AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

2 ವರ್ಷಗಳ ಹಿಂದೆ.. ಅಡಿಕೆ ವ್ಯಾಪಾರಿಯ 35 ಲಕ್ಷ ದೋಚಿದ್ದ ಕಿರಾತಕರು ಇಂದು ಲಾಕ್​!

2 ವರ್ಷಗಳ ಹಿಂದೆ ವ್ಯಾಪಾರಿಯೊಬ್ಬರ ಬಳಿ 35 ಲಕ್ಷ ನಗದು ದೋಚಿ ಪರಾರಿಯಾಗಿದ್ದ ಖದೀಮರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರಿಂದ ನಾಲ್ವರ ಬಂಧನವಾಗಿದೆ.

2 ವರ್ಷಗಳ ಹಿಂದೆ.. ಅಡಿಕೆ ವ್ಯಾಪಾರಿಯ 35 ಲಕ್ಷ ದೋಚಿದ್ದ ಕಿರಾತಕರು ಇಂದು ಲಾಕ್​!
2 ವರ್ಷಗಳ ಹಿಂದೆ ಅಡಿಕೆ ವ್ಯಾಪಾರಿಯ 35 ಲಕ್ಷ ದೋಚಿದ್ದ ಕಿರಾತಕರು ಇಂದು ಲಾಕ್​
Follow us
KUSHAL V
|

Updated on: Jan 24, 2021 | 5:47 PM

ಹುಬ್ಬಳ್ಳಿ: 2 ವರ್ಷಗಳ ಹಿಂದೆ ವ್ಯಾಪಾರಿಯೊಬ್ಬರ ಬಳಿ 35 ಲಕ್ಷ ನಗದು ದೋಚಿ ಪರಾರಿಯಾಗಿದ್ದ ಖದೀಮರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರಿಂದ ನಾಲ್ವರ ಬಂಧನವಾಗಿದೆ. ಬಂಧಿತರನ್ನು ಇಸಾಕ್ ಸುತಾರ್, ದಾದಾಪೀರ್ ನದಾಫ್, ಖಾಜಾ ದುಕಾಂದರ್ ಹಾಗೂ ಆಸಿಫ್ ಬಂಕಾಪುರ್ ಎಂದು ಗುರುತಿಸಲಾಗಿದೆ.

ಏನಿದು ಪ್ರಕರಣ? ಆರೋಪಿಗಳು ಸುಮಾರು 2 ವರ್ಷಗಳ ಹಿಂದೆ ಶಿರಸಿಯ ಅಡಕೆ ವ್ಯಾಪಾರಿಗೆ ಸೇರಿದ್ದ 35 ಲಕ್ಷ ರೂಪಾಯಿ ನಗದನ್ನು ದೋಚಿದ್ರು. ನಗರದ ದುರ್ಗದ ಬೈಲನಲ್ಲಿರುವ ವ್ಯಾಪಾರಿಯೊಬ್ಬರಿಂದ ಹಣ ಪಡೆದು ಶಿರಸಿಯ ಅಡಿಕೆ ವ್ಯಾಪಾರಿಯ ನೌಕರ ರಜಾಕ್​ ಬಸ್​ನಲ್ಲಿ ತನ್ನ ಊರಿಗೆ ತೆರಳುತ್ತಿದ್ದರು. ಈ ವೇಳೆ, ದರೋಡೆಕೋರರು ನಗರದ ಹೊರವಲಯದ ಕಾರವಾರ ರಸ್ತೆಯಲ್ಲಿ ಬಸ್​ನ ಅಡ್ಡಗಟ್ಟಿ ಸಿನಿಮೀಯ ಸ್ಟೈಲ್​ನಲ್ಲಿ ರಜಾಕ್​ನಿಂದ ಹಣವಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದರು.

ಈ ಕುರಿತು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ, ಹಳೇ ಹುಬ್ಬಳ್ಳಿ ಠಾಣೆಯ ಇನ್​ಸ್ಪೆಕ್ಟರ್​ ಕಮತರ ಅವರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ತಲೆಮರೆಸಿಕೊಂಡಿರುವ ಉಳಿದ ಮೂವರು ಆರೋಪಿಗಳಿಗಾಗಿ ಪೊಲೀಸರ ಶೋಧಕಾರ್ಯ ನಡೆಸುತ್ತಿದ್ದಾರೆ.

ಈಜಲು ಹೋಗುತ್ತೇನೆ ಎಂದು ನಿನ್ನೆ ಮನೆಯಿಂದ ತೆರಳಿದ್ದ ಬಾಲಕ.. ಇಂದು ಕೆರೆಯಲ್ಲಿ ಶವವಾಗಿ ಪತ್ತೆ

ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ