ಕೊರೊನಾ ಶಂಕಿತ ಆದ ಎಸ್ಕೇಪ್​ ಮಾಂತ್ರಿಕ, ಒಂದೇ ದಿನದಲ್ಲಿ 2 ಬಾರಿ ಪರಾರಿಗೆ ಯತ್ನ

|

Updated on: Jun 26, 2020 | 10:13 AM

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆಯಲ್ಲಿ ಕೋವಿಡ್ ಪರೀಕ್ಷೆಗೆ ಕರೆತರುವ ವೇಳೆ ಶಂಕಿತನೊಬ್ಬ ಎರಡು ಬಾರಿ ಪರಾರಿಯಾಗಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳ ಹಿಂದೆ ಸೋಂಕಿನಿಂದ ಮೃತಪಟ್ಟಿದ್ದ ಮಹಿಳೆಯ ಅಂತ್ಯಕ್ರಿಯೆಯಲ್ಲಿ 150 ಜನ ಭಾಗಿಯಾಗಿದ್ದರು. ಹಾಗಾಗಿ, ಇವರೆಲ್ಲರನ್ನ ಪತ್ತೆಹಚ್ಚಿ ಕೋವಿಡ್​ ಪರೀಕ್ಷೆ ನಡೆಸಲು ಆರೋಗ್ಯಾಧಿಕಾರಿಗಳು ಮುಂದಾದರು. ಹೀಗಾಗಿ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನನ್ನು THO ಮಂಜುನಾಥ್ ಪರೀಕ್ಷೆಗಾಗಿ ಕೋವಿಡ್​ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಶಂಕಿತ ಆಸ್ವತ್ರೆಯಲ್ಲಿ ಸಿಬ್ಬಂದಿಯನ್ನ ತಳ್ಳಿ ಎಸ್ಕೇಪ್ ಆಗಿ ಓಡಿಹೋದ.  ಹೀಗಾಗಿ, […]

ಕೊರೊನಾ ಶಂಕಿತ ಆದ ಎಸ್ಕೇಪ್​ ಮಾಂತ್ರಿಕ, ಒಂದೇ ದಿನದಲ್ಲಿ 2 ಬಾರಿ ಪರಾರಿಗೆ ಯತ್ನ
Follow us on

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಹೊಸಕೋಟೆಯಲ್ಲಿ ಕೋವಿಡ್ ಪರೀಕ್ಷೆಗೆ ಕರೆತರುವ ವೇಳೆ ಶಂಕಿತನೊಬ್ಬ ಎರಡು ಬಾರಿ ಪರಾರಿಯಾಗಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ಕೆಲವು ದಿನಗಳ ಹಿಂದೆ ಸೋಂಕಿನಿಂದ ಮೃತಪಟ್ಟಿದ್ದ ಮಹಿಳೆಯ ಅಂತ್ಯಕ್ರಿಯೆಯಲ್ಲಿ 150 ಜನ ಭಾಗಿಯಾಗಿದ್ದರು. ಹಾಗಾಗಿ, ಇವರೆಲ್ಲರನ್ನ ಪತ್ತೆಹಚ್ಚಿ ಕೋವಿಡ್​ ಪರೀಕ್ಷೆ ನಡೆಸಲು ಆರೋಗ್ಯಾಧಿಕಾರಿಗಳು ಮುಂದಾದರು. ಹೀಗಾಗಿ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನನ್ನು THO ಮಂಜುನಾಥ್ ಪರೀಕ್ಷೆಗಾಗಿ ಕೋವಿಡ್​ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಶಂಕಿತ ಆಸ್ವತ್ರೆಯಲ್ಲಿ ಸಿಬ್ಬಂದಿಯನ್ನ ತಳ್ಳಿ ಎಸ್ಕೇಪ್ ಆಗಿ ಓಡಿಹೋದ.  ಹೀಗಾಗಿ, ದಿನವೆಲ್ಲಾ ಹುಡುಕಾಡಿದ ಪೊಲೀಸರು ಮತ್ತು ಅಧಿಕಾರಿಗಳು ಕೊನೆಗೂ ಆತನನ್ನು ಪತ್ತೆಹಚ್ಚಿ ಌಂಬುಲೆನ್ಸ್​ನಲ್ಲಿ ವಾಪಸ್ ಕರೆತರುತ್ತಿದ್ದರು.

ಌಂಬುಲೆನ್ಸ್​ನಿಂದ ಎರಡನೇ ಬಾರಿ ಎಸ್ಕೇಪ್​..!
ಆದ್ರೆ ಌಂಬುಲೆನ್ಸ್​ನಲ್ಲಿ ಆತನನ್ನ ಆಸ್ಪತ್ರೆಗೆ ಕರೆತರುವ ವೇಳೆ ಟ್ರಾಫಿಕ್​ನಲ್ಲಿ ವಾಹನ ನಿಲ್ಲಿಸಿದ್ದಾಗ ಮತ್ತೊಮ್ಮೆ ಎಸ್ಕೇಪ್ ಆಗಿದ್ದಾನೆ. ಈ ವೇಳೆ ಸ್ಥಳೀಯರ ಸಹಾಯದಿಂದ ಶಂಕಿತನನ್ನ ಸುಮಾರು ನಾಲ್ಕು ಕಿ.ಮಿ ಚೇಸ್ ಮಾಡಿದ ಅಧಿಕಾರಿಗಳು ಕೊನೆಗೂ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಪದೇಪದೇ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರಿಂದ ಶಂಕಿತನ ಕೈಗೆ ಕೋಳ ತೊಡಿಸಿ ಆಸ್ಪತ್ರೆಗೆ ಕರೆತಂದರು.

Published On - 10:10 am, Fri, 26 June 20