ರಾಜ್ಯದಲ್ಲಿಂದು 135 ಜನ ಕೊವಿಡ್-19ಗೆ ಬಲಿ, 9,058 ಹೊಸ ಪಾಸಿಟಿವ್ ಪ್ರಕರಣಗಳು

  • Publish Date - 7:40 pm, Tue, 1 September 20
ರಾಜ್ಯದಲ್ಲಿಂದು 135 ಜನ ಕೊವಿಡ್-19ಗೆ ಬಲಿ, 9,058 ಹೊಸ ಪಾಸಿಟಿವ್ ಪ್ರಕರಣಗಳು

ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿಂದು 135 ಜನ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಹೊಸದಾಗಿ 9,058 ಜನ ಕೊರೊನಾ ಸೋಂಕು ತಗುಲಿಸಿಕೊಂಡಿದ್ದು ಸೋಂಕಿತರ ಸಂಖ್ಯೆ 3,51,481ಕ್ಕೇರಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,837 ತಲುಪಿದೆ.

ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 40 ಜನರ ಬಲಿಯಾಗಿದ್ದಾರೆ ಮತ್ತು 2,967 ಹೊಸ ಕೊವಿಡ್-19 ಪ್ರಕರಣಗಳು ಪತ್ತೆಯಾಗಿವೆ. ನಗರದಲ್ಲಿ ಕೊರೊನಾ ಸೋಂಕಿನಿಂದ ಸತ್ತವರ ಸಂಖ್ಯೆ ಎರಡು ಸಾವಿರ (2005) ಗಡಿ ದಾಟಿದೆ ಮತ್ತು ಸೋಂಕಿತರ ಸಂಖ್ಯೆ1,32,092ಕ್ಕೇರಿದೆ.

ರಾಜ್ಯದಲ್ಲಿ 2,54,626 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಹಾಗೂ ಉಳಿದ 90,999 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ಹಾಗೆಯೇ, ಬೆಂಗಳೂರಿನ ಒಟ್ಟು 1,32,092 ಸೋಂಕಿತರಲ್ಲಿ 91,180 ಜನ ಚೇತರಿಸಿಕೊಂಡು ಮನೆಗಳಿಗೆ ಹಿಂದಿರುಗಿದ್ದಾರೆ. ಉಳಿದ 38,906 ಸೋಂಕಿತರು ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

Click on your DTH Provider to Add TV9 Kannada