್ಕಾರ ಈಗ ಕೊರೊನಾಕ್ಕಾಗಿ ರೋದಿಸುತ್ತಿದೆ. 2015ರಲ್ಲಿ ಜಿಡಿಪಿ ಅಂದಾಜು ಮಾಡುವ ಮೂಲವರ್ಷವನ್ನು 2004-05ರಿಂದ 2011-12ಕ್ಕೆ ಬದಲಾಯಿಸಲಾಯಿತು. ಅದರ ನಂತರ ಬಣ್ಣ ಬಯಲಾಗಬಾರದೆಂದು ಅಧಿಕೃತ ಅಂಕಿ ಅಂಶಗಳನ್ನೇ ತಡೆಹಿಡಿಯಲಾಯಿತು. ಈಗ ಎಲ್ಲವನ್ನು ಕೊರೊನಾ ಲೆಕ್ಕಕ್ಕೆ ಬರೆದು ಕೈತೊಳೆದುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕೇಂದ್ರದ ವಿರುದ್ಧ ಹರಿಹಾಯ್ದಿದ್ದಾರೆ.

ಕೊರೊನಾ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದ್ದ ಪ್ರಧಾನಿ ನರೇಂದ್ರ ಮೋದಿ, ಜನರಿಗೆ ಜಾಗಟೆ ಬಾರಿಸಲು, ದೀಪ ಹಚ್ಚಲು ಹೇಳಿರುವುದು ಕೊರೊನಾ ಮಾರಿಯ ವಿರುದ್ಧ ಸರ್ಕಾರ ಗಂಭೀರವಾಗಿಲ್ಲದಿರುವುದನ್ನು ತೋರಿಸುತ್ತೆ. ಲಾಕ್ ಡೌನ್ ಅಗತ್ಯವಿತ್ತು ನಿಜ, ನಮ್ಮ ಪಕ್ಷ ಕೂಡಾ ಅದನ್ನು ಬೆಂಬಲಿಸಿತ್ತು. ಆದರೆ ಅವೈಜ್ಞಾನಿಕವಾಗಿ, ದಿನಕ್ಕೊಂದು ರೀತಿಯ ಅನಿಶ್ಚಿತ ನಿರ್ಧಾರಗಳ ಮೂಲಕ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ಅದರಿಂದ ಲಾಭವಾಗಲಿಲ್ಲ ಬದಲು ನಷ್ಟವಾಗಿದ್ದೇ ಹೆಚ್ಚು. ಇದರ ಪೂರ್ಣ ಹೊಣೆಯನ್ನು ಪ್ರಧಾನ ಮಂತ್ರಿಯವರೇ ವಹಿಸಿಕೊಳ್ಳಬೇಕಾಗುತ್ತದೆ ಎಂದು ಸಿದ್ದಾರಮಯ್ಯ ಹೇಳಿದ್ದಾರೆ.

ದೇಶ ಎದುರಿಸುತ್ತಿರುವ ಈಗಿನ ಆರ್ಥಿಕ ದುಸ್ತಿತಿಗೆ ನೋಟು ಅಮಾನ್ಯೀಕರಣ, ದೋಷಪೂರಿತ ಜಿಎಸ್‌ಟಿಯ ಅವೈಜ್ಞಾನಿಕ ಜಾರಿ ಮತ್ತು ಕೆಲಸವೇ ಗೊತ್ತಿಲ್ಲದ ಅಡ್ಡ ಕಸುಬಿ ಸಚಿವರು ಕೂಡಾ ಕಾರಣ ಎಂದು ಅವರು ದೇಶದ ಮುಂದೆ ಮೊದಲು ತಪ್ಪೊಪ್ಪಿಕೊಳ್ಳಬೇಕು. ರೋಗದ ಕಾರಣ ತಿಳಿಯದೆ ಔಷಧಿ ಕೊಟ್ಟರೆ ರೋಗ ಗುಣವಾಗಲಾರದು ಎಂದು ಹಣಕಾಸು ಸಚಿವರಾಗಿದ್ದ ಸಿದ್ದರಾಮಯ್ಯ ಮೋದಿ ವಿರುದ್ದ ಟೀಕೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
ದೆಹಲಿ-ಮುಂಬೈ ಎಕ್ಸ್​ಪ್ರೆಸ್​ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು
ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು