ಮಹಿಳೆಯರಿಗಾಗಿಯೇ ರೂಪುಗೊಂಡ ಬಂಬಲ್ ಆ್ಯಪ್ ಅತಿದೊಡ್ಡ ಮಟ್ಟದ ಯಶಸ್ಸಿಗೆ ಸಾಕ್ಷಿಯಾದ ಬೆನ್ನಲ್ಲೇ ಅದೇ ಮಾದರಿಯ ಮತ್ತೊಂದು ಆ್ಯಪ್ ಮಾರುಕಟ್ಟೆಗೆ ಬಹು ನಿರೀಕ್ಷೆಯೊಂದಿಗೆ ಕಾಲಿಟ್ಟಿದೆ. ಕಿಂಬರ್ಲಿ ಕಪ್ಲಾನ್ ಒಡೆತನದ ಸ್ನ್ಯಾಕ್ ಹೆಸರಿನ ಡೇಟಿಂಗ್ ಆ್ಯಪ್ ಭಾರೀ ಸದ್ದು ಮಾಡುತ್ತಿದೆ. ಈಗಿರುವ ಡೇಟಿಂಗ್ ಆ್ಯಪ್ಗಳಿಗಿಂತಲೂ ಹಲವು ವಿಶೇಷತೆಗಳೊಂದಿಗೆ ರೂಪುಗೊಂಡಿರುವ ಸ್ನ್ಯಾಕ್ನಲ್ಲಿ ಟಿಕ್ಟಾಕ್ ಅಭಿಮಾನಿಗಳನ್ನು ಸೆಳೆಯುವ ಅಂಶವೂ ಇದೆಯಂತೆ. ಹೀಗಾಗಿ ಟಿಕ್ಟಾಕ್ ಮತ್ತು ಡೇಟಿಂಗ್ ಆ್ಯಪ್ನ ಸಮ್ಮಿಲನದಂತೆ ಕಂಡುಬರುವ ಈ ಆ್ಯಪ್ ಹೆಚ್ಚಿನ ಜನರನ್ನು ಸೆಳೆಯುವ ನಿರೀಕ್ಷೆ ಇದೆ.
ಸ್ನ್ಯಾಕ್ ಸಂಸ್ಥಾಪಕಿ ಕಿಂಬರ್ಲಿ ಕಪ್ಲಾನ್ ಅವರು ಈ ಹಿಂದೆ ‘ಪ್ಲೆಂಟಿ ಆಫ್ ಫಿಶ್’ನಂತಹ ಡೇಟಿಂಗ್ ಆ್ಯಪ್ನಲ್ಲಿ ಕೆಲಸ ಮಾಡುವಾಗ, ಹೊಸ ತಲೆಮಾರಿನ ಯುವಕ ಯುವತಿಯರು ಡೇಟಿಂಗ್ ಆ್ಯಪ್ನಲ್ಲಿ ಪರಿಚಿತಗೊಂಡು ನಂತರ ಚಾಟ್ ಮಾಡಲು ಟಿಕ್ಟಾಕ್, ಇನ್ಸ್ಟಾಗ್ರಾಂ, ಸ್ನ್ಯಾಪ್ಚಾಟ್ನಂತಹ ಆ್ಯಪ್ಗಳ ಮೊರೆ ಹೋಗುವುದನ್ನು ಗಮನಿಸಿದ್ದರಂತೆ ಹೀಗಾಗಿ, ಡೇಟಿಂಗ್ ಆ್ಯಪ್ಗಳಲ್ಲಿರುವ ಕೊರತೆಯನ್ನು ನೀಗಿಸಲೆಂದೇ ಸ್ನ್ಯಾಕ್ ಮೂಲಕ ಮಾರುಕಟ್ಟೆಗೆ ಲಗ್ಗೆ ಇಡಲಾಗಿದೆ ಎಂದು ಕಪ್ಲಾನ್ ತಿಳಿಸಿದ್ದಾರೆ.
ಸ್ನ್ಯಾಕ್ ಹೇಗೆ ಕೆಲಸ ಮಾಡಲಿದೆ?
ಸ್ನ್ಯಾಕ್ನಲ್ಲಿ ಬೇರೆ ಡೇಟಿಂಗ್ ಆ್ಯಪ್ಗಳಲ್ಲಿರುವ ಎಲ್ಲಾ ಸೌಲಭ್ಯಗಳೂ ಇರಲಿವೆ. ಆದರೆ, ಡೇಟಿಂಗ್ ಆ್ಯಪ್ಗಳಲ್ಲಿರುವಂತೆ ಫೋಟೋ ಅಪ್ಲೋಡ್ ಮಾಡುವ ಬದಲು ಟಿಕ್ಟಾಕ್ನಲ್ಲಿ ಮಾಡುವಂತೆ ಶಾರ್ಟ್ ವಿಡಿಯೋಗಳನ್ನು ಅಪ್ಲೋಡ್ ಮಾಡಲು ಅವಕಾಶ ಇರುತ್ತದೆ. ಈ ಮೂಲಕ ತನಗೆ ಸೂಕ್ತ ಎನಿಸುವ ವ್ಯಕ್ತಿಯನ್ನು ಫೋಟೋಗಳ ಮೂಲಕ ನೋಡುವ ಬದಲು ವಿಡಿಯೋಗಳಲ್ಲಿ ನೋಡಿ ಆರಿಸಿಕೊಳ್ಳಬಹುದಾಗಿದೆ. ಇನ್ನು ಕ್ರಿಯಾತ್ಮಕವಾಗಿ ವಿಡಿಯೋ ಮಾಡಲು ಅವಕಾಶವನ್ನೂ ನೀಡಲಾಗಿದ್ದು, ಅದು ಮುಖ್ಯ ಆಕರ್ಷಣೆ ಆಗಿರಲಿದೆ ಎಂದು ಸ್ನ್ಯಾಕ್ ಹೇಳಿಕೊಂಡಿದೆ.
ಸ್ನ್ಯಾಕ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಸಂಸ್ಥಾಪಕಿ ಕಪ್ಲಾನ್ ಈ ಆ್ಯಪ್ ತಯಾರಿಕೆಗೆ ಟಿಕ್ಟಾಕ್ನಂತಹ ಆ್ಯಪ್ಗಳೇ ಕಾರಣ. ಟಿಕ್ಟಾಕ್ ಬಳಸುವಾಗೊಮ್ಮೆ ಜನರು ಅಲ್ಲಿ ಡೇಟಿಂಗ್ ಮಾಡಲು ಹೆಚ್ಚು ಇಷ್ಟಪಡುತ್ತಿದ್ದಾರೆ ಎಂಬ ಅಂಶ ಗಮನ ಸೆಳೆಯಿತು. ಆದರೆ, ಟಿಕ್ಟಾಕ್ನ ಮೂಲ ಉದ್ದೇಶ ಡೇಟಿಂಗ್ ಆಗಿರಲಿಲ್ಲ. ಹೀಗಾಗಿ ಅದರಿಂದ ಪ್ರೇರಣೆ ಪಡೆದ ನಾನು ಸ್ನ್ಯಾಕ್ ಅಭಿವೃದ್ಧಿಪಡಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ಸದ್ಯ ಇನ್ಸ್ಟಾಗ್ರಾಂ ಮತ್ತು ಟಿಕ್ಟಾಕ್ನ ಎಲ್ಲಾ ಅಂಶಗಳನ್ನು ಒಳಗೊಂಡು ರೂಪುಗೊಂಡಿರುವ ಸ್ನ್ಯಾಕ್ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಸೆಳೆಯುವ ನಿರೀಕ್ಷೆ ಇದೆ. ಅಲ್ಲದೇ ಡೇಟಿಂಗ್ ಮಾಡಲಿಚ್ಛಿಸುವ ಯುವ ಸಮೂಹದ ಮೊದಲ ಆಯ್ಕೆಯೂ ಇದೇ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು ಜಾಗತಿಕ ಮಾರುಕಟ್ಟೆಯ ಡೇಟಿಂಗ್ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: ಟಿಕ್ಟಾಕ್ ಮತ್ತು ಟಿಂಡರ್ ಸಮ್ಮಿಶ್ರಣದಿಂದ ಹುಟ್ಟಿತು ಹೊಸ ಆ್ಯಪ್!
ಇರಲಿ ಎಚ್ಚರ, ಬೇಡ ಆತುರ.. Dating App ಬಳಸುವ ಮುನ್ನ ನೀವು ಓದಲೇಬೇಕಾದ ಸ್ಟೋರಿ ಇದು