ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ -ಅಸಾದುದ್ದೀನ್ ಒವೈಸಿ

ಇಂದು ಗಾಂಧೀಜಿ ಹತ್ಯೆಯಾದ ದಿನ. ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ ಎಂದು ನಗರದಲ್ಲಿ AIMIM ಸಂಸದ ಅಸಾದುದ್ದೀನ್​ ಒವೈಸಿ ಹೇಳಿದ್ದಾರೆ.

ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ -ಅಸಾದುದ್ದೀನ್ ಒವೈಸಿ
‘ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ’
Follow us
KUSHAL V
|

Updated on: Jan 30, 2021 | 11:37 PM

ಕಲಬುರಗಿ: ಇಂದು ಗಾಂಧೀಜಿ ಹತ್ಯೆಯಾದ ದಿನ. ನಾಥೂರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಉಗ್ರಗಾಮಿ ಎಂದು ನಗರದಲ್ಲಿ AIMIM ಸಂಸದ ಅಸಾದುದ್ದೀನ್​ ಒವೈಸಿ ಹೇಳಿದ್ದಾರೆ.

ಮುಸ್ಲಿಮರ ಪರ ಇದ್ದಾರೆಂದು ಗಾಂಧೀಜಿಯನ್ನು ಹತ್ಯೆಗೈದರು. ಅನೇಕರು ಸೇರಿ ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದರು ಎಂದು ಸಂಸದ ಅಸಾದುದ್ದೀನ್​ ಒವೈಸಿ ಹೇಳಿದರು.

ನಾಥೂರಾಮ್​ ಗೋಡ್ಸೆಗೂ ನಮಗೂ ಸಂಬಂಧವಿಲ್ಲ ಅಂತಾರೆ. ಬೆಕ್ಕು ಕದ್ದು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲವೆಂದು ತಿಳಿದಿದ್ದಾರೆ. ನಾಥೂರಾಮ್​ ಗೋಡ್ಸೆ ಸಂಘ ಪರಿವಾರಕ್ಕೆ ಸೇರಿದ ಮನುಷ್ಯ ಎಂದು ಒವೈಸಿ ಹೇಳಿದರು.

ಗಾಂಧಿ ಸಮಾಧಿಗೆ ತೆರಳಿ ಪ್ರಧಾನಿ ಮೋದಿ ನಮನ ಸಲ್ಲಿಸಿದ್ದಾರೆ. ಆದರೆ ಗಾಂಧಿ ಕೊಂದ ಸಾವರ್ಕರ್​ರನ್ನು ಮೋದಿ ಆರಾಧಿಸ್ತಾರೆ. ಗಣರಾಜ್ಯೋತ್ಸವದಂದು ನವದೆಹಲಿಯಲ್ಲಿ ಗಲಾಟೆ ಆಗಬಾರದಿತ್ತು ಎಂದು ಸಂಸದ ಅಸಾದುದ್ದೀನ್​ ಒವೈಸಿ ಹೇಳಿದರು.

‘ಕಾಂಗ್ರೆಸ್​ ಜೊತೆ ಹೋಗದಂತೆ H.D.ಕುಮಾರಸ್ವಾಮಿಗೆ ಹೇಳಿದ್ದೆ’ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ ಪಕ್ಷ ಕಾಂಗ್ರೆಸ್​ ಜೊತೆ ಹೋಗದಂತೆ H.D.ಕುಮಾರಸ್ವಾಮಿಗೆ ಹೇಳಿದ್ದೆ. ಆದ್ರೂ ಕುಮಾರಸ್ವಾಮಿ ಕಾಂಗ್ರೆಸ್​ ಜೊತೆ ಮೈತ್ರಿಮಾಡಿಕೊಂಡರು ಎಂದು ಸಂಸದ ಅಸಾದುದ್ದೀನ್​ ಒವೈಸಿ ಹೇಳಿದರು.

ನಂತರ ಕುಮಾರಸ್ವಾಮಿ ಅದರ ದುಷ್ಪರಿಣಾಮ ಅನುಭವಿಸಿದರು. ಮುಂದಿನ ಚುನಾವಣೆಗಳಲ್ಲಿ ರಾಜ್ಯದಲ್ಲಿ AIMIM ಸ್ಪರ್ಧಿಸಲಿದೆ. ಕಾಂಗ್ರೆಸ್​ ಪಕ್ಷದಲ್ಲಿ ಇವಾಗ ಯಾವುದೇ ಧಮ್​ ಇಲ್ಲ. ಸೋಲಿಗೆ ಹೆದರಬೇಕಿಲ್ಲ, ಪ್ರತಿ ಸೋಲು ಗೆಲುವಿನ ಮೆಟ್ಟಿಲಾಗುತ್ತೆ ಎಂದು ಒವೈಸಿ ಹೇಳಿದರು.

‘ಕ್ರಿಕೆಟ್​ ಚೆಂಡನ್ನು ದನದ ಚರ್ಮದಿಂದ ತಯಾರಿಸ್ತಾರೆ.. ಆದ್ರೆ ದನದ ಮಾಂಸ ಮಾತ್ರ ತಿನ್ನಬೇಡಿ ಎಂದು ಹೇಳ್ತಾರೆ’ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲಾಗಿದೆ. ಇದರಿಂದ ಅನೇಕರ ಉದ್ಯೋಗ ಹಾಳಾಗಿ ಹೋಗುತ್ತದೆ ಎಂದು ಸಂಸದ ಅಸಾದುದ್ದೀನ್​ ಒವೈಸಿ ಹೇಳಿದರು. ಉದ್ಯೋಗ ಕಳೆದುಕೊಂಡವರು ಮುಂದೇನು ಮಾಡ್ಬೇಕೆಂದು ರಾಜ್ಯ ಸರ್ಕಾರಕ್ಕೆ ಒವೈಸಿ ಪ್ರಶ್ನೆ ಮಾಡಿದರು.

ಕ್ರಿಕೆಟ್​ ಚೆಂಡನ್ನು ದನದ ಚರ್ಮದಿಂದ ತಯಾರಿಸುತ್ತಾರೆ. ಆದರೆ ದನದ ಮಾಂಸ ಮಾತ್ರ ತಿನ್ನಬೇಡಿ ಎಂದು ಹೇಳುತ್ತಾರೆ. ಅಮಿತ್ ಶಾ ಸಬ್​ಕಾ ಸಾಥ್ ಸಬ್​ಕಾ ವಿಕಾಸ್ ಅಂತಾರೆ. ಅವರು ಸಬ್​ಕಾ ಸಾಥ್​ ಇಲ್ಲ, ಬದಲಾಗಿ ದನಗಳ ಜೊತೆಗಿದ್ದಾರೆ ಎಂದು ಹೇಳಿದರು.

ದನದ ಮಾಂಸ ಸೇವನೆಯಿಂದ ಆನೇಕರು ಆರೋಗ್ಯವಂತರಾಗ್ತಾರೆ. ಪ್ರಧಾನಿ ಮೋದಿ, ಸಿಎಂ ಬಿಎಸ್​ವೈಗೆ ಬಡವರ ಹಿತ ಬೇಡವಾಗಿದೆ. ಬಡವರು ಮನೆಯಲ್ಲೇನು ತಿನ್ನುತ್ತಾರೆಂದು ಇಣುಕುವುದನ್ನು ಬಿಡಿ. ನಾನು ಮನೆಯಲ್ಲಿ ಏನು ತಿನ್ನಬೇಕೆನ್ನುವುದು ಅವರಿಗ್ಯಾಕೆ ಬೇಕು ಎಂದು ಸಂಸದ ಅಸಾದುದ್ದೀನ್​ ಒವೈಸಿ ಹೇಳಿದರು.

ಗಾಂಧಿ ಪುಣ್ಯಸ್ಮರಣೆಯಂದು ಟ್ವಿಟರ್​ನಲ್ಲಿ ಟ್ರೆಂಡ್​ ಆದ ನಾಥೂರಾಮ್​ ಗೋಡ್ಸೆ; ದೇಶವನ್ನು ಉಳಿಸಿದ್ದಕ್ಕೆ ಧನ್ಯವಾದವೆಂದ ಟ್ವಿಟಿಗರು

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ