ತಬ್ಲಿಘಿಗಳ ಸಂಗ: ಮಳವಳ್ಳಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢ

ಮಂಡ್ಯ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ದೆಹಲಿಯ ಅನಾಹುತಕಾರಿ ತಬ್ಲಿಘಿಗಳ ಸಂಪರ್ಕದಲ್ಲಿದ್ದ ಇಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ‌ ಎಂ‌ ವಿ ವೆಂಕಟೇಶ್ ಹೇಳಿದ್ದಾರೆ. ಇಂದು ಮಳವಳ್ಳಿಯಲ್ಲಿ ಇಬ್ಬರು ಕೊರೊನಾ ಸೋಂಕು ಪಾಸಿಟಿವ್ ವ್ಯಕ್ತಿಗಳು ಪತ್ತೆಯಾಗಿದ್ದಾರೆ ಎಂದು ತಿಳಿಸಿರುವ ಜಿಲ್ಲಾಧಿಕಾರಿ ವೆಂಕಟೇಶ್ ಅವರ ಟ್ರಾವಲ್ ಹಿಸ್ಟರಿ ವಿವರಣೆ ನೀಡಿದ್ದಾರೆ. ಸೋಂಕಿತ ಇಬ್ಬರೂ ಮಳವಳ್ಳಿ ನಿವಾಸಿಗಳು. ಪೇಶೇಂಟ್ ನಂ. 442 ರ ವ್ಯಕ್ತಿ 47 ವರ್ಷದವನಾಗಿದ್ದು, ಮಳವಳ್ಳಿ ಪಟ್ಟಣದಲ್ಲಿ ಟೀ ಅಂಗಡಿ ನಡೆಸುತ್ತಿದ್ದ. ಈತ […]

ತಬ್ಲಿಘಿಗಳ ಸಂಗ: ಮಳವಳ್ಳಿಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢ
ಸಾಧು ಶ್ರೀನಾಥ್​

Updated on: Apr 23, 2020 | 2:33 PM

ಮಂಡ್ಯ: ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ದೆಹಲಿಯ ಅನಾಹುತಕಾರಿ ತಬ್ಲಿಘಿಗಳ ಸಂಪರ್ಕದಲ್ಲಿದ್ದ ಇಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ‌ ಎಂ‌ ವಿ ವೆಂಕಟೇಶ್ ಹೇಳಿದ್ದಾರೆ.

ಇಂದು ಮಳವಳ್ಳಿಯಲ್ಲಿ ಇಬ್ಬರು ಕೊರೊನಾ ಸೋಂಕು ಪಾಸಿಟಿವ್ ವ್ಯಕ್ತಿಗಳು ಪತ್ತೆಯಾಗಿದ್ದಾರೆ ಎಂದು ತಿಳಿಸಿರುವ ಜಿಲ್ಲಾಧಿಕಾರಿ ವೆಂಕಟೇಶ್
ಅವರ ಟ್ರಾವಲ್ ಹಿಸ್ಟರಿ ವಿವರಣೆ ನೀಡಿದ್ದಾರೆ.

ಸೋಂಕಿತ ಇಬ್ಬರೂ ಮಳವಳ್ಳಿ ನಿವಾಸಿಗಳು. ಪೇಶೇಂಟ್ ನಂ. 442 ರ ವ್ಯಕ್ತಿ 47 ವರ್ಷದವನಾಗಿದ್ದು, ಮಳವಳ್ಳಿ ಪಟ್ಟಣದಲ್ಲಿ ಟೀ ಅಂಗಡಿ ನಡೆಸುತ್ತಿದ್ದ. ಈತ ಪೇಶೇಂಟ್ ನಂಬರ್ 171, 371 ರ ಜೊತೆ ನಿಕಟ ಸಂಪರ್ಕ ಹೊಂದಿದ್ದು ಜೊತೆಯಲ್ಲೇ ನಮಾಜ್ ಮಾಡುತ್ತಿದ್ದ.

ಹೀಗಾಗಿ ಇವರನ್ನ ಏಪ್ರಿಲ್ 11 ರಂದು ಕ್ವಾರಂಟೈನ್ ನಲ್ಲಿಟ್ಟು, ಪರೀಕ್ಷಿಸಲ್ಪಟ್ಟಾಗ ಮೊದಲ ಬಾರಿಗೆ ಫಲಿತಾಂಶ ಬಂದಿರಲಿಲ್ಲ. ಈಗ ಎರಡನೇ ಬಾರಿಗೆ ಪಾಸಿಟಿವ್ ಬಂದಿದೆ. ಈತನಿಗೆ 9 ಜನ ಪ್ರೈಮರಿ ಕಾಂಟಾಕ್ಟ್ ವ್ಯಕ್ತಿಗಳನ್ನ ಗುರ್ತಿಸಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ.

ಇನ್ನು ಪೇಶೇಂಟ್ ನಂ 443ಗೆ ಸಂಬಂಧಪಟ್ಟಂತೆ.. ಈಕೆ 28 ವರ್ಷದವನಾಗಿದ್ದು, ಕೋಟೆ ಬೀದಿಯ ನಿವಾಸಿ. ಈಕೆ 179ರ ವ್ಯಕ್ತಿ ಜೊತೆ ನಿಕಟ ಸಂಪರ್ಕ ಹೊಂದಿದ್ದರು. ಈಕೆಗೆ ಗಂಡ, ಅತ್ತೆ ಮಾವ ಹಾಗೂ ಮಕ್ಕಳಿದ್ದಾರೆ. ಈಕೆಯನ್ನ ಹೊರತುಪಡಿಸಿ ಉಳಿದವರಿಗೆ ನೆಗಿಟಿವ್ ಬಂದಿದೆ. ಆದ್ರೂ ಇವರ ಕುಟುಂಬಸ್ಥರನ್ನ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ.

Published On - 2:20 pm, Thu, 23 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us