ಅತ್ತ ವಿವಾಹ, ಇತ್ತ ವೃತ್ತಿ: ಧಾರೆ ಸೀರೆಯಲ್ಲೇ ಪರೀಕ್ಷೆಗೆ ಹಾಜರಾದ ಮದುಮಗಳು!
ಕೊಡಗು: ಪರೀಕ್ಷೆ ಹತ್ತಿರ ಬಂತು ಅಂದ್ರೆ ಕಣ್ಣಿಗೆ ಎಣ್ಣೆ ಬಿಟ್ಕೊಂಡು, ಊಟ, ನಿದ್ದೆ ತೊರೆದು ಎಕ್ಸಾಂಗೆ ತಯಾರಾಗೋರೇ ಜಾಸ್ತಿ. ಮನೆಯಲ್ಲಿ ಫಂಕ್ಷನ್ ಇತ್ತು ಅಂದ್ರೆ ಡಿಸ್ಟರ್ಬ್ ಆಗುತ್ತೆ ಅಂತಾ ಹಾಸ್ಟಲ್, ಪಿಜಿ ಅಥವಾ ಫ್ರೆಂಡ್ಸ್ ರೂಮ್ ಅಂತಾ ಹೋಗಿ ಓದೋ ವಿದ್ಯಾರ್ಥಿಗಳನ್ನೂ ಸಹ ನೋಡಿರ್ತೀರಿ. ಆದರೆ, ಯುವತಿಯೊಬ್ಬಳು ತನ್ನ ವಿವಾಹ ದಿನದಂದೇ ಧಾರೆ ಸೀರೆಯಲ್ಲೇ ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಜಿಲ್ಲೆಯ ಮಡಿಕೇರಿ ಪಟ್ಟಣದ ಅಶೋಕಪುರ ಬಡವಾಣೆಯ ನಿವಾಸಿ ಸ್ವಾತಿ ತನ್ನ ಮದುವೆ ಮುಗಿಸಿಕೊಂಡು […]
ಕೊಡಗು: ಪರೀಕ್ಷೆ ಹತ್ತಿರ ಬಂತು ಅಂದ್ರೆ ಕಣ್ಣಿಗೆ ಎಣ್ಣೆ ಬಿಟ್ಕೊಂಡು, ಊಟ, ನಿದ್ದೆ ತೊರೆದು ಎಕ್ಸಾಂಗೆ ತಯಾರಾಗೋರೇ ಜಾಸ್ತಿ. ಮನೆಯಲ್ಲಿ ಫಂಕ್ಷನ್ ಇತ್ತು ಅಂದ್ರೆ ಡಿಸ್ಟರ್ಬ್ ಆಗುತ್ತೆ ಅಂತಾ ಹಾಸ್ಟಲ್, ಪಿಜಿ ಅಥವಾ ಫ್ರೆಂಡ್ಸ್ ರೂಮ್ ಅಂತಾ ಹೋಗಿ ಓದೋ ವಿದ್ಯಾರ್ಥಿಗಳನ್ನೂ ಸಹ ನೋಡಿರ್ತೀರಿ. ಆದರೆ, ಯುವತಿಯೊಬ್ಬಳು ತನ್ನ ವಿವಾಹ ದಿನದಂದೇ ಧಾರೆ ಸೀರೆಯಲ್ಲೇ ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ. ಜಿಲ್ಲೆಯ ಮಡಿಕೇರಿ ಪಟ್ಟಣದ ಅಶೋಕಪುರ ಬಡವಾಣೆಯ ನಿವಾಸಿ ಸ್ವಾತಿ ತನ್ನ ಮದುವೆ ಮುಗಿಸಿಕೊಂಡು ಸೀದಾ ಹಾಜರಾಗಿದ್ದು ತನ್ನ ಪರೀಕ್ಷಾ ಕೊಠಡಿಗೆ. ನವವಧು ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಹ್ವಾನಿಸಿದ್ದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆಕೆಯ ವಿವಾಹದ ದಿನದಂದೇ ಪರೀಕ್ಷೆಯೂ ನಿಗದಿಯಾಗಿತ್ತು. ಅತ್ತ ಮದುವೆಯನ್ನ ಮುಂದಕ್ಕೆ ಹಾಕುವಂತಿಲ್ಲ, ಇತ್ತ ಪರೀಕ್ಷೆಯನ್ನೂ ಬಿಡುವಂತಿಲ್ಲ ಎಂಬ ಪರಿಸ್ಥಿತಿ ಸ್ವಾತಿಗೆ ಎದುರಾಯ್ತು. ಆದರೂ, ಯುವತಿ ಧೃತಿಗೆಡದೆ ಎರಡನ್ನೂ ಯಾವುದೇ ಪ್ರಯಾಸವಿಲ್ಲದೆ ನಿಭಾಯಿಸಿದ್ದಾರೆ.
ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ನಿವಾಸಿ ಸುರೇಶ್ ಎಂಬುವವರನ್ನು ವರಿಸಿರುವ ಸ್ವಾತಿ ಮದುವೆಯ ದಿನ ಮುಂಜಾನೆ 6 ರಿಂದ 9 ಗಂಟೆಯ ಒಳಗೆ ಮದುವೆ ಶಾಸ್ತ್ರಗಳನ್ನು ಮುಗಿಸಿಕೊಂಡಿದ್ದಾರೆ. ನಂತರ ಮಡಿಕೇರಿ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಧಾರೆ ಸೀರೆಯಲ್ಲೇ ಆಗಮಿಸಿ ಪರೀಕ್ಷೆ ಬರೆದಿದ್ದಾರೆ. ಸ್ವಾತಿಯ ಶ್ರದ್ಧೆಯನ್ನು ನೋಡಿದ ಸ್ಥಳೀಯರು ಭೇಷ್ ಎಂದಿದ್ದು ಯುವತಿ ದಾಂಪತ್ಯ ಜೀವನ ಹಾಗೂ ವೃತ್ತಿ ಜೀವನ ಎರಡರಲ್ಲೂ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದ್ದಾರೆ.