ಧಾರವಾಡ ಅಪಘಾತದ ಬಗ್ಗೆ ವರದಿ ನೀಡಿ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸಮಿತಿ ಸೂಚನೆ
ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆಯ 32 ಕಿ.ಮೀ ಅಂತರದಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆದ ಅಪಘಾತ ಮತ್ತು ಅದರಲ್ಲಿ ಮೃತಪಟ್ಟವರ ಬಗ್ಗೆಯೂ ವರದಿ ನೀಡಿ. ಈ ವರದಿ ಫೆಬ್ರವರಿ 15ರ ಒಳಗೆ ನಮ್ಮ ಕೈ ಸೇರಬೇಕು ಎಂದು ಸಮಿತಿ ಸೂಚಿಸಿದೆ.
ನವದೆಹಲಿ: ಧಾರವಾಡದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 13 ಜನರು ಮೃತಪಟ್ಟಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಸ್ತೆ ಸುರಕ್ಷತೆಯ ಕುರಿತ ಸುಪ್ರೀಂ ಕೋರ್ಟ್ ಸಮಿತಿ ಈ ಕುರಿತು ವರದಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ರಾಜ್ಯ ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅರ್ಜುನ್ ಪರ್ವೇಜ್ ಅವರಿಗೆ ಸಮಿತಿ ಪತ್ರವನ್ನು ಕಳುಹಿಸಿದೆ. ಜನವರಿ 15ರಂದು ಧಾರವಾಡದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ಈ ಪ್ರಕರಣದ ವಿಸ್ತೃತ ವರದಿ ನೀಡುವಂತೆ ನಾವು ಸೂಚಿಸುತ್ತಿದ್ದೇವೆ. ಅಲ್ಲದೆ, ಮುಂದಿನ ದಿನಗಳಲ್ಲಿ ಅಪಘಾತ ತಡೆಯಲು ತೆಗೆದುಕೊಳ್ಳುವ ಕ್ರಮದ ಬಗ್ಗೆ ವಿವರಿಸಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ 32 ಕಿ.ಮೀ ಅಂತರದಲ್ಲಿ ಕಳೆದ ಎರಡು ವರ್ಷಗಳಲ್ಲಿ ನಡೆದ ಅಪಘಾತ ಮತ್ತು ಅದರಲ್ಲಿ ಎಷ್ಟು ಜನ ಮೃತಪಟ್ಟಿ್ದಾರೆ ಎನ್ನುವ ಬಗ್ಗೆಯೂ ವರದಿ ನೀಡಿ. ಈ ವರದಿ ಫೆಬ್ರವರಿ 15ರ ಒಳಗೆ ನಮ್ಮ ಕೈ ಸೇರಬೇಕು ಎಂದು ಸಮಿತಿ ಸೂಚಿಸಿದೆ.
ಜನವರಿ 15ರಂದು ದಾವಣಗೆರೆಯ ಒಟ್ಟು 16 ಮಂದಿ ಟಿಟಿ ವಾಹನದಲ್ಲಿ ಗೋವಾಗೆ ಹೊರಟ್ಟಿದ್ದರು. ಈ ಪೈಕಿ 14 ಮಂದಿ ಮಹಿಳೆಯರು ಮತ್ತು ಒಬ್ಬ ಡೈವರ್ ಹಾಗೂ ಕ್ಲೀನರ್ ಇದ್ದರು. ಧಾರವಾಡ ತಾಲೂಕಿನ ಇಟ್ಟಿಗಟ್ಟಿ ಬಳಿಯ ರಾ. ಹೆ. 4ರಲ್ಲಿ ಟೆಂಪೊ ಟ್ರಾವೆಲರ್ಗೆ ಟಿಪ್ಪರ್ ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ 13 ಜನ ಮೃತಪಟ್ಟಿದ್ದರು.
ಧಾರವಾಡ ಅಪಘಾತ; ಗಂಟಲುಬ್ಬಿ ಕಣ್ಣೀರಾದ ಗೆಳತಿ ಹಂಚಿಕೊಂಡ ಒಡನಾಡಿಗಳ ನೆನಪು
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸಾವಿನ ರಸ್ತೆಯ ಅಟ್ಟಹಾಸ; ಕಣ್ಮುಚ್ಚಿ ಕುಳಿತರಾ ಅಧಿಕಾರಿಗಳು?