ದಿನಭವಿಷ್ಯ | ಜನವರಿ 24, 2021
ಜನವರಿ 24, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನಭವಿಷ್ಯ.
ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಪುಷ್ಯಮಾಸ, ಹೇಮಂತ ಋತು, ಶುಕ್ಲಪಕ್ಷ, ಏಕಾದಶಿ ತಿಥಿ, ಭಾನುವಾರ, ಜನವರಿ 24, 2021. ರೋಹಿಣಿ ನಕ್ಷತ್ರ, ರಾಹುಕಾಲ: ಇಂದು ಸಂಜೆ 4.41ರಿಂದ ರಾತ್ರಿ 6 .5. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.49. ಸೂರ್ಯಾಸ್ತ: ಸಂಜೆ 6.6.
ತಾ.24-01-2021 ರ ಭಾನುವಾರದ ರಾಶಿಭವಿಷ್ಯ
ಮೇಷ: ಹಿರಿಯರಿಗೆ ಅನಾರೋಗ್ಯ ಸಂಭವ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಉದ್ಯೋಗ ಬದಲಿ ಮಾಡುವುದು ಸದ್ಯಕ್ಕೆ ಬೇಡ. ಹಣಕಾಸಿನ ವಿಷಯದಲ್ಲಿ ಬಂಧುಗಳು ಸಹಕಾರ ತೋರುವರು. ಶುಭ ಸಂಖ್ಯೆ: 7
ವೃಷಭ: ನಿಶ್ಚಿತ ಆರ್ಥಿಕ ಸ್ಥಿತಿ ಇರುವುದರಿಂದ ಹೆಚ್ಚಿನ ತೊಂದರೆ ಇಲ್ಲದಿದ್ದರೂ ಅಲ್ಪ ಹಾನಿಯ ಸಂಭವವಿದೆ. ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸುವಿರಿ. ಕೌಟುಂಬಿಕ ಕಾರ್ಯಗಳನ್ನು ನಿರ್ಲಕ್ಷಿಸ ಬೇಡಿ. ಶುಭ ಸಂಖ್ಯೆ: 5
ಮಿಥುನ: ಒಂದೇ ಮನಸಿನ ಕ್ರೀಯಾಶೀಲವಾದ ಬದುಕು ಸಾಧನೆಗೆ ಕಾರಣವಾಗುವುದು. ಅಡೆತಡೆಗಳ ನಿವಾರಣೆ ಯಾಗುವುದು. ನಿಶ್ಚಿತ ಅವಧಿಯ ಪರೀಕ್ಷೆಗಳು ಎದುರಾದರೂ ಬಲಗುಂದುವುದಿಲ್ಲ. ಹಿರಿಯರ ಸಲಹೆ ದೊರೆಯುವುದು. ಶುಭ ಸಂಖ್ಯೆ: 3
ಕಟಕ: ಸಂಗಡಿಗರು ಸಹಕಾರ ತೋರುವುದರಿಂದ ನಿರಾತಂಕ ಜೀವನ ಇರುವುದು. ಆಶೆ ಆಕಾಂಕ್ಷಗಳ ಈಡೇರಿಕೆಗಾಗಿ ಪ್ರಯತ್ನಿಸುವಿರಿ. ಅಪೇಕ್ಷಿತ ಧನಸಹಾಯ ದೊರೆಯುವುದು. ಉನ್ನತ ಶಿಕ್ಷಣದ ಕನಸು ಈಡೇರುವುದು. ಶುಭ ಸಂಖ್ಯೆ: 1
ಸಿಂಹ: ಕ್ಷಮಾಗುಣ ಇರಲಿ, ಪರಸ್ಪರ ದೋಷಾರೋಪ ಮಾಡುವುದರಿಂದ ಕಾರ್ಯಹಾನಿಯ ಸಂಭವವಿದೆ. ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವಿರಿ. ದೊಡ್ಡಮೊತ್ತದ ಹಣಹೂಡಿಕೆ ಈಗ ಬೇಡ. ಶುಭ ಸಂಖ್ಯೆ: 8
ಕನ್ಯಾ: ಆರೋಗ್ಯಪೂರ್ಣತೆ, ಪ್ರಸನ್ನತೆ ಇರುವುದು. ಎಲ್ಲ ಕಾರ್ಯಗಳೂ ತಮ್ಮ ಮನಸ್ಸಿನಂತೆ ನಡೆಯುವವು. ಧನಲಾಭ, ಧಾರ್ಮಿಕ ಕಾರ್ಯ, ದೇವತಾ ಕ್ಷೇತ್ರ ದರ್ಶನ ಯೋಗವಿರುವುದು. ವ್ಯಾಪಾರ ಸಾಧಾರಣ. ಶುಭ ಸಂಖ್ಯೆ: 6
ತುಲಾ: ಅತಿಯಾದ ಆತ್ಮವಿಶ್ವಾಸ, ಆಲಸ್ಯದಿಂದ ಬಹುವಿಧವಾದ ಕಷ್ಟನಷ್ಟಗಳ ಅನುಭವವಾಗುವುದು. ಸಹನೆಯಿಂದ ವ್ಯವಹರಿಸಿರಿ. ಗುರುಬಲ ವೃದ್ಧಿಸುವುದು. ಮದುವೆಯ ಸಂಭ್ರಮದ ವಾತಾವರಣ ಕಂಡುಬರುವುದು. ಹಿರಿಯರ ಮಾತಿನಂತೆ ನಡಯುವುದು ಉತ್ತಮ. ಶುಭ ಸಂಖ್ಯೆ: 9
ವೃಶ್ಚಿಕ: ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕಂತೆ ಕೆಲಸಗಳು ಕೈಗೂಡುವವು. ಮಾತು ಕೇಳದ ಜನರಿಂದ ದೂರವಿರಿ. ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುವುದು. ಆಸ್ತಿ ಖರೀದಿ ಯೋಗವಿದೆ ಪ್ರಯತ್ನಿಸಿ. ಶುಭ ಸಂಖ್ಯೆ: 4
ಧನು: ಅಂತಃಶತ್ರುಗಳ ಕಾಟ ಹೆಚ್ಚಾಗುವ ಲಕ್ಷಣವಿದೆ. ಹಳೆಯ ಸಮಸ್ಯೆಗಳು ಮತ್ತೆ ಎದುರಾಗುವ ಸಂಭವವಿದೆ. ಚಂಚಲತೆ ಬೇಡ, ಹಿಡಿದ ಕಾರ್ಯವನ್ನು ಪೂರ್ಣಗೊಳಿಸಿ. ಆರ್ಥಿಕ ಲಾಭವಿದೆ ಆದರೆ ವಿದ್ಯೆಯಲ್ಲಿ ಹಿನ್ನಡೆ ಕಂಡುಬರುವುದು. ಶುಭ ಸಂಖ್ಯೆ: 7
ಮಕರ: ವಿನಾಕಾರಣ ನಿಂದೆಯ ಸಂಭವವಿದೆ. ಖರ್ಚುಹೆಚ್ಚಾಗುವುದರಿಂದ ಉಳಿತಾಯದ ಯೋಜನೆ ಮಾಡಿರಿ. ಮನೆಯಲ್ಲಿ ಶಾಂತಿಯುತ ನೆಮ್ಮದಿಯ ವಾತಾವರಣ ಇರುವುದು. ಶುಭ ಸಂಖ್ಯೆ: 2
ಕುಂಭ: ಮಹತ್ವಾಕಾಂಕ್ಷೆಗೆ ಪೂರಕವಾದ ವಾತಾವರಣ ಇರುವುದು. ಬಂಧುಮಿತ್ರರ ಸಹಕಾರ ದೊರೆಯುವುದು. ಉದ್ಯೋಗದಲ್ಲಿ ಪ್ರಗತಿ ಕಂಡುಬರುವುದು. ಮನೆಯಲ್ಲಿ ಸಂತಸ ಮೂಡುವುದು. ಶುಭಕಾರ್ಯಗಳು ಜರುಗುವವು. ಶುಭ ಸಂಖ್ಯೆ: 8
ಮೀನ: ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವುದು. ಮನೋಚಿಂತಿತ ಕಾರ್ಯ ಕೈಗೂಡುವುದು. ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವುದು. ಪರರ ಸಹಾಯದ ಅನಿವಾರ್ಯತೆ ಇರಲಾರದು. ಆರೋಗ್ಯದ ಕಾಳಜಿ ಇರಲಿ. ಶುಭ ಸಂಖ್ಯೆ: 5
(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 9972848937)