ಕೋವಿಡ್‌ ಸಂಕಷ್ಟದಲ್ಲೂ 22222 ಅಡಿ ಶಿಖರದ ಮೇಲೆ ಭಾರತದ ಧ್ವಜ ಹಾರಿಸಿದ ಸೈನಿಕರು

  • Updated On - 2:37 pm, Wed, 2 September 20 Edited By: sadhu srinath Follow us -
ಕೋವಿಡ್‌ ಸಂಕಷ್ಟದಲ್ಲೂ 22222 ಅಡಿ ಶಿಖರದ ಮೇಲೆ ಭಾರತದ ಧ್ವಜ ಹಾರಿಸಿದ ಸೈನಿಕರು

ಹಿಮಾಚಲ ಪ್ರದೇಶ್‌: ಸೈನಿಕರೆಂದರೆ ದಿನದ 24 ಗಂಟೆ ಹಾಗೂ ವರ್ಷದ 365 ದಿನಗಳೂ ಸೈನಿಕರೇ. ಮಳೆಯೇ ಬರಲಿ, ಚಳಿಯೇ ಇರಲಿ ಅಥವಾ ಉರಿಯುವ ಬಿಸಿಲೇ ಇರಲಿ ಕರ್ತವ್ಯಕ್ಕೆ ಚ್ಯುತಿ ಬರದ ಹಾಗೆ ಅಂದು ಕೊಂಡದ್ದನ್ನು ಸಾಧಿಸಿ ತೋರಿಸುತ್ತಾರೆ.

ಜಗತ್ತಿನ ಎಲ್ಲೆಡೆ ಕೊರೊನಾ ಮಾಹಾ ಮಾರಿಯ ಹಾವಳಿಯಿದ್ದರೂ ಕೂಡಾ ಅಂಜದೇ ಕೋವಿಡ್‌ ಸಮಯದಲ್ಲಿಯೇ ಯೋಜನೆಯಂತೆ ಕಾರ್ಯರೂಪಕ್ಕಿಳಿದ ಇಂಡೋ-ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ ಪಡೆ, ಈಗ ವಿಶ್ವದ ಅತ್ಯಂತ ಎತ್ತರದ ಶಿಖರಗಳಲ್ಲಿ ಒಂದಾದ ಲಿಯೋ ಪಾರ್ಗಿಲ್‌ ಶಿಖರವನ್ನು ಏರಿದ್ದಾರೆ.

ಕೋವಿಡ್‌ ಸಂಕಷ್ಟದ ಸಮಯದಲ್ಲೂ ಈ ಸಾಧನೆ ಮಾಡಿದ ಮೊದಲ ಪರ್ವತಾರೋಹಿಗಳು ಎಂಬ ಹೆಮ್ಮೆ ಈಗ ಈ ಐಟಿಬಿಪಿ ಪಡೆಯದ್ದಾಗಿದೆ. 12 ಪರ್ವತಾರೋಹಿಗಳಿದ್ದ ತಂಡ ಆಗಸ್ಟ್‌ 31ರಂದು ಯಶಸ್ವಿಯಾಗಿ ಶಿಖರವನ್ನು ಏರುವ ಮೂಲಕ ಭಾರತದ ಕೀರ್ತಿ ದ್ವಜವನ್ನು 22,222 ಅಡಿ ಎತ್ತರದ ಪರ್ವತದ ಮೇಲೆ ಹಾರಿಸಿದ್ದಾರೆ.

Published On - 2:36 pm, Wed, 2 September 20

Click on your DTH Provider to Add TV9 Kannada