ಗಡಿಯಲ್ಲಿ ಪದೇ ಪದೆ ಗಲಾಟೆ ಮಾಡ್ತಿದೆ ಚೀನಾ, LACಬಳಿಯ ಚುಮರ್ ಪ್ರದೇಶ ಅತಿಕ್ರಮಣಕ್ಕೆ ಯತ್ನ
ದೆಹಲಿ: ಚೀನಾ ಸೇನೆ ತಾನು ನೆಮ್ಮದಿಯಾಗಿ ಇರೋದಿಲ್ಲ, ನೆರೆ-ಹೊರೆ ದೇಶಗಳ ಯೋಧರನ್ನೂ ನೆಮ್ಮದಿಯಾಗಿ ಇರೋದಕ್ಕೆ ಬಿಡೋದಿಲ್ಲ. ಸದಾ ಸಾಮ್ರಾಜ್ಯಶಾಹಿ ವಾದ ಮಾಡುವ ಚೀನಾ ಕಣ್ಣು ಭಾರತದ ಗಡಿಮೇಲೆ ಬಿದ್ದಿದೆ. ಕೆಲದಿನದ ಹಿಂದೆ ಭಾರತದ ಗಡಿಗೆ ನುಗ್ಗಲು ವಿಫಲಯತ್ನ ನಡೆಸಿದ್ದ ಚೀನಿ ಗ್ಯಾಂಗ್ ಮತ್ತೊಮ್ಮೆ ಅಂಥದ್ದೇ ಪ್ರಯತ್ನದಲ್ಲಿ ಸೋತಿದೆ. ಗಡಿಯಲ್ಲಿ ಚೀನಾ ಕಿತಾಪತಿ ಮುಂದುವರಿದಿದೆ. ಕೇವಲ 3 ದಿನದ ಅಂತರದಲ್ಲಿ ಎರಡೆರಡು ಬಾರಿ ಚೀನಿ ಗ್ಯಾಂಗ್ ಗಡಿ ಅತಿಕ್ರಮಣಕ್ಕೆ ಯತ್ನಿಸಿದೆ. ಚೀನಾದ ಈ ಕ್ಯಾತೆಗೆ ಸರಿಯಾಗೇ ಪ್ರತ್ಯುತ್ತರ ನೀಡಿರುವ […]
ದೆಹಲಿ: ಚೀನಾ ಸೇನೆ ತಾನು ನೆಮ್ಮದಿಯಾಗಿ ಇರೋದಿಲ್ಲ, ನೆರೆ-ಹೊರೆ ದೇಶಗಳ ಯೋಧರನ್ನೂ ನೆಮ್ಮದಿಯಾಗಿ ಇರೋದಕ್ಕೆ ಬಿಡೋದಿಲ್ಲ. ಸದಾ ಸಾಮ್ರಾಜ್ಯಶಾಹಿ ವಾದ ಮಾಡುವ ಚೀನಾ ಕಣ್ಣು ಭಾರತದ ಗಡಿಮೇಲೆ ಬಿದ್ದಿದೆ. ಕೆಲದಿನದ ಹಿಂದೆ ಭಾರತದ ಗಡಿಗೆ ನುಗ್ಗಲು ವಿಫಲಯತ್ನ ನಡೆಸಿದ್ದ ಚೀನಿ ಗ್ಯಾಂಗ್ ಮತ್ತೊಮ್ಮೆ ಅಂಥದ್ದೇ ಪ್ರಯತ್ನದಲ್ಲಿ ಸೋತಿದೆ.
ಗಡಿಯಲ್ಲಿ ಚೀನಾ ಕಿತಾಪತಿ ಮುಂದುವರಿದಿದೆ. ಕೇವಲ 3 ದಿನದ ಅಂತರದಲ್ಲಿ ಎರಡೆರಡು ಬಾರಿ ಚೀನಿ ಗ್ಯಾಂಗ್ ಗಡಿ ಅತಿಕ್ರಮಣಕ್ಕೆ ಯತ್ನಿಸಿದೆ. ಚೀನಾದ ಈ ಕ್ಯಾತೆಗೆ ಸರಿಯಾಗೇ ಪ್ರತ್ಯುತ್ತರ ನೀಡಿರುವ ಭಾರತೀಯ ಸೈನಿಕರು, ಚೀನಾ ಎಸ್ಕೇಪ್ ಆಗುವಂತೆ ಮಾಡಿದ್ದಾರೆ. ಆದರೂ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
2ನೇ ಬಾರಿ ಚೀನಿ ಗ್ಯಾಂಗ್ ನುಗ್ಗಿದ್ದು ಹೇಗೆ ಗೊತ್ತಾ? ಆಗಸ್ಟ್ 29 ರ ರಾತ್ರಿ ಚೀನಾ ಸೇನೆ ಪಾಂಗಾಂಗ್ ಬಳಿ ಕ್ಯಾತೆ ತೆಗೆದಿತ್ತು. ಈಗ ಮತ್ತೆ ಅದೇ ಐಡಿಯಾ ಮಾಡಿ ಸೋತು ಹೋಗಿದೆ. ಭಾರತೀಯ ಸೇನಾ ಮೂಲಗಳ ಪ್ರಕಾರ ಭಾರತಕ್ಕೆ ಸೇರಿದ ಮತ್ತೊಂದು ಪ್ರದೇಶದ ಮೇಲೆ ಚೀನಾ ಸೇನೆ ಗಡಿ ಆಕ್ರಮಣಕ್ಕೆ ವಿಫಲ ಯತ್ನ ನಡೆಸಿದೆ. ಚೀನಿಯರ 2ನೇ ಪ್ರಯತ್ನ ಹೇಗಿತ್ತು ಅನ್ನೋದನ್ನ ನೋಡೋದಾದ್ರೆ.
ಅತಿಕ್ರಮಣಕ್ಕೆ ಅಡ್ಡಿ! ಪಾಂಗಾಂಗ್ ಬಳಿಕ ಎಲ್‌ಎಸಿ ಬಳಿಯ ಚುಮರ್ ಪ್ರದೇಶದಲ್ಲಿ ಅತಿಕ್ರಮಣಕ್ಕೆ ಪ್ರಯತ್ನಿಸಿದೆ. ಚೀನಾ 7-8 ಬೃಹತ್ ವಾಹನಗಳಲ್ಲಿ ಚೆಪುಜಿ ಶಿಬಿರದಿಂದ ಅತಿಕ್ರಮಣಕ್ಕೆ ಮುಂದಾಗಿತ್ತು. ಆದ್ರೆ ಚೀನಾ ವಾಹನಗಳಿಗೆ ಶಸ್ತ್ರಸಜ್ಜಿತ ಭಾರತೀಯ ಪಡೆಗಳಿಂದ ತಡೆ ಬಿದ್ದಿದೆ. ಭಾರತೀಯ ಸೈನಿಕರನ್ನು ನೋಡುತ್ತಿದ್ದಂತೆ ಚೀನಾ ಸೈನಿಕರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಘಟನೆ ಬೆನ್ನಲ್ಲೇ ಚೀನಾ ಭಾರತದ ಗಡಿ ಅತಿಕ್ರಮಣ ಮಾಡದಂತೆ ಹೆಚ್ಚಿನ ಭದ್ರತಾ ಪಡೆಗಳನ್ನ ನಿಯೋಜಿಸಲಾಗಿದೆ.
ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ಎರಡೂ ದೇಶಗಳ ಸೈನಿಕರು: 3 ದಿನಗಳಲ್ಲಿ 2 ಬಾರಿ ಅತಿಕ್ರಮಣಕ್ಕೆ ಚೀನಾ ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಚರ್ಚಿಸಲು ಮಹತ್ವದ ಸಭೆ ನಡೆಸಲಾಗುತ್ತಿದೆ. ಚುಶುಲ್ ಮತ್ತು ಮೊಲ್ಡೊದಲ್ಲಿ ಬ್ರಿಗೇಡ್ ಕಮಾಂಡರ್ ಮಟ್ಟದ ಸಭೆ ನಡೆಸಲಾಗ್ತಿದೆ. ಆದ್ರೆ ಈಕಡೆ ಗಡಿಯಲ್ಲಿ ಎರಡೂ ದೇಶಗಳ ಸೈನಿಕರು, ಸುಸಜ್ಜಿತ ಅಸ್ತ್ರ, ಯುದ್ಧ ಟ್ಯಾಂಕರ್ಗಳೊಂದಿಗೆ ಪರಸ್ಪರ ದಾಳಿ ನಡೆಸುವಷ್ಟು ಅಂತರದಲ್ಲಿ ಬೀಡುಬಿಟ್ಟಿದ್ದಾರೆ.
ಚೀನಾ ಯುದ್ಧ ಟ್ಯಾಂಕರ್, ಶಸ್ತ್ರಾಸ್ತ್ರಗಳನ್ನೊಳಂಡ ವಾಹನಗಳು ಭಾರತೀಯ ಸೈನಿಕರು ಆಕ್ರಮಿಸಿಕೊಂಡಿರುವ ಕಾಲಾ ಟಾಪ್ ತಪ್ಪಲು ಪ್ರದೇಶದ ಬಳಿ ಬಂದುನಿಂತಿವೆ. ಪ್ರತಿಯಾಗಿ ಭಾರತೀಯ ಸೇನೆ ಕೂಡ ಸಜ್ಜುಗೊಂಡಿದೆ. ಸೈನಿಕರು ಕಾಲಾ ಟಾಪ್ ಬಳಿ ಫಿರಂಗಿ, ಯುದ್ಧ ಟ್ಯಾಂಕರ್ ಸೇರಿದಂತೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಸಿದ್ಧ ಮಾಡಿಕೊಂಡು ನಿಂತಿದ್ದಾರೆ. ಗಡಿಯಲ್ಲಿ ಮತ್ತೆ ಹೊಸದಾಗಿ ಉದ್ವಿಗ್ನತೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಭಾರತೀಯ ಯುದ್ಧ ಟ್ಯಾಂಕರ್ಗಳನ್ನು ಸ್ಪ್ಯಾಂಗೂರ್ ತ್ಸೋ ಮತ್ತು ಚುಶುಲ್ ನಡುವಿನ ಸೂಕ್ಷ್ಮ ಪ್ರದೇಶದಲ್ಲಿ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.