ಅಡಕೆ ವ್ಯಾಪಾರಿ ಅಡ್ಡಗಟ್ಟಿ ನಗದು, ಚಿನ್ನದ ಸರ ದರೋಡೆ.. ಫಾಲೋ ಮಾಡಿಕೊಂಡು ಬಂದ ದುಷ್ಕರ್ಮಿಗಳಿಂದ ಕೃತ್ಯ
ಅಡಕೆ ವ್ಯಾಪಾರಿ ಮಣಿಕಂಠನ್ ತುಮಕೂರಿನಲ್ಲಿ ಅಡಕೆ ಮಾರಾಟ ಮಾಡಿ ಬರುತ್ತಿದ್ದಾಗ ಈ ಕೃತ್ಯ ನಡೆದಿದೆ. ಈ ಹಿಂದೆಯೇ ಮಣಿಕಂಠನ್ ನನ್ನು ಫಾಲೋ ಮಾಡುತ್ತಿದ್ದ ನಾಲ್ವರು ದುಷ್ಕರ್ಮಿಗಳು ಕಾರು, ಬೈಕ್ನಲ್ಲಿ ಬಂದು ಹಳೆ ನಿಜಗಲ್ ಗ್ರಾಮದ ಬಳಿ ಮಣಿಕಂಠನ್ ಕಾರು ಅಡ್ಡಗಟ್ಟಿ ಆತನನ್ನು ಬೆದರಿಸಿ ಆತನ ಬಳಿ ಇದ್ದ ₹5 ಲಕ್ಷ ನಗದು ಮತ್ತು ಚಿನ್ನದ ಸರ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ.
ನೆಲಮಂಗಲ: ಅಡಕೆ ವ್ಯಾಪಾರಿ ಅಡ್ಡಗಟ್ಟಿ ₹5 ಲಕ್ಷ ನಗದು ಮತ್ತು ಚಿನ್ನದ ಸರ ದರೋಡೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4 ಹಳೆ ನಿಜಗಲ್ ಗ್ರಾಮದ ಬಳಿ ನಡೆದಿದೆ.
ತಮಿಳುನಾಡು ಮೂಲದ ಮಣಿಕಂಠನ್(51) ದರೋಡೆಗೆ ಒಳಗಾದವರು. ಅಡಕೆ ವ್ಯಾಪಾರಿ ಮಣಿಕಂಠನ್ ತುಮಕೂರಿನಲ್ಲಿ ಅಡಕೆ ಮಾರಾಟ ಮಾಡಿ ಬರುತ್ತಿದ್ದಾಗ ಈ ಕೃತ್ಯ ನಡೆದಿದೆ. ಈ ಹಿಂದೆಯೇ ಮಣಿಕಂಠನ್ ನನ್ನು ಫಾಲೋ ಮಾಡುತ್ತಿದ್ದ ನಾಲ್ವರು ದುಷ್ಕರ್ಮಿಗಳು ಕಾರು, ಬೈಕ್ನಲ್ಲಿ ಬಂದು ಹಳೆ ನಿಜಗಲ್ ಗ್ರಾಮದ ಬಳಿ ಮಣಿಕಂಠನ್ ಕಾರು ಅಡ್ಡಗಟ್ಟಿ ಆತನನ್ನು ಬೆದರಿಸಿ ಆತನ ಬಳಿ ಇದ್ದ ₹5 ಲಕ್ಷ ನಗದು ಮತ್ತು ಚಿನ್ನದ ಸರ ದರೋಡೆ ಮಾಡಿ ಎಸ್ಕೇಪ್ ಆಗಿದ್ದಾರೆ. ದಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹಣ ಕಳೆದುಕೊಂಡು ಮಣಿಕಂಠನ್ ಕಂಗಾಲಾಗಿದ್ದಾರೆ.
OLXನಲ್ಲಿ ವಸ್ತು ಖರೀದಿಸುವ ನೆಪದಲ್ಲಿ ದರೋಡೆ ಮಾಡ್ತಿದ್ದ ಮೂವರ ಸೆರೆ