AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಎಲೆಕ್ಷನ್​ ಅಖಾಡಕ್ಕೆ ಎಂಟ್ರಿ ಕೊಡೋಕೂ ಮುನ್ನ.. ಕಬಡ್ಡಿಯಲ್ಲಿ ‘ಪ್ರತಾಪ’ ಮೆರೆದ ಮಾಜಿ ಶಾಸಕ

ರಾಯಚೂರು: ಶಿರಾ ಹಾಗೂ ರಾಜರಾಜೇಶ್ವರಿ ಉಪಚುನಾವಣೆಯ ನಂತರ ಮೂರು ಪಕ್ಷಗಳ ಚಿತ್ತ ಇದೀಗ ಮಸ್ಕಿಯತ್ತ ನಾಟಿದೆ. ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆಯಲು ಕೈ, ಕಮಲ ಮತ್ತು ದಳ ಭರ್ಜರಿ ತಯಾರಿ ನಡೆಸಲು ಸಹ ಸಜ್ಜಾಗಿದ್ದಾರೆ. ಇತ್ತ, ಮಸ್ಕಿಯ ಯುವಕರನ್ನು ತನ್ನತ್ತ ಸೆಳೆಯುವ ಪ್ರಯತ್ನವೂ ಸಹ ಜೋರಾಗಿ ನಡೆದಿದೆ ಎಂದು ಹೇಳಲಾಗಿದೆ. ಈ ನಡುವೆ, ಬಳಗಾನೂರನಲ್ಲಿ ಬಿಜೆಪಿ ಅಭಿಮಾನಿ ಬಳಗದಿಂದ ಕಬಡ್ಡಿ ಆಯೋಜನೆ ಮಾಡಲಾಗಿದ್ದು, ಮಸ್ಕಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕಬಡ್ಡಿ ಆಟದಲ್ಲಿ ಪಾಲ್ಗೊಂಡು ಎಂಜಾಯ್​ ಮಾಡಿದರು. ಮಸ್ಕಿ […]

ಬೈಎಲೆಕ್ಷನ್​ ಅಖಾಡಕ್ಕೆ ಎಂಟ್ರಿ ಕೊಡೋಕೂ ಮುನ್ನ.. ಕಬಡ್ಡಿಯಲ್ಲಿ ‘ಪ್ರತಾಪ’ ಮೆರೆದ ಮಾಜಿ ಶಾಸಕ
ಪೃಥ್ವಿಶಂಕರ
|

Updated on:Nov 22, 2020 | 4:36 PM

Share

ರಾಯಚೂರು: ಶಿರಾ ಹಾಗೂ ರಾಜರಾಜೇಶ್ವರಿ ಉಪಚುನಾವಣೆಯ ನಂತರ ಮೂರು ಪಕ್ಷಗಳ ಚಿತ್ತ ಇದೀಗ ಮಸ್ಕಿಯತ್ತ ನಾಟಿದೆ. ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆಯಲು ಕೈ, ಕಮಲ ಮತ್ತು ದಳ ಭರ್ಜರಿ ತಯಾರಿ ನಡೆಸಲು ಸಹ ಸಜ್ಜಾಗಿದ್ದಾರೆ. ಇತ್ತ, ಮಸ್ಕಿಯ ಯುವಕರನ್ನು ತನ್ನತ್ತ ಸೆಳೆಯುವ ಪ್ರಯತ್ನವೂ ಸಹ ಜೋರಾಗಿ ನಡೆದಿದೆ ಎಂದು ಹೇಳಲಾಗಿದೆ. ಈ ನಡುವೆ, ಬಳಗಾನೂರನಲ್ಲಿ ಬಿಜೆಪಿ ಅಭಿಮಾನಿ ಬಳಗದಿಂದ ಕಬಡ್ಡಿ ಆಯೋಜನೆ ಮಾಡಲಾಗಿದ್ದು, ಮಸ್ಕಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕಬಡ್ಡಿ ಆಟದಲ್ಲಿ ಪಾಲ್ಗೊಂಡು ಎಂಜಾಯ್​ ಮಾಡಿದರು. ಮಸ್ಕಿ ಉಪಚುನಾವಣೆ ಬೆನ್ನಲ್ಲೇ ಯುವ ಮತದಾರರನ್ನ ಸೆಳೆಯಲು ಯತ್ನ ಮಾಡಲಾಗುತ್ತಿದೆ. ಹಾಗಾಗಿ, ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಬಿಜೆಪಿ ಅಭಿಮಾನಿ ಬಳಗದಿಂದ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕಬಡ್ಡಿ ಕೋರ್ಟ್​ನಲ್ಲಿ ಇಳಿದು ಯುವಕರೊಂದಿಗೆ ಯುವಕರಾಗಿ ಕಬಡ್ಡಿ ಆಡಿ ಎಲ್ಲರ ಗಮನ ಸೆಳೆದಿದ್ದಾರೆ.

Published On - 4:33 pm, Sun, 22 November 20