ಚಿಕ್ಕಮಗಳೂರು: ಕಾಫಿನಾಡಲ್ಲಿ ಕೊರೊನಾ ಹೆಮ್ಮಾರಿ ನಿಧಾನವಾಗಿ ಹರಡುತ್ತಿದೆ. ಈ ಮಧ್ಯೆ ನಗರದಲ್ಲಿ ಖದೀಮರ ಹಾವಳಿಯು ಹೆಚ್ಚಾಗ್ತಿದೆ. ಇದಕ್ಕೆ ಸಾಕ್ಷಿಯೆಂಬಂತೆ ನಗರದ ಎಂ.ಜಿ.ರಸ್ತೆಯಲ್ಲಿರುವ ಚಿನ್ನದಂಗಡಿ ಒಂದರಲ್ಲಿ ಮಾಲೀಕನ ಮೇಲೆ ಫೈರಿಂಗ್ ಮಾಡಿ ಕಳ್ಳರು ದರೋಡೆ ಮಾಡಲು ಯತ್ನಿಸಿದ್ದಾರೆ.
ಪಲ್ಸರ್ ಬೈಕ್ನಲ್ಲಿ ಬಂದಿದ್ದ ಮೂವರು ದರೋಡೆಕೋರರು ಸಿನಿಮೀಯ ರೀತಿಯಲ್ಲಿ ಕೇಸರಿ ಜ್ಯುವೆಲ್ಲರಿ ಅಂಗಡಿಯ ಒಳನುಗ್ಗಿದ್ದಾರೆ. ಶಾಪ್ ಮಾಲೀಕನಿಗೆ ಗನ್ ತೋರಿಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ. ಈ ವೇಳೆ ಶಾಪ್ ಮಾಲೀಕ ಕೂಗಿಕೊಂಡಾಗ ಆತನನ್ನು ಬೆದರಿಸಲು ಫೈರಿಂಗ್ ಖದೀಮರು ಮಾಡಿದ್ದಾರೆ. ನಂತರ ಸದ್ದು ಕೇಳಿ ಅಲ್ಲಿ ಜಮಾವಣೆಗೊಂಡ ಸ್ಥಳೀಯರನ್ನ ಕಂಡು ಕೂಡಲೇ ಎಸ್ಕೇಪ್ ಆಗಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿಕೊಟ್ಟ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.
Published On - 1:19 pm, Sat, 11 July 20