AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗಲಿ ಮೇಲೆ ಶವ! ಗ್ರಾಮಸ್ಥರಿಗೆ ಆವರಿಸಿತು ಭೀತಿ, ಆಮೇಲೆ ಫಜೀತಿ

ಮಂಡ್ಯ: ಕೊರೊನಾದಿಂದ ಜನರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದಕ್ಕೊಂದು ನಿದರ್ಶನ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೊನಗನಹಳ್ಳಿಯಲ್ಲಿ ನಡೆದಿದೆ. ಮೂಲತಃ ಮೈಸೂರಿನ T ನರಸಿಪುರ ತಾಲೂಕಿನ ಮುಸುಕನಕೊಪ್ಪಲು ನಿವಾಸಿಯಾಗಿದ್ದ ಮೃತ, ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ನಿನ್ನೆ ಬೆಂಗಳೂರಿನಿಂದ ಹೊನಗನಹಳ್ಳಿಗೆ ಬಂದಿದ್ದರು. ಅಂದು ರಾತ್ರಿ ಉಸಿರಾಟದ ಸಮಸ್ಯೆ ಎದುರಾಗಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ. ಹೀಗಾಗಿ, ಮೃತದೇಹವನ್ನ ತಮ್ಮ ಮೂಲ ನಿವಾಸ ಮುಸುಕನಕೊಪ್ಪಲಿಗೆ ರವಾನಿಸಲು ಅಧಿಕಾರಿಗಳು ಮುಂದಾದರು. ಈ ಮಧ್ಯೆ ಮುಸುಕನಕೊಪ್ಪಲು ಗ್ರಾಮಸ್ಥರು […]

ಜಗಲಿ ಮೇಲೆ ಶವ! ಗ್ರಾಮಸ್ಥರಿಗೆ ಆವರಿಸಿತು ಭೀತಿ, ಆಮೇಲೆ ಫಜೀತಿ
KUSHAL V
| Updated By: |

Updated on:Jul 08, 2020 | 10:28 PM

Share

ಮಂಡ್ಯ: ಕೊರೊನಾದಿಂದ ಜನರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದಕ್ಕೊಂದು ನಿದರ್ಶನ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೊನಗನಹಳ್ಳಿಯಲ್ಲಿ ನಡೆದಿದೆ.

ಮೂಲತಃ ಮೈಸೂರಿನ T ನರಸಿಪುರ ತಾಲೂಕಿನ ಮುಸುಕನಕೊಪ್ಪಲು ನಿವಾಸಿಯಾಗಿದ್ದ ಮೃತ, ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ನಿನ್ನೆ ಬೆಂಗಳೂರಿನಿಂದ ಹೊನಗನಹಳ್ಳಿಗೆ ಬಂದಿದ್ದರು. ಅಂದು ರಾತ್ರಿ ಉಸಿರಾಟದ ಸಮಸ್ಯೆ ಎದುರಾಗಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.

ಹೀಗಾಗಿ, ಮೃತದೇಹವನ್ನ ತಮ್ಮ ಮೂಲ ನಿವಾಸ ಮುಸುಕನಕೊಪ್ಪಲಿಗೆ ರವಾನಿಸಲು ಅಧಿಕಾರಿಗಳು ಮುಂದಾದರು. ಈ ಮಧ್ಯೆ ಮುಸುಕನಕೊಪ್ಪಲು ಗ್ರಾಮಸ್ಥರು ಶವವನ್ನ ಹಳ್ಳಿಗೆ ಬಿಟ್ಟುಕೊಳ್ಳಲು ಹಿಂದೇಟು ಹಾಕಿದ್ದಾರೆ. ಇದರಿಂದ ಪೇಚಿಗೆ ಸಿಲುಕಿದ ಅಧಿಕಾರಿಗಳು ಕೊನೆಗೆ ವ್ಯಕ್ತಿಯ ಮೃತದೇಹವನ್ನ ಮನೆಯೊಂದರ ಜಗಲಿಯ ಮೇಲೆ ಇರಿಸಿದರು. ಹೀಗಾಗಿ, ಮನೆ ಮುಂದೆ ಶವವನ್ನು ಕಂಡ ಗ್ರಾಮಸ್ಥರಿಗೆ ಗುಂಡಿಗೆ ಬಾಯಿಗೆ ಬಂದಂತಾಯಿತು.

ಕೊನೆಗೆ ಅಂತೂ ಇಂತೂ ಮುಸುಕನಕೊಪ್ಪಲಿನ ಗ್ರಾಮಸ್ಥರ ಮನವೊಲಿಸಲಾಯಿತು. ಊರಿನ ಹೊರಗಡೆ ಅಂತ್ಯ ಸಂಸ್ಕಾರ ಮಾಡಲು ಒಪ್ಪಿಗೆಯೂ ಸಿಕ್ಕಿತು. ಆದರೆ, ಈ ನಡುವೆ ಹೊನಗನಹಳ್ಳಿಯಿಂದ ಮುಸುಕನಕೊಪ್ಪಲಿಗೆ ಶವ ರವಾನಿಸುವ ವೇಳೆ ಅಧಿಕಾರಿಗಳ ಮತ್ತೊಂದು ಯಡವಟ್ಟು ಮಾಡಿದ್ದಾರೆ. ಮೃತದೇಹವನ್ನ ರವಾನಿಸಲು ಆಂಬ್ಯುಲೆನ್ಸ್‌ ಹಾಗೂ ಸಿಬ್ಬಂದಿಯನ್ನು ಕಳಿಸಿಕೊಡಲಿಲ್ಲ.

ಬದಲಿಗೆ, ಕುಟುಂಬಸ್ಥರಿಗೇ ಎರಡು PPE ಕಿಟ್ ನೀಡಿ ನೀವೇ ಶವವನ್ನ ಸಾಗಿಸಿಕೊಳ್ಳಿ ಎಂದು ಹೇಳಿ ಕೈತೊಳೆದುಕೊಂಡುಬಿಟ್ಟರು. ಕೊನೆಗೆ, ಮೃತನ ಕುಟುಂಬದವರೇ ಕಿಟ್ ಹಾಕಿಕೊಂಡು ಖಾಸಗಿ ವಾಹನದಲ್ಲಿ ಶವ ತೆಗೆದುಕೊಂಡು ಮುಸುಕನಕೊಪ್ಪಲಿನತ್ತ ತೆರಳಬೇಕಾಯಿತು.

Published On - 6:10 pm, Wed, 8 July 20