Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿರ್ಭಯಾ’ ಟೆಂಡರ್ ವಿವಾದ: ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಡಿ.ರೂಪಾ ಉತ್ತರ

ವಿವಾದಕ್ಕೆ ಸಂಬಂಧಿಸಿದಂತೆ ಡಿ.ರೂಪಾ ಅವರಿಗೆ 7 ಪ್ರಶ್ನೆಗಳನ್ನು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೇಳಿದ್ದರು. ಈ ಪೈಕಿ ಬಹುತೇಕ ಪ್ರಶ್ನೆಗಳಿಗೆ ರೂಪಾ ಲಿಖಿತ ಉತ್ತರ ನೀಡಿದ್ದಾರೆ. ಐದು ಪುಟಗಳಷ್ಟಿರುವ ಉತ್ತರಗಳಲ್ಲಿ ಹಲವು ದಾಖಲೆಗಳ ಬಗ್ಗೆ ರೂಪಾ ಪ್ರಸ್ತಾಪಿಸಿದ್ದಾರೆ.

‘ನಿರ್ಭಯಾ’ ಟೆಂಡರ್ ವಿವಾದ: ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಡಿ.ರೂಪಾ ಉತ್ತರ
ಗೃಹ ಕಾರ್ಯದರ್ಶಿ ಡಿ. ರೂಪಾ ಮೌದ್ಗಿಲ್​
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Dec 28, 2020 | 7:28 PM

ಬೆಂಗಳೂರು: ‘ನಿರ್ಭಯಾ’ ನಿಧಿಯನ್ನು ಬಳಸಿಕೊಂಡು ನಗರದಲ್ಲಿ ಮಹಿಳೆಯರ ಸುರಕ್ಷೆಗಾಗಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ನಿರ್ವಹಿಸಲು ಟೆಂಡರ್​ ಕರಡು ರೂಪಿಸುವ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ (ಎಸಿಎಸ್) ರಜನೀಶ್​ ಗೋಯೆಲ್ ಅವರಿಗೆ ಡಿ.ರೂಪಾ ಸೋಮವಾರ ವಿವರಣೆ ನೀಡಿದ್ದಾರೆ.

ವಿವಾದಕ್ಕೆ ಸಂಬಂಧಿಸಿದಂತೆ ಡಿ.ರೂಪಾ ಅವರಿಗೆ 7 ಪ್ರಶ್ನೆಗಳನ್ನು ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೇಳಿದ್ದರು. ಈ ಪೈಕಿ ಬಹುತೇಕ ಪ್ರಶ್ನೆಗಳಿಗೆ ರೂಪಾ ಲಿಖಿತ ಉತ್ತರ ನೀಡಿದ್ದಾರೆ. ಐದು ಪುಟಗಳಷ್ಟಿರುವ ಉತ್ತರಗಳಲ್ಲಿ ಹಲವು ದಾಖಲೆಗಳ ಬಗ್ಗೆ ರೂಪಾ ಪ್ರಸ್ತಾಪಿಸಿದ್ದಾರೆ. ತಮಗೆ ಜವಾಬ್ದಾರಿ ಯಾರು ನೀಡಿದ್ದರೆಂಬ ಪ್ರಶ್ನೆಗೆ ಮತ್ತು ತಮಗೆ ಫೈಲ್ ಕಳಿಸಿದವರು ಯಾರು ಪ್ರಶ್ನೆಗೆ ರೂಪಾ ಉತ್ತರಿಸಿಲ್ಲ.

ಬಿಇಎಲ್ ಕಂಪನಿಯು ಪ್ರಧಾನಿ ಕಚೇರಿಗೆ ನೀಡಿದ್ದ ದೂರು ಮತ್ತು ಸಾರ್ವಜನಿಕವಾಗಿ ಬಂದಿದ್ದ ದೂರಿನ ಪ್ರತಿಯನ್ನು ರೂಪಾ ಸಲ್ಲಿಸಿದ್ದಾರೆ. ಟೆಂಡರ್​ ಪ್ರಕ್ರಿಯೆಯಲ್ಲಿ ಎನ್​ಸಿಸಿ ಮತ್ತು ಮ್ಯಾಟ್ರಿಕ್ಸ್​ ಕಂಪನಿಗಳು ಭಾಗವಹಿಸಿದ್ದವು. ಎರಡೂ ಕಂಪನಿಗಳಿಗೂ ಒಬ್ಬರೇ ಸಾಮಾನ್ಯ ನಿರ್ದೇಶಕರು ಇರುವ ವಿಚಾರವನ್ನೂ ಉತ್ತರದಲ್ಲಿ ಪ್ರಸ್ತಾಪಿಸಿದ್ದಾರೆ. ಕೆಟಿಪಿಪಿ (ಕರ್ನಾಟಕ ಟ್ರಾನ್ಸ್​ಪರೆನ್ಸಿ ಇನ್ ಪಬ್ಲಿಕ್ ಪ್ರೊಕ್ಯೂರ್​ಮೆಂಟ್ ಆ್ಯಕ್ಟ್) ಉಲ್ಲಂಘನೆಯಾಗಿರುವ ಬಗ್ಗೆಯ ರೂಪಾ ಮಾಹಿತಿ ನೀಡಿದ್ದಾರೆ.

ನಿರ್ಭಯಾ ಸೇಫ್ ಸಿಟಿ ಟೆಂಡರ್ ಮಾಹಿತಿ ಸೋರಿಕೆ ಪ್ರಕರಣ: ಉನ್ನತ ಮಟ್ಟದ ತನಿಖಾ ಸಮಿತಿ ರಚಿಸಿದ ಸರ್ಕಾರ

ನಿರ್ಭಯಾ ನಿಧಿ ಮಹಿಳಾ ಸುರಕ್ಷತಾ ಯೋಜನೆ: ಗೃಹ ಕಾರ್ಯದರ್ಶಿ ರೂಪಾ ಅವರಿಂದ ದಾಖಲೆ ಬಿಡುಗಡೆ, ವಿವಾದಕ್ಕೆ ಹೊಸ ಆಯಾಮ

ನಿರ್ಭಯಾ ಸೇಫ್ ಸಿಟಿ ಟೆಂಡರ್​ಗೆ ಬಿಇಎಲ್ ಬಿಡ್ ಮಾಡಿರಲಿಲ್ಲ: ಹೇಮಂತ್ ನಿಂಬಾಳ್ಕರ್