ದಾವಣಗೆರೆ: ಜಿಲ್ಲೆಯಲ್ಲಿ ಅಮಾಯಕ ರೈತರ ಹೆಸರಿನಲ್ಲಿ ಕೋಟಿಗಟ್ಟಲೆ ಸಾಲ ಪಡೆದು ಕಂಪನಿಯೊಂದು ವಂಚನೆ ಮಾಡಿದ್ದ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ. ಮಹಾವಂಚನೆಯನ್ನು ಬಯಲು ಮಾಡಲು ಸಿಬಿಐ ತಂಡ ಸಜ್ಜಾಗಿದೆ.
ಕಂಪನಿ ತಾಳಕ್ಕೆ ಕುಣಿದು ದಾವಣಗೆರೆ ಯುಕೋ ಬ್ಯಾಂಕ್ ಸಾಲ ಮಂಜೂರು ಮಾಡಿತ್ತು. ಜಿಲ್ಲೆಯ ಜಗಳೂರು ತಾಲೂಕಿನ ಹಿರೇ ಅರಕೆರೆ ಹಾಗು ಕೆರೆಯಾಗಳಹಳ್ಳಿ ಗೋದಾಮುಗಳನ್ನು ಖಾಲಿ ಚೀಲ ಇಟ್ಟು ಅಡಿಕೆ ಇದೆ ಎಂದು ತೋರಿಸಿ ಸಾಲ ಪಡೆದಿದೆ. ಈ ರೀತಿ ಸುಳ್ಳಿನ ಜಾಲ ಎಣೆದು ರೈತರಿಗೆ ಕಂಪನೊಯೊಂದು ವಂಚಿಸಿದೆ. ಸಿಜಿಆರ್ ಕಂಪನಿ, ಬ್ಯಾಂಕ್ ಬ್ರೋಕರ್, ಮಧ್ಯವರ್ತಿಗಳು ಹಗರಣದಲ್ಲಿ ಶಾಮೀಲಾಗಿದ್ದಾರೆ. ಸದ್ಯ ಈಗ ಈ ಪ್ರಕರಣ ಸಿಬಿಐ ಕೈ ಸೇರಿದ್ದು ಅಮಾಯಕ ಬಡ ಜೀವಗಳಿಗೆ ನ್ಯಾಯ ಸಿಗಬೇಕಿದೆ.