2 ವರ್ಷಗಳ ಹಿಂದೆ.. ಅಡಿಕೆ ವ್ಯಾಪಾರಿಯ 35 ಲಕ್ಷ ದೋಚಿದ್ದ ಕಿರಾತಕರು ಇಂದು ಲಾಕ್​!

2 ವರ್ಷಗಳ ಹಿಂದೆ ವ್ಯಾಪಾರಿಯೊಬ್ಬರ ಬಳಿ 35 ಲಕ್ಷ ನಗದು ದೋಚಿ ಪರಾರಿಯಾಗಿದ್ದ ಖದೀಮರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರಿಂದ ನಾಲ್ವರ ಬಂಧನವಾಗಿದೆ.

  • TV9 Web Team
  • Published On - 17:47 PM, 24 Jan 2021
2 ವರ್ಷಗಳ ಹಿಂದೆ.. ಅಡಿಕೆ ವ್ಯಾಪಾರಿಯ 35 ಲಕ್ಷ ದೋಚಿದ್ದ ಕಿರಾತಕರು ಇಂದು ಲಾಕ್​!
2 ವರ್ಷಗಳ ಹಿಂದೆ ಅಡಿಕೆ ವ್ಯಾಪಾರಿಯ 35 ಲಕ್ಷ ದೋಚಿದ್ದ ಕಿರಾತಕರು ಇಂದು ಲಾಕ್​

ಹುಬ್ಬಳ್ಳಿ: 2 ವರ್ಷಗಳ ಹಿಂದೆ ವ್ಯಾಪಾರಿಯೊಬ್ಬರ ಬಳಿ 35 ಲಕ್ಷ ನಗದು ದೋಚಿ ಪರಾರಿಯಾಗಿದ್ದ ಖದೀಮರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರಿಂದ ನಾಲ್ವರ ಬಂಧನವಾಗಿದೆ. ಬಂಧಿತರನ್ನು ಇಸಾಕ್ ಸುತಾರ್, ದಾದಾಪೀರ್ ನದಾಫ್, ಖಾಜಾ ದುಕಾಂದರ್ ಹಾಗೂ ಆಸಿಫ್ ಬಂಕಾಪುರ್ ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ?
ಆರೋಪಿಗಳು ಸುಮಾರು 2 ವರ್ಷಗಳ ಹಿಂದೆ ಶಿರಸಿಯ ಅಡಕೆ ವ್ಯಾಪಾರಿಗೆ ಸೇರಿದ್ದ 35 ಲಕ್ಷ ರೂಪಾಯಿ ನಗದನ್ನು ದೋಚಿದ್ರು. ನಗರದ ದುರ್ಗದ ಬೈಲನಲ್ಲಿರುವ ವ್ಯಾಪಾರಿಯೊಬ್ಬರಿಂದ ಹಣ ಪಡೆದು ಶಿರಸಿಯ ಅಡಿಕೆ ವ್ಯಾಪಾರಿಯ ನೌಕರ ರಜಾಕ್​ ಬಸ್​ನಲ್ಲಿ ತನ್ನ ಊರಿಗೆ ತೆರಳುತ್ತಿದ್ದರು. ಈ ವೇಳೆ, ದರೋಡೆಕೋರರು ನಗರದ ಹೊರವಲಯದ ಕಾರವಾರ ರಸ್ತೆಯಲ್ಲಿ ಬಸ್​ನ ಅಡ್ಡಗಟ್ಟಿ ಸಿನಿಮೀಯ ಸ್ಟೈಲ್​ನಲ್ಲಿ ರಜಾಕ್​ನಿಂದ ಹಣವಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದರು.

ಈ ಕುರಿತು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ, ಹಳೇ ಹುಬ್ಬಳ್ಳಿ ಠಾಣೆಯ ಇನ್​ಸ್ಪೆಕ್ಟರ್​ ಕಮತರ ಅವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ತಲೆಮರೆಸಿಕೊಂಡಿರುವ ಉಳಿದ ಮೂವರು ಆರೋಪಿಗಳಿಗಾಗಿ ಪೊಲೀಸರ ಶೋಧಕಾರ್ಯ ನಡೆಸುತ್ತಿದ್ದಾರೆ.

 

ಈಜಲು ಹೋಗುತ್ತೇನೆ ಎಂದು ನಿನ್ನೆ ಮನೆಯಿಂದ ತೆರಳಿದ್ದ ಬಾಲಕ.. ಇಂದು ಕೆರೆಯಲ್ಲಿ ಶವವಾಗಿ ಪತ್ತೆ