ಸದಲಗಾ ಪೊಲೀಸರಿಂದ ಥಳಿತ, CRPF ಯೋಧನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

|

Updated on: Apr 29, 2020 | 6:17 PM

ಬೆಳಗಾವಿ: ಜಿಲ್ಲೆಯ ಸದಲಗಾ ಪೊಲೀಸರು CRPF ಯೋಧ ಸಚಿನ್ ವಿಷಯದಲ್ಲಿ ಸ್ವಲ್ಪ ಅತಿರೇಕವಾಗಿಯೇ ವರ್ತಿಸಿದ್ದಾರೆ ಅನ್ನಿಸುತ್ತದೆ. ಈ ಚಿತ್ರಗಳನ್ನು ನೋಡಿದ್ರೆ ಒಮ್ಮೆ ಎಂಥ ಕಟುಕನಿಗೂ ಮನಸ್ಸು ಘಾಸಿಕೊಳ್ಳುತ್ತದೆ. ಸಿಆರ್‌ಪಿಎಪ್ ಯೋಧನ ಬಂಧಿಸಿದ ಸದರಿ ಸದಲಗಾ ಪೊಲೀಸರು ಆತನ ಹಿಂಭಾಗದ ಮೇಲೆ ಬಾಸುಂಡೆ ಬರುವ ಹಾಗೆ ಥಳಿಸಿದ್ದಾರೆ. ಯುವ ಯೋಧ ಸಚಿನ್​ಗೆ ಸದಲಗಾ ಪೊಲೀಸರು ಹಿಗ್ಗಾಮಗ್ಗಾ ಥಳಿಸಿರುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಏ.23 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಮತ್ತು […]

ಸದಲಗಾ ಪೊಲೀಸರಿಂದ ಥಳಿತ, CRPF ಯೋಧನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
Follow us on

ಬೆಳಗಾವಿ: ಜಿಲ್ಲೆಯ ಸದಲಗಾ ಪೊಲೀಸರು CRPF ಯೋಧ ಸಚಿನ್ ವಿಷಯದಲ್ಲಿ ಸ್ವಲ್ಪ ಅತಿರೇಕವಾಗಿಯೇ ವರ್ತಿಸಿದ್ದಾರೆ ಅನ್ನಿಸುತ್ತದೆ. ಈ ಚಿತ್ರಗಳನ್ನು ನೋಡಿದ್ರೆ ಒಮ್ಮೆ ಎಂಥ ಕಟುಕನಿಗೂ ಮನಸ್ಸು ಘಾಸಿಕೊಳ್ಳುತ್ತದೆ.

ಸಿಆರ್‌ಪಿಎಪ್ ಯೋಧನ ಬಂಧಿಸಿದ ಸದರಿ ಸದಲಗಾ ಪೊಲೀಸರು ಆತನ ಹಿಂಭಾಗದ ಮೇಲೆ ಬಾಸುಂಡೆ ಬರುವ ಹಾಗೆ ಥಳಿಸಿದ್ದಾರೆ. ಯುವ ಯೋಧ ಸಚಿನ್​ಗೆ ಸದಲಗಾ ಪೊಲೀಸರು ಹಿಗ್ಗಾಮಗ್ಗಾ ಥಳಿಸಿರುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಏ.23 ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಮತ್ತು ಯೋಧನ ನಡುವೆ ಗಲಾಟೆಯಾಗಿತ್ತು. ನಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಯೋಧ ಸಚಿನ್ ಗೆ ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಯೋಧ ಸಚಿನ್, ನಿನ್ನೆಯಷ್ಟೇ ಜಾಮೀನು ಮೇಲೆ ಹೊರ ಬಂದಿದ್ದು ಇಲ್ಲಿನ CRPF ಘಟಕಕ್ಕೆ ಮರಳಿದ್ದಾರೆ.

ಈ ಮಧ್ಯೆ, ಸಿಆರ್‌ಪಿಎಫ್ ಅಧಿಕಾರಿಗಳು ಯೋಧ ಸಚಿನ್ ಸಾವಂತ್​ನನ್ನು ವೈದ್ಯಕೀಯ ತಪಾಸಣೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಸಚಿನ್ ಗಾಯಗಳಿಗೆ ಇದೇ ವೇಳೆ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

Published On - 3:09 pm, Wed, 29 April 20