ಮನೆ ಕುಸಿತ: ದಂಪತಿ ಸಾವು

|

Updated on: Dec 01, 2020 | 12:55 PM

ಜಿಟಿಜಿಟಿ ಮಳೆಯಿಂದಾಗಿ ಮಣ್ಣಿನ ಮನೆ ಕುಸಿದು ಬಿದ್ದು ದಂಪತಿಗಳು ಸಾವನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಪ್ರದೇಶದ ಅದೋನಿ ಸ್ಟ್ರೀಟ್​ನಲ್ಲಿ ನಡೆದಿದೆ.

ಮನೆ ಕುಸಿತ: ದಂಪತಿ ಸಾವು
ಮನೆ ಕುಸಿತದಿಂದ ಸಾವನ್ನಪ್ಪಿದ ದಂಪತಿ
Follow us on

ಬಳ್ಳಾರಿ: ಜಿಟಿಜಿಟಿ ಮಳೆಯಿಂದಾಗಿ ಮಣ್ಣಿನ ಮನೆ ಕುಸಿದು ಬಿದ್ದು ದಂಪತಿಗಳು ಸಾವನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೌಲ್ ಬಜಾರ್ ಪ್ರದೇಶದ ಅದೋನಿ ಸ್ಟ್ರೀಟ್​ನಲ್ಲಿ ನಡೆದಿದೆ.

ಕೊಲಣ್ಣ (45 ವರ್ಷ) ಹಾಗೂ ಆತನ ಪತ್ನಿ ಸಾವಿತ್ರಿ (40) ಮೃತರು. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಘಟನೆಯ ಸಂದರ್ಭದಲ್ಲಿ ದಂಪತಿಯ ಪುತ್ರ  ಸಂತೋಷ್​ (13) ಮಣ್ಣಿನಲ್ಲಿ ಸಿಲುಕಿಕೊಂಡಿದ್ದ. ಇದನ್ನು ಗಮನಿಸಿದ ಸ್ಥಳೀಯರು  ಆತನನ್ನು ರಕ್ಷಿಸಿದ್ದಾರೆ. ಸಂತೋಷ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಕಳೆದ 2 ದಿನಗಳಿಂದ ನಿವಾರ್ ಚಂಡಮಾರುತದಿಂದಾಗಿ ಮಳೆಯ ಆರ್ಭಟ ಹೆಚ್ಚಿತ್ತು. ಈ ಕಾರಣದಿಂದಾಗಿ ದಂಪತಿಗಳ ಮಣ್ಣಿನ ಮನೆ ಸಂಪೂರ್ಣವಾಗಿ ನೆಲಸಮಗೊಂಡಿದೆ. ಮಣ್ಣಿನಲ್ಲಿ ಸಿಲುಕಿದ ದಂಪತಿಗಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕೌಲಬಜಾರ್ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

Published On - 11:26 am, Tue, 1 December 20