ದಿನಭವಿಷ್ಯ | ಜನವರಿ 20, 2021

|

Updated on: Jan 20, 2021 | 6:18 AM

ಜನವರಿ 20, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನಭವಿಷ್ಯ.

ದಿನಭವಿಷ್ಯ | ಜನವರಿ 20, 2021
ದಿನ ಭವಿಷ್ಯ
Follow us on

ನಿತ್ಯ ಪಂಚಾಂಗ: ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಪುಷ್ಯಮಾಸ, ಹೇಮಂತ ಋತು, ಶುಕ್ಲಪಕ್ಷ, ಸಪ್ತಮಿ ತಿಥಿ, ಬುಧವಾರ, ಜನವರಿ 20, 2021. ರೇವತಿ ನಕ್ಷತ್ರ, ರಾಹುಕಾಲ: ಇಂದು ಬೆಳಗ್ಗೆ 12.26 ರಿಂದ ಮಧ್ಯಾಹ್ನ 1.50. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.49. ಸೂರ್ಯಾಸ್ತ: ಸಂಜೆ 6.4.

ತಾ. 20-01-2021 ರ ಬುಧವಾರದ ರಾಶಿ ಭವಿಷ್ಯ

ಮೇಷ: ಆತ್ಮೀಯರೊಂದಿಗೆ ಮನಸ್ತಾಪವಾಗುವುದು. ಸ್ವಂತ ಉದ್ಯಮಿಗಳು ಹಾನಿ ತಪ್ಪಿಸುವ ಉಪಾಯ ಮಾಡಿ. ವ್ಯಾಪಾರದ ವಿಷಯದಲ್ಲಿ ಮೋಸವಾಗುವ ಸಾಧ್ಯತೆ ಇದೆ. ಸಾಲಗಾರರು ಸಹಕಾರ ತೋರುವರು. ಶುಭ ಸಂಖ್ಯೆ: 6

ವೃಷಭ: ಅತಿಯಾದ ಮಾತು ಅಪಾಯಕ್ಕೆ ಕಾರಣ. ಆಲಸ್ಯದಿಂದ ಕಾರ್ಯಹಾನಿಯಾಗುವ ಸಾಧ್ಯತೆ ಇದೆ. ಆಸ್ತಿ ವ್ಯವಹಾರಗಳಲ್ಲಿ ತಜ್ಞರ ಸಹಾಯ ಪಡೆಯಿರಿ. ನೌಕರರಿಗೆ ಅಪೇಕ್ಷಿತ ಸ್ಥಾನಕ್ಕೆ ವರ್ಗಾವಣೆ ಆಗುವ ಯೋಗವಿದೆ. ಶುಭ ಸಂಖ್ಯೆ: 8

ಮಿಥುನ: ಜವಾಬ್ದಾರಿಯ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಇರುವುದು. ಅಹಂಭಾವದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಪ್ರಸಂಗವಿದೆ ಎಚ್ಚರಿಕೆ ವಹಿಸಿರಿ. ನಮ್ರತೆಗೆ ಯೋಗ್ಯ ಸಮ್ಮಾನ ದೊರೆಯುವದು. ಶುಭ ಸಂಖ್ಯೆ: 4

ಕಟಕ: ಅತಿಯಾದ ಆತ್ಮವಿಶ್ವಾಸ ಪ್ರಗತಿಗೆ ಮಾರಕವಾಗುವ ಲಕ್ಷಣವಿದೆ. ವ್ಯವಹಾರದಲ್ಲಿ ಅಡೆತಡೆಗಳು ಕಂಡುಬರುವವು. ಅನಿವಾರ್ಯ ಕೆಲಸಗಳಗೆ ಅಲೆದಾಟ ಕಂಡುಬರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುವುದು. ಶುಭ ಸಂಖ್ಯೆ: 3

ಸಿಂಹ: ಬಂಧುವರ್ಗದಲ್ಲಿ ನಕಾರಾತ್ಮಕ ಚಿಂತನೆ ಇರುವುದು. ಸತತ ಪ್ರಯತ್ನವಿಲ್ಲದೇ ಫಲ ದೊರೆಯಲಾರದು. ದಿನನಿತ್ಯದ ಕೆಲಸಕ್ಕೂ ವಿನಾಕಾರಣ ಅಡೆತಡೆ ಕಂಡುಬರುವ ಲಕ್ಷಣವಿದೆ. ಬುದ್ಧಿಯಿಂದ ತಾಳ್ಮೆ ಕಳೆದುಕೊಳ್ಳದೇ ಮುಂದುವರೆಯಿರಿ. ಶುಭ ಸಂಖ್ಯೆ: 2

ಕನ್ಯಾ: ದೈಹಿಕ ಸಮಸ್ಯೆಗಳು ಉಲ್ಬಣವಾಗಿ ಕೆಲಸಕ್ಕೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಕಾರ್ಯ ವಿರೋಧ ಇರುವುದು. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆಯ ನಡೆ ಅಗತ್ಯ. ಮಾತಿಗಿಂತ ಕೃತಿಗೆ ಮಹತ್ವ ಕೊಡಿ. ಶುಭ ಸಂಖ್ಯೆ: 9

ತುಲಾ: ಧಾರ್ಮಿಕ ಕ್ಷೇತ್ರದಲ್ಲಿ ಗೌರವ ಸಮ್ಮಾನಗಳು ದೊರೆಯುವವು. ಅತಿಯಾದ ನಿರೀಕ್ಷೆಯಿಂದ ಅಸಮಾಧಾನ ಕಂಡುಬರುವುದು. ದೂರುವವರೇ ಹೊಗಳಿದರೂ ನೆಮ್ಮದಿ ಇರಲಾರದು. ಸ್ವಯಂ ಪ್ರತಿಷ್ಠೆಗೆ ಧನ ವ್ಯಯ ಆಗುವ ಸಾಧ್ಯತೆ ಇದೆ. ಶುಭ ಸಂಖ್ಯೆ: 7

ವೃಶ್ಚಿಕ: ಹೊಟ್ಟೆಕಿಚ್ಚಿನ ಜನರಿಂದ ತೊಂದರೆ ಆಗುವ ಸಾಧ್ಯತೆ ಇದೆ. ಅತಿಯಾಗಿ ಹೇಳಿಕೊಳ್ಳುವುದು ಅಮಾಮಾನಕ್ಕೆ ಕಾರಣವಾಗದಂತೆ ವರ್ತಿಸಿರಿ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ನಿರೀಕ್ಷೆ ಇರುವುದು. ಕೈಗೊಂಡ ಕಾರ್ಯ ಯಶ ಕಾಣುವುದು. ಶುಭ ಸಂಖ್ಯೆ: 1

ಧನು: ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವುದು. ಮನೋಚಿಂತಿತ ಕಾರ್ಯ ಕೈಗೂಡುವುದು. ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವುದು. ಪರರ ಸಹಾಯದ ಅನಿವಾರ್ಯತೆ ಇರಲಾರದು. ಆರೋಗ್ಯದ ಕಾಳಜಿ ಇರಲಿ. ಶುಭ ಸಂಖ್ಯೆ: 5

ಮಕರ: ಆಶೆ ಆಕಾಂಕ್ಷಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನ ಸಹಾಯ ದೊರೆಯುವುದು. ಸಹೋದರ ಸಹಕಾರ ತೋರುವುದರಿಂದ ನಿರಾತಂಕವಾಗಿ ಕಾರ್ಯ ಪೂರ್ಣವಾಗುವುದು. ಮನೆಯಲ್ಲಿ ಸಂತಸದ ವಾತಾವರಣ ಇರುವುದು. ಶುಭ ಸಂಖ್ಯೆ: 7

ಕುಂಭ: ಅನಾವಶ್ಯಕ ತಿರುಗಾಟ, ನೌಕರಿಯಲ್ಲಿ ಕಿರಿಕಿರಿ, ಸ್ಥಾನಪಲ್ಲಟ ಸಾಧ್ಯತೆ, ಬಡ್ತಿ ಯೋಗ, ವ್ಯಾಪಾರಿಗಳಿಗೆ ಸ್ಥಳದ ವಿಚಾರವಾಗಿ ಚಿಂತೆ ಇರುವುದು. ಮಹಿಳೆಯರು, ವಿದ್ಯಾರ್ಥಿಗಳಿಗೆ ಸಂತೋಷ ಇರುವುದು. ತರಕಾರಿ ದಾನ ಮಾಡಿರಿ. ಶುಭ ಸಂಖ್ಯೆ: 6

ಮೀನ: ದಿಟ್ಟತನ, ಮನೋಸ್ಥೈರ್ಯ, ನೇರ, ನಿಷ್ಠುರ ನಡೆಗಳಿಗೆ ಉತ್ತಮ ಫಲ ಪಾಪ್ತವಾಗುವುದು. ನಿಮ್ಮ ನಿರ್ಧಾರಗಳು ಪರಿವರ್ತನೆಗೆ ಕಾರಣವಾಗುವವು. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು. ಶುಭ ಸಂಖ್ಯೆ: 4

ಬಸವರಾಜ ಗುರೂಜಿ

(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 99728 48937)

Published On - 6:17 am, Wed, 20 January 21