Covid-19 India Update | ಭಾರತದಲ್ಲಿ ನಿನ್ನೆ ಪತ್ತೆಯಾದ ಪ್ರಕರಣಗಳೆಷ್ಟು? ಇಲ್ಲಿದೆ ಮಾಹಿತಿ
ಅಂಡಮಾನ್ ಮತ್ತು ನಿಕೋಬಾರ್ನಲ್ಲಿ 4,550 ಜನ ಗುಣಮುಖರಾಗಿದ್ದು, 61 ಮಂದಿ ಕೊವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಲ್ಲಿಯ ತನಕ 1,29,389 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.
ದೆಹಲಿ: ಭಾರತದಲ್ಲಿ ನಿನ್ನೆ 31,118 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು 482 ಜನ ಮೃತಪಟ್ಟಿದ್ದಾರೆ. ಈ ಮೂಲಕ ಒಟ್ಟಾರೆ ಪ್ರಕರಣಗಳ ಸಂಖ್ಯೆ 94,62,809ಕ್ಕೆ ತಲುಪಿದರೆ, ಕೊವಿಡ್ನಿಂದಾಗಿ ಸಾವಿಗೀಡಾದವರ ಸಂಖ್ಯೆ 1,37,621ರ ಗಡಿ ಮುಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆ ನೀಡಿದೆ.
ಸದ್ಯ ದೇಶದಲ್ಲಿ 4,35,603 ಸಕ್ರಿಯ ಪ್ರಕರಣಗಳಿದ್ದು ಇದುವರೆಗೆ 88,89,585 ಜನರು ಕೊವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಹೊಸದಾಗಿ 6 ಪಾಸಿಟಿವ್ ಪ್ರಕರಣಗಳು ಇಂದು ಬೆಳಗ್ಗೆ ಲಭಿಸಿದ ಮಾಹಿತಿ ಪ್ರಕಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಹೊಸದಾಗಿ 6 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟು ಕೊವಿಡ್ ಪ್ರಕರಣಗಳ ಸಂಖ್ಯೆ 4,710ಕ್ಕೆ ತಲುಪಿದೆ.
ಅಂಡಮಾನ್ ಮತ್ತು ನಿಕೋಬಾರ್ನಲ್ಲಿ ಈವರೆಗೆ 4,550 ಜನ ಗುಣಮುಖರಾಗಿದ್ದು, 61 ಮಂದಿ ಕೊವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಪ್ರಸ್ತುತ 99 ಸಕ್ರಿಯ ಪ್ರಕರಣಗಳಿದ್ದು ಇಲ್ಲಿಯ ತನಕ 1,29,389 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಆರೋಗ್ಯ ಸಚಿವರ ಮನೆ ಪಕ್ಕದಲ್ಲೆ ಕುರಿ ಸಂತೆ, ಕೊವಿಡ್ ನಿಯಮಗಳಿಗೆ ತಿಲಾಂಜಲಿ ಇಟ್ಟ ಜನತೆ