ನನ್ನ ಜೀವನದಲ್ಲಿ‌ ಎಂದೂ ಇಂತಹ ಅವಮಾನ, ಟೀಕೆಗಳನ್ನು ಅನುಭವಿಸಿಲ್ಲ: TDP ನಾಯಕ ಚಂದ್ರಬಾಬು‌ನಾಯ್ಡು

ರೈತರ‌ ಕಷ್ಟ ತಿಳಿಸಲು ಪೊಡಿಯಂ ಬಳಿ ಪ್ರತಿಭಟನೆ ಮಾಡಿದ್ದೇನೆ. ಆದರೆ ಇದಕ್ಕಾಗಿ ಸದನದಿಂದ ಹೊರ‌ ಹಾಕಲಾಗಿದೆ. ನನ್ನ ಜೀವನದಲ್ಲಿ‌ ಎಂದೂ ಇಂತಹ ಅವಮಾನ, ಟೀಕೆಗಳನ್ನು ಅನುಭವಿಸಿಲ್ಲ. ಆದರೆ, ನನ್ನ ರಾಜಕೀಯ ಜೀವನ ಇನ್ನೂ ಮುಗಿದಿಲ್ಲ.

ನನ್ನ ಜೀವನದಲ್ಲಿ‌ ಎಂದೂ ಇಂತಹ ಅವಮಾನ, ಟೀಕೆಗಳನ್ನು ಅನುಭವಿಸಿಲ್ಲ: TDP ನಾಯಕ ಚಂದ್ರಬಾಬು‌ನಾಯ್ಡು
ಚಂದ್ರಬಾಬು ನಾಯ್ಡು
Follow us
ಪೃಥ್ವಿಶಂಕರ
|

Updated on:Nov 30, 2020 | 6:40 PM

ಹೈದರಾಬಾದ್: ಒಂದು ದಿನದ ಮಟ್ಟಿಗೆ ತೆಲುಗು ದೇಶಂ ಪಾರ್ಟಿಯ (ಟಿಡಿಪಿ) 13 ಶಾಸಕರನ್ನು ಅಮಾನತು ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಆಂಧ್ರದ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು‌ನಾಯ್ಡು ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ‌ಜಗನ್ ಮೋಹನ್ ರೆಡ್ಡಿ ಮೇಲೆ ಹರಿಹಾಯ್ದಿರುವ ಅವರು, ‘ಅವರು ನಾಚಿಕೆಯಿಲ್ಲದಂತೆ ಮಾತನಾಡುತ್ತಾರೆ. ಮುಖ್ಯಮಂತ್ರಿ ತಡವಾಗಿ ವಿಧಾನಸಭೆಗೆ ಬಂದಿದ್ದರಿಂದ, ತಡವಾಗಿ ಅಧಿವೇಶನ ಶುರುವಾಯಿತು. 14 ವರ್ಷ ಮುಖ್ಯಮಂತ್ರಿಯಾಗಿ, 12 ವರ್ಷ ಪ್ರತಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಮೊದಲ ಬಾರಿ ಓರ್ವ ಫೇಕ್ ಸಿಎಂ‌ ನೋಡುತ್ತಿದ್ದೇನೆ’  ಎಂದರು.

ಪಂಚಾಯತ್ ರಾಜ್​ ಕಾಯ್ದೆ ಬಗ್ಗೆ ಮಾತನಾಡಲು ಅವಕಾಶ ನೀಡದೆ, ಅಮಾನತು ಆದೇಶವನ್ನು ಅಂಗೀಕರಿಸಲಾಗಿದೆ. ಚಂಡಮಾರುತದಿಂದಾಗಿ ರೈತರು ಬೆಳೆದ 20 ಲಕ್ಷ ಎಕರೆ ಬೆಳೆ ಹಾನಿಗೀಡಾಗಿದೆ. ರೈತರು 1 ಲಕ್ಷ ಕೋಟಿ ಹಾನಿಗೀಡಾಗಿ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ. ಇದನ್ನು ಹೇಳಿದರೆ ಮುಖ್ಯಮಂತ್ರಿ ಗಾಳಿಸುದ್ದಿ ಅಂತಾರೆ. ಬಹಳ ಅಹಂಕಾರದಿಂದ‌ ಮಾತನಾಡ್ತಾರೆ ಎಂದು ಬೇಸರ ವ್ಯಕ್ತಪಡಿಸಿದೆ.

ರೈತರ‌ ಕಷ್ಟ ತಿಳಿಸಲು ಪೊಡಿಯಂ ಬಳಿ ಪ್ರತಿಭಟನೆ ಮಾಡಿದ್ದೇನೆ. ಆದರೆ ಇದಕ್ಕಾಗಿ ಸದನದಿಂದ ಹೊರ‌ ಹಾಕಲಾಗಿದೆ. ನನ್ನ ಜೀವನದಲ್ಲಿ‌ ಎಂದೂ ಇಂತಹ ಅವಮಾನ, ಟೀಕೆಗಳನ್ನು ಅನುಭವಿಸಿಲ್ಲ. ನನ್ನ ರಾಜಕೀಯ ಜೀವನ ಇನ್ನೂ ಮುಗಿದಿಲ್ಲ. ಮುಂದಿನ‌ ದಿನಗಳಲ್ಲಿ ಮತ್ತೆ‌ ನಮ್ಮ ಸರ್ಕಾರ  ಬರಲಿದೆ. ಎಚ್ಚರ ಇರಲಿ ಎಂದು ಸಿ‌ಎಂ ‌ಜಗನ್ ಮೋಹನ್ ರೆಡ್ಡಿಗೆ, ಚಂದ್ರಬಾಬು ನಾಯ್ಡು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಒಂದು ದಿನದ ಮಟ್ಟಿಗೆ 13 TDP ಶಾಸಕರು ಆಂಧ್ರ ವಿಧಾನಸಭೆಯಿಂದ ಅಮಾನತು

Published On - 6:35 pm, Mon, 30 November 20

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ