ಅಡಿಕೆ ವ್ಯಾಪಾರಿ ಬಳಿ ದರೋಡೆ ಮಾಡಿ ಪರಾರಿಯಾಗಿದ್ದ ನಾಲ್ವರು ಅರೆಸ್ಟ್, ಮತ್ತಿಬ್ಬರಿಗಾಗಿ ಶೋಧ

|

Updated on: Feb 05, 2021 | 9:42 AM

Robbery ಕಾರು, ಬೈಕ್‌ನಲ್ಲಿ ಬಂದು ದರೋಡೆ ಮಾಡಿ ಪರಾರಿಯಾಗಿದ್ದ ನಾಲ್ವರು ದರೋಡೆಕೋರರನ್ನು ಪೊಲೀಸರು ಬಂಧಿಸಿದ್ದಾರೆ.

ಅಡಿಕೆ ವ್ಯಾಪಾರಿ ಬಳಿ ದರೋಡೆ ಮಾಡಿ ಪರಾರಿಯಾಗಿದ್ದ ನಾಲ್ವರು ಅರೆಸ್ಟ್, ಮತ್ತಿಬ್ಬರಿಗಾಗಿ ಶೋಧ
ದರೋಡೆ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳು
Follow us on

ಬೆಂಗಳೂರು: ಕಾರು, ಬೈಕ್‌ನಲ್ಲಿ ಬಂದು ದರೋಡೆ ಮಾಡಿ ಪರಾರಿಯಾಗಿದ್ದ ನಾಲ್ವರು ದರೋಡೆಕೋರರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ದಾಬಸ್‌ಪೇಟೆ ಪೊಲೀಸರು ನಾಲ್ವರು ಆರೋಪಿಗಳನ್ನ ಸೆರೆ ಹಿಡಿದಿದ್ದಾರೆ. ತುಮಕೂರು ಮೂಲದ ರೌಡಿಶೀಟರ್ ಸೋಮಶೇಖರ್(37), ನಾಗಾರ್ಜುನ(31), ಸುನಿಲ್(29), ಗಜ(33)ನನ್ನು ಪೊಲೀಸರು ಬಂಧಿಸಿದ್ದು ಆರೋಪಿಗಳಾದ ಮಧು(32) ಮತ್ತು ಸತೀಶ್‌(33)ಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಜನವರಿ 29ರಂದು ಕಾರು ಮತ್ತು ಬೈಕ್​ನಲ್ಲಿ ಬಂದು ಅಡಕೆ ವ್ಯಾಪಾರಿ ಕಾರು ತಡೆದು ಮಣಿಕಂಠನ್‌ ಬಳಿ 5 ಲಕ್ಷ ನಗದು, ಚಿನ್ನದ ಸರ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಈ ಪ್ರಕರಣ ಸಂಬಂಧ ದರೋಡೆಕೋರರನ್ನು ಹುಡುಕುತ್ತಿದ್ದ ಪೊಲೀಸರು ಕೊನೆಗೂ ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಆದ್ರೆ ಮತ್ತಿಬ್ಬರು ತಲೆ ಮರಿಸಿಕೊಂಡಿದ್ದು ಹುಡುಕಾಟ ನಡೆಸಲಾಗುತ್ತಿದೆ. ಬಂಧಿತರಿಂದ ಕಾರು, ಬೈಕ್, ಚಿನ್ನದ ಸರ, 4 ಲಕ್ಷ ರೂ. ಜಪ್ತಿ ಮಾಡಲಾಗಿದೆ.

ಅಡಕೆ ವ್ಯಾಪಾರಿ ಅಡ್ಡಗಟ್ಟಿ ನಗದು, ಚಿನ್ನದ ಸರ ದರೋಡೆ.. ಫಾಲೋ ಮಾಡಿಕೊಂಡು ಬಂದ ದುಷ್ಕರ್ಮಿಗಳಿಂದ ಕೃತ್ಯ

2 ವರ್ಷಗಳ ಹಿಂದೆ.. ಅಡಿಕೆ ವ್ಯಾಪಾರಿಯ 35 ಲಕ್ಷ ದೋಚಿದ್ದ ಕಿರಾತಕರು ಇಂದು ಲಾಕ್​!