ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಪುಷ್ಯಮಾಸ, ಹೇಮಂತ ಋತು, ಕೃಷ್ಣಪಕ್ಷ, ತದಿಗೆ ತಿಥಿ, ಭಾನುವಾರ, ಜನವರಿ 31,2021. ಪುಬ್ಬೆ ನಕ್ಷತ್ರ, ರಾಹುಕಾಲ: ಇಂದು ಸಂಜೆ 4.44ರಿಂದ ರಾತ್ರಿ 6.9. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.48. ಸೂರ್ಯಾಸ್ತ: ಸಂಜೆ 6.10.
ತಾ.31-01-2021 ರ ಭಾನುವಾರದ ರಾಶಿಭವಿಷ್ಯ
ಮೇಷ: ಮಹತ್ವದ ಕಾರ್ಯ ಕಲಾಪಗಳಲ್ಲಿ ಭಾಗವಹಿಸುವ ಯೋಗವಿದೆ. ವಿವಿಧ ಮೂಲಗಳಿಂದ ಸಹಾಯ ದೊರೆಯುವುದು. ಸ್ವಸಾಮಥ್ರ್ಯದಿಂದ ಕಠಿಣ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಅನಾವಶ್ಯಕ ಖರ್ಚಿನ ಸಾಧ್ಯತೆ ಇದೆ. ಶುಭ ಸಂಖ್ಯೆ: 7
ವೃಷಭ: ವ್ಯಥಾ ಚಿಂತೆ, ತಪ್ಪು ಕಲ್ಪನೆ, ನಿಷ್ಟುರ ಮಾತುಗಳನ್ನು ಕೇಳುವ ಸಂಭವ, ಜನ್ಮಸ್ಥ ಶುಕ್ರ ಇರುವುದರಿಂದ ಆರ್ಥಿಕ ಸುಭದ್ರತೆ ಇರುವುದು. ವಿದ್ಯಾರ್ಥಿಗಳಿಗೆ ಪರಿಶ್ರಮ ಅವಶ್ಯಕ. ಮನೆಯಲ್ಲಿ ಸಂತೋಷವಿರುವುದು. ಗೋಸೇವೆಯಿಂದ ಕಷ್ಟಪರಿಹಾರ. ಶುಭ ಸಂಖ್ಯೆ: 3
ಮಿಥುನ: ಆತ್ಮೀಯರೇ ವಿರೋಧಿಗಳಂತೆ ವರ್ತಿಸುವರು. ಮಾಡದ ತಪ್ಪಿಗೆ ಕ್ಷಮೆ ಕೇಳುವ ಪ್ರಸಂಗ ಇರುವುದರಿಂದ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ. ಮನಸ್ಸಿನಲ್ಲಿ ಸಂಕಲ್ಪಿಸಿದ ಕಾರ್ಯವು ನಿಧಾನವಾಗಿ ನೆರವೇರಿ ಲಾಭದಾಯಕವಾಗುವುದು. ಶುಭ ಸಂಖ್ಯೆ: 6
ಕಟಕ: ಸತತ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ವೃತ್ತಿ ಕೌಶಲ್ಯದಿಂದ ಅಸಾಧ್ಯವಾದ ಕಾರ್ಯವನ್ನೂ ಸಾಧಿಸುವಿರಿ. ಧನಮೂಲಗಳು ಹೆಚ್ಚಾಗುವವು. ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವುದು. ಶುಭ ಸಂಖ್ಯೆ: 8
ಸಿಂಹ: ಆಸ್ತಿ ಖರೀದಿ ಅಥವಾ ಹೊಸ ವ್ಯವಹಾರ ಆರಂಭಕ್ಕೂ ಮೊದಲು ಆತ್ಮೀಯರೊಂದಿಗೆ ಸಮಾಲೋಚನೆ ಮಾಡಿ ಮುಂದುವರಿಯಿರಿ. ಅಡೆತಡೆಗಳ ಮಧ್ಯದಲ್ಲಿಯೂ ನಿರೀಕ್ಷಿತ ಕಾರ್ಯಗಳು ಪೂರ್ಣವಾಗುವವು. ಶುಭ ಸಂಖ್ಯೆ: 4
ಕನ್ಯಾ: ಕಾಯಕನಿಷ್ಠೆ ನಿಮಗೇ ಹೊರೆಯಾಗದಂತೆ ನೋಡಿಕೊಳ್ಳಿರಿ. ನಿರಂತರ ದುಡಿಮೆಯಿಂದ ಅನಾರೋಗ್ಯ ಅಥವಾ ಮಾನಸಿಕ ಕಿರಿಕಿರಿ ಆಗುವ ಸಂಭವವಿದೆ. ಹಣಕಾಸಿನಿನ ವ್ಯವಹಾರದಲ್ಲಿ ಎಚ್ಚರಿಕೆವಹಿಸಿರಿ. ಶುಭ ಸಂಖ್ಯೆ: 1
ತುಲಾ: ದಿಟ್ಟತನ, ಮನೋಸ್ಥೈರ್ಯ, ನೇರ, ನಿಷ್ಟುರ ನಡೆಗಳಿಗೆ ಉತ್ತಮ ಫಲಪ್ರಾಪ್ತಿಯಾಗುವುದು. ನಿಮ್ಮ ನಿರ್ಧಾರಗಳು ಪರಿವರ್ತನೆಗೆ ಕಾರಣವಾಗುವವು. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವುದು. ಶುಭ ಸಂಖ್ಯೆ: 2
ವೃಶ್ಚಿಕ: ಆರಂಭದಲ್ಲಿ ಹರ್ಷ, ಉತ್ಸಾಹ ಇರುವುದು ಕೊನೆಗೆ ಮನೋವ್ಯಥೆ. ಮನೆಯಲ್ಲಿ ಸಂತೋಷದ ವಾತಾವರಣ ಇರುವುದು. ಗ್ರಹೋಪಯೋಗಿ ವಸ್ತುಗಳ ಖರೀದಿ, ಮನೆ ರಿಪೇರಿ ಮೊದಲಾದ ಕೆಲಸಗಳಾಗುವವು. ಶ್ರೀಲಕ್ಷ್ಮೀಸ್ತೋತ್ರ ಪಠಿಸಿರಿ. ಶುಭ ಸಂಖ್ಯೆ: 5
ಧನು: ಕೆಲಸಕ್ಕೆ ತಕ್ಕ ಪ್ರೋತ್ಸಾಹ ದೊರೆಯುವುದು. ಶಾಂತಿ, ನೆಮ್ಮದಿಯುಕ್ತ ಜೀವನ ಇರುವುದು. ನಡೆಯುತ್ತಿರುವ ದಾರಿ ಸರಿಯಾಗಿ ಇರುವದರಿಂದ ಗುರಿ ಮುಟ್ಟುವುದು ನಿಶ್ಚಿತ. ಆರ್ಥಿಕ ಸ್ಥಿತಿ ಉತ್ತಮವಾಗಿ ಇರುವುದು. ಶುಭ ಸಂಖ್ಯೆ: 3
ಮಕರ: ಶುಭ ಕರ್ಮ ಸಂಪ್ರಾಪ್ತಿಯಿದ್ದು, ಗುರುವರ್ಗ ಸಂತೋಷ, ಸಂಸಾರ ಸುಖ. ನೂತನ ಮಿತ್ರಭೇಟಿ, ಅರ್ಥಾರ್ಜನೆಯು ಉತ್ತಮವಿದೆ. ಆದರೂ ಗೃಹಕಲಹ, ಬಂಧು ಜನರಲ್ಲಿ ಅಸಮಾಧಾನ ಕಂಡುಬರುವುದು. ಶುಭ ಸಂಖ್ಯೆ: 6
ಕುಂಭ: ಅಗೌರವ ಆಗುವ ಸಂಭವ ಇರುವುದರಿಂದ ಸೂಕ್ಷ್ಮವಾಗಿರುವುದು ಉತ್ತಮ. ಅನಪೇಕ್ಷಿತರಿಗೆ ಉಪಕಾರ ಮಾಡುವುದು ಸರಿಯಲ್ಲ. ಮಕ್ಕಳ ಚಿಂತೆ ಇರುವುದು. ವಧುವರರಿಗೆ ಮದುವೆಯ ಯೋಗ ಕೂಡಿಬರುವುದು. ಶುಭ ಸಂಖ್ಯೆ: 7
ಮೀನ: ವ್ಯಾಪಾರಾದಿ ಉದ್ಯಮಗಳಲ್ಲಿ ಪ್ರಗತಿಯಿದ್ದು ಧನಲಾಭ, ಐಶ್ವರ್ಯವೃದ್ಧಿಯಿದೆ. ಆದರೆ ವ್ಯವಹಾರಿಕ ಕಿರಿಕಿರಿ ಇರುವುದು. ಅನಿರೀಕ್ಷಿತ ಧನಲಾಭವೂ ಇದೆ. ಕೈಗೊಂಡ ಕಾರ್ಯಗಳಿಗೆ ವಿಘ್ನ ತೋರಿದರೂ ನೆರವೇರುತ್ತದೆ. ಶುಭ ಸಂಖ್ಯೆ: 1
ಬಸವರಾಜ ಗುರೂಜಿ
(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 9972848937)