ಕೊರೊನಾ ಸಂಕಷ್ಟ ಕಾಲದಲ್ಲಿ ಮುನಿರತ್ನ ಸಮಾಜ ಸೇವೆ ಮರೆಯುವಂತಿಲ್ಲ -ನಟ ದರ್ಶನ್​

ಬೆಂಗಳೂರು: ಕೊರೊನಾ ಸಂಕಷ್ಟ ಸಮಯದಲ್ಲಿ ಅಕ್ಕಿ-ಆಹಾರ ಕಿಟ್​ ನೀಡಿರುವುದು ದೊಡ್ಡತನ. ಮುನಿರತ್ನರ ಆ ದೊಡ್ಡತನದಿಂದಲೇ ನಾನು ಪ್ರಚಾರಕ್ಕೆ ಬಂದಿದ್ದೇನೆ ಎಂದು ನಟ ದರ್ಶನ್​ ಹೇಳಿದರು. ಮಾನವೀಯ ದೃಷ್ಟಿಯಿಂದಷ್ಟೇ ಪ್ರಚಾರಕ್ಕೆ ಹೋಗುತ್ತಿದ್ದೇನೆ. ನಾನು ಯಾವುದೇ ಪಕ್ಷ ನೋಡಿ ಪ್ರಚಾರಕ್ಕೆ ಹೋಗುತ್ತಿಲ್ಲ. ವ್ಯಕ್ತಿ ನೋಡಿ ಮುನಿರತ್ನ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದು ದರ್ಶನ್ ಹೇಳಿದರು. ಕೊರೊನಾ ಟೈಮಲ್ಲಿ ಮುನಿರತ್ನ ಅನ್ನ ದಾಸೋಹ ನಡೆಸಿದ್ದಾರೆ. ಲಾಕ್​ಡೌನ್ ಅವಧಿಯಲ್ಲಿ ಅವರ ಸೇವೆಯನ್ನ ನೋಡೋಣ. ಮಾನವೀಯತೆ ನೋಡಿ ಮುನಿರತ್ನ ಪರ ಪ್ರಚಾರಕ್ಕೆ ಹೋಗ್ತಿದ್ದೀನಿ. ವ್ಯಕ್ತಿ […]

ಕೊರೊನಾ ಸಂಕಷ್ಟ ಕಾಲದಲ್ಲಿ ಮುನಿರತ್ನ ಸಮಾಜ ಸೇವೆ ಮರೆಯುವಂತಿಲ್ಲ -ನಟ ದರ್ಶನ್​
Edited By:

Updated on: Oct 30, 2020 | 11:05 AM

ಬೆಂಗಳೂರು: ಕೊರೊನಾ ಸಂಕಷ್ಟ ಸಮಯದಲ್ಲಿ ಅಕ್ಕಿ-ಆಹಾರ ಕಿಟ್​ ನೀಡಿರುವುದು ದೊಡ್ಡತನ. ಮುನಿರತ್ನರ ಆ ದೊಡ್ಡತನದಿಂದಲೇ ನಾನು ಪ್ರಚಾರಕ್ಕೆ ಬಂದಿದ್ದೇನೆ ಎಂದು ನಟ ದರ್ಶನ್​ ಹೇಳಿದರು. ಮಾನವೀಯ ದೃಷ್ಟಿಯಿಂದಷ್ಟೇ ಪ್ರಚಾರಕ್ಕೆ ಹೋಗುತ್ತಿದ್ದೇನೆ. ನಾನು ಯಾವುದೇ ಪಕ್ಷ ನೋಡಿ ಪ್ರಚಾರಕ್ಕೆ ಹೋಗುತ್ತಿಲ್ಲ. ವ್ಯಕ್ತಿ ನೋಡಿ ಮುನಿರತ್ನ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದು ದರ್ಶನ್ ಹೇಳಿದರು.

ಕೊರೊನಾ ಟೈಮಲ್ಲಿ ಮುನಿರತ್ನ ಅನ್ನ ದಾಸೋಹ ನಡೆಸಿದ್ದಾರೆ. ಲಾಕ್​ಡೌನ್ ಅವಧಿಯಲ್ಲಿ ಅವರ ಸೇವೆಯನ್ನ ನೋಡೋಣ. ಮಾನವೀಯತೆ ನೋಡಿ ಮುನಿರತ್ನ ಪರ ಪ್ರಚಾರಕ್ಕೆ ಹೋಗ್ತಿದ್ದೀನಿ. ವ್ಯಕ್ತಿ ನೋಡಿ ಅಷ್ಟೇ ಪ್ರಚಾರಕ್ಕೆ ಹೋಗ್ತಿದ್ದೇನೆ ಎಂದ ದರ್ಶನ್ ಜೊತೆಗೆ ನಿಖಿಲ್ ಅವರು ಅವರ ಅಭ್ಯರ್ಥಿ ಪರ ಪ್ರಚಾರ ಮಾಡ್ತಿದ್ದಾರೆ ಎಂದು ಹೇಳಿ ತರೆಳಿದರು. ನವೆಂಬರ್​ 3ರಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಮುನಿರತ್ನ ಪರ ನಟ ದರ್ಶನ್ ಪ್ರಚಾರಕ್ಕೆ ತೆರಳಿದರು.

Published On - 10:58 am, Fri, 30 October 20