ನದಿಯಲ್ಲಿ ಈಜಾಡುತ್ತಿದ್ದ ಬಾಲಕನನ್ನ ಎಳೆದೊಯ್ದ ಮೊಸಳೆ, ಗ್ರಾಮಸ್ಥರಲ್ಲಿ ಆತಂಕ!

ನದಿಯಲ್ಲಿ ಈಜಾಡುತ್ತಿದ್ದ ಬಾಲಕನನ್ನ ಎಳೆದೊಯ್ದ ಮೊಸಳೆ, ಗ್ರಾಮಸ್ಥರಲ್ಲಿ ಆತಂಕ!

ರಾಯಚೂರು: ಕೃಷ್ಣಾ ನದಿ ಹಿನ್ನೀರಿನಲ್ಲಿ ಈಜಾಡುತ್ತಿದ್ದ ಬಾಲಕನನ್ನು ಮೊಸಳೆ ಎಳೆದೊಯ್ದಿರುವ ಘಟನೆ ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮದ ಬಳಿ ನಡೆದಿದೆ. ನದಿಯಲ್ಲಿ ಈಜಾಡುತ್ತಿದ್ದ 16 ವರ್ಷದ ಮಂಜುನಾಥ್​ನನ್ನು ಮೊಸಳೆ ಏಕಾಏಕಿ ಎಳೆದೊಯ್ದಿದೆ. ಘಟನಾ ಸ್ಥಳಕ್ಕೆ ಸ್ಥಳೀಯರು ಹಾಗೂ ಲಿಂಗಸುಗೂರು ಪೊಲೀಸರು ಭೇಟಿ ನೀಡಿದ್ದು, ಬಾಲಕನಿಗಾಗಿ ಶೋಧಾ ಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ಲಿಂಗಸಗೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sadhu srinath

|

Apr 19, 2020 | 2:54 PM

ರಾಯಚೂರು: ಕೃಷ್ಣಾ ನದಿ ಹಿನ್ನೀರಿನಲ್ಲಿ ಈಜಾಡುತ್ತಿದ್ದ ಬಾಲಕನನ್ನು ಮೊಸಳೆ ಎಳೆದೊಯ್ದಿರುವ ಘಟನೆ ಲಿಂಗಸುಗೂರು ತಾಲೂಕಿನ ಚಿತ್ತಾಪುರ ಗ್ರಾಮದ ಬಳಿ ನಡೆದಿದೆ. ನದಿಯಲ್ಲಿ ಈಜಾಡುತ್ತಿದ್ದ 16 ವರ್ಷದ ಮಂಜುನಾಥ್​ನನ್ನು ಮೊಸಳೆ ಏಕಾಏಕಿ ಎಳೆದೊಯ್ದಿದೆ.

ಘಟನಾ ಸ್ಥಳಕ್ಕೆ ಸ್ಥಳೀಯರು ಹಾಗೂ ಲಿಂಗಸುಗೂರು ಪೊಲೀಸರು ಭೇಟಿ ನೀಡಿದ್ದು, ಬಾಲಕನಿಗಾಗಿ ಶೋಧಾ ಕಾರ್ಯ ನಡೆಸುತ್ತಿದ್ದಾರೆ. ಈ ಸಂಬಂಧ ಲಿಂಗಸಗೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada