ಸೋಂಕಿತ ಗರ್ಭಿಣಿಯ ಪರದಾಟ: ಹೆರಿಗೆ ನೋವು ಕಾಣಿಸಿಕೊಂಡರೂ ಸಿಗದ ಚಿಕಿತ್ಸೆ
ಬೆಂಗಳೂರು: ನಗರದಲ್ಲಿ ಸೋಂಕಿತರಿಗೆ ಆಸ್ಪತ್ರೆಗೆ ಅಡ್ಮಿಷನ್ ಸಿಗದೇ ಪರದಾಡುತ್ತಿರುವ ಘಟನೆಗಳು ಸಾಕಷ್ಟು ಕಂಡು ಬಂದಿವೆ. ಇದೀಗ ಸೋಂಕಿತ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡರೂ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ದಾಖಲಿಸಿಕೊಳ್ಳುತ್ತಿಲ್ಲವಂತೆ ಎಂದು ತಿಳಿದುಬಂದಿದೆ. ನಗರದ ಕಾವಲಭೈರಸಂದ್ರದ ನಿವಾಸಿಯಾಗಿರುವ ಮಹಿಳೆಗೆ ನಿನ್ನೆ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಹೀಗಾಗಿ, ಆಸ್ಪತ್ರೆಗೆ ದಾಖಲಾಗಲು ಮುಂದಾಗಿದ್ದಾರೆ. ಆದರೆ, ಇವರನ್ನ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ದಾಖಲಿಸಿಕೊಳ್ಳುತ್ತಿಲ್ಲವಂತೆ. ಈ ಮಧ್ಯೆ ಗರ್ಭಿಣಿಗೆ ಇಂದು ಅಥವಾ ನಾಳೆ ಡೆಲಿವರಿ ಡೇಟ್ ಎಂದು ನಿಗದಿಯಾಗಿದ್ದು ಈಗಾಗ್ಲೆ ಹೆರಿಗೆ ನೋವು […]
ಬೆಂಗಳೂರು: ನಗರದಲ್ಲಿ ಸೋಂಕಿತರಿಗೆ ಆಸ್ಪತ್ರೆಗೆ ಅಡ್ಮಿಷನ್ ಸಿಗದೇ ಪರದಾಡುತ್ತಿರುವ ಘಟನೆಗಳು ಸಾಕಷ್ಟು ಕಂಡು ಬಂದಿವೆ. ಇದೀಗ ಸೋಂಕಿತ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡರೂ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ದಾಖಲಿಸಿಕೊಳ್ಳುತ್ತಿಲ್ಲವಂತೆ ಎಂದು ತಿಳಿದುಬಂದಿದೆ.
ನಗರದ ಕಾವಲಭೈರಸಂದ್ರದ ನಿವಾಸಿಯಾಗಿರುವ ಮಹಿಳೆಗೆ ನಿನ್ನೆ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ. ಹೀಗಾಗಿ, ಆಸ್ಪತ್ರೆಗೆ ದಾಖಲಾಗಲು ಮುಂದಾಗಿದ್ದಾರೆ. ಆದರೆ, ಇವರನ್ನ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ದಾಖಲಿಸಿಕೊಳ್ಳುತ್ತಿಲ್ಲವಂತೆ.
ಈ ಮಧ್ಯೆ ಗರ್ಭಿಣಿಗೆ ಇಂದು ಅಥವಾ ನಾಳೆ ಡೆಲಿವರಿ ಡೇಟ್ ಎಂದು ನಿಗದಿಯಾಗಿದ್ದು ಈಗಾಗ್ಲೆ ಹೆರಿಗೆ ನೋವು ಶುರುವಾಗಿದೆ. ಹೀಗಾಗಿ, ಇವರ ಕುಟುಂಬದವರು ಹೆರಿಗೆ ಮಾಡಿಸಲು ಎಷ್ಟೇ ಅಲೆದಾಡಿದ್ರೂ ಯಾವ ಆಸ್ಪತ್ರೆಯೂ ಇವರನ್ನು ದಾಖಲಿಸಿಕೊಳ್ಳುತ್ತಿಲ್ಲವಂತೆ ಎಂದು ತಿಳಿದುಬಂದಿದೆ.
Published On - 12:49 pm, Sat, 11 July 20