ಮಂಗಳಾರತಿಗೆಂದು ಬಂದು.. ಅರ್ಚಕರ ಚಿನ್ನದ ಸರವನ್ನೇ ಕದ್ದೊಯ್ದ ಭಕ್ತ ಮಹಾಶಯ!
ಕೋಲಾರ: ಪೂಜೆಗೆಂದು ಭಕ್ತನ ಸೋಗಿನಲ್ಲಿ ಬಂದ ಐನಾತಿ ಕಳ್ಳನೊಬ್ಬ ಅರ್ಚಕರ ಚಿನ್ನದ ಸರವನ್ನೇ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದಿದೆ. ಪಟ್ಟಣದ ಎಲೆಮಲ್ಲಪ್ಪ ರಸ್ತೆಯಲ್ಲಿರುವ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಘಟನೆ ಸಂಭವಿಸಿದ್ದು, ವಿಶ್ವನಾಥ್ ಸರ ಕಳೆದುಕೊಂಡ ಅರ್ಚಕರಾಗಿದ್ದಾರೆ. ಭಕ್ತನ ಸೋಗಿನಲ್ಲಿ ಮಾಸ್ಕ್ ಧರಿಸಿಕೊಂಡು ಬಂದಿದ್ದ ಖದೀಮ ಈ ಕೃತ್ಯ ಎಸಗಿದ್ದಾನೆ. ಮಂಗಳಾರತಿ ಕೊಡುವ ವೇಳೆ ಪೂಜಾರಿ ಮುಖಕ್ಕೆ ಮಂಕುಬೂದಿ ಎರಚಿ, 25 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದಾನೆ. […]
ಕೋಲಾರ: ಪೂಜೆಗೆಂದು ಭಕ್ತನ ಸೋಗಿನಲ್ಲಿ ಬಂದ ಐನಾತಿ ಕಳ್ಳನೊಬ್ಬ ಅರ್ಚಕರ ಚಿನ್ನದ ಸರವನ್ನೇ ದೋಚಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದಿದೆ.
ಪಟ್ಟಣದ ಎಲೆಮಲ್ಲಪ್ಪ ರಸ್ತೆಯಲ್ಲಿರುವ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಘಟನೆ ಸಂಭವಿಸಿದ್ದು, ವಿಶ್ವನಾಥ್ ಸರ ಕಳೆದುಕೊಂಡ ಅರ್ಚಕರಾಗಿದ್ದಾರೆ. ಭಕ್ತನ ಸೋಗಿನಲ್ಲಿ ಮಾಸ್ಕ್ ಧರಿಸಿಕೊಂಡು ಬಂದಿದ್ದ ಖದೀಮ ಈ ಕೃತ್ಯ ಎಸಗಿದ್ದಾನೆ. ಮಂಗಳಾರತಿ ಕೊಡುವ ವೇಳೆ ಪೂಜಾರಿ ಮುಖಕ್ಕೆ ಮಂಕುಬೂದಿ ಎರಚಿ, 25 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದಾನೆ. ಇನ್ನೂ ಘಟನಾ ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
Published On - 3:13 pm, Sun, 22 November 20