ಕೊರೊನಾ ಕಿಡಿ: ಮಂಡಕ್ಕಿ ಭಟ್ಟಿಗಳಲ್ಲಿ ಆರಿದ ಬೆಂಕಿ, ಹೊತ್ತಿದ ಹಸಿವಿನ ಕಿಡಿ!
ದಾವಣಗೆರೆ: ಕೊರೊನಾ ಲಾಕ್‌ಡೌನ್‌ಗಿಂತ ಹಿಂದೆ ಇಲ್ಲಿ ಕೆಲಸಗಾರರು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ರು. ಫಟಾ ಫಟ್ ಅಂತ ಮಂಡಕ್ಕಿ ರೆಡಿಯಾಗುತ್ತಿತ್ತು. ಆದರೆ ಈಗ ಒಂದು ಹೊತ್ತಿನ ಊಟಕ್ಕು ಪರದಾಡುತ್ತಿದ್ದಾರೆ. ದಾವಣಗೆರೆ ನಗರದ ಆಜಾದ್ ನಗರ ಹಾಗೂ ಭಾಷಾ ನಗರದ ಮಂಡಕ್ಕಿ ಭಟ್ಟಿಗಳಲ್ಲಿ ಜನರು ಪಡುತ್ತಿರುವ ಕಷ್ಟವನ್ನು ಕೇಳೋರೆ ಇಲ್ಲ. ಆಹಾರದ ಕಿಟ್‌ಗಾಗಿ ನಾ ಮುಂದು ತಾಮುಂದು ಎಂದು ಮಹಿಳೆಯರು ಹೇಗೆ ಕಿತ್ತಾಡುತ್ತಿದ್ದಾರೆ. ಮಹಿಳೆಯರನ್ನ ನಿಯಂತ್ರಿಸೋಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮಹಿಳೆಯರು ಸಾಮಾಜಿಕ ಅಂತರವಿಲ್ಲದೆ ಆಹಾರದ ಕಿಟ್ ಪಡೆಯೋಕೆ ಸರ್ಕಸ್ […]
ದಾವಣಗೆರೆ: ಕೊರೊನಾ ಲಾಕ್‌ಡೌನ್‌ಗಿಂತ ಹಿಂದೆ ಇಲ್ಲಿ ಕೆಲಸಗಾರರು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ರು. ಫಟಾ ಫಟ್ ಅಂತ ಮಂಡಕ್ಕಿ ರೆಡಿಯಾಗುತ್ತಿತ್ತು. ಆದರೆ ಈಗ ಒಂದು ಹೊತ್ತಿನ ಊಟಕ್ಕು ಪರದಾಡುತ್ತಿದ್ದಾರೆ. ದಾವಣಗೆರೆ ನಗರದ ಆಜಾದ್ ನಗರ ಹಾಗೂ ಭಾಷಾ ನಗರದ ಮಂಡಕ್ಕಿ ಭಟ್ಟಿಗಳಲ್ಲಿ ಜನರು ಪಡುತ್ತಿರುವ ಕಷ್ಟವನ್ನು ಕೇಳೋರೆ ಇಲ್ಲ.
ಆಹಾರದ ಕಿಟ್‌ಗಾಗಿ ನಾ ಮುಂದು ತಾಮುಂದು ಎಂದು ಮಹಿಳೆಯರು ಹೇಗೆ ಕಿತ್ತಾಡುತ್ತಿದ್ದಾರೆ. ಮಹಿಳೆಯರನ್ನ ನಿಯಂತ್ರಿಸೋಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಮಹಿಳೆಯರು ಸಾಮಾಜಿಕ ಅಂತರವಿಲ್ಲದೆ ಆಹಾರದ ಕಿಟ್ ಪಡೆಯೋಕೆ ಸರ್ಕಸ್ ಮಾಡುತ್ತಿದ್ದ ದೃಶ್ಯಗಳು ನಮ್ಮ ಕಣ್ಣಿಗೆ ಬೀಳ್ತಿವೆ.
ಬೆಣ್ಣೆನಗರಿಯಲ್ಲಿ ‘ಹೊಗೆ’ಯಾಡುತ್ತಿದೆ ಬಡ ಕಾರ್ಮಿಕರ ಹಸಿವು! ಈ ಮಂಡಕ್ಕಿ ಭಟ್ಟಿಗಳಲ್ಲಿ ಲಾಕ್‌ಡೌನ್‌ಗಿಂತ ಮುಂಚೆ ಹೋಗುತ್ತಿದ್ದ ಹೊಗೆ ಈಗಲೂ ಹೋಗುತ್ತಿದ್ರೆ, ಈ ಮಹಿಳೆಯರಿಗೆ ಆಹಾರದ ಕಿಟ್‌ಗಾಗಿ ಕಿತ್ತಾಟ ನಡೆಸಬೇಕಾದ ಸ್ಥಿತಿ ಬರುತ್ತಿರಲಿಲ್ಲ. ಅಂದಹಾಗೇ ದಾವಣಗೆರೆ ನಗರದ ಆಜಾದ್ ನಗರ ಹಾಗೂ ಭಾಷಾ ನಗರದಲ್ಲಿ 1018 ಮಂಡಕ್ಕಿ ಭಟ್ಟಿಗಳಿವೆ.
ಕನಿಷ್ಟ ಒಂದು ಭಟ್ಟಿಯಿಂದ ಐದು ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತವೆ. ಅಂದ್ರೆ 5090 ಕುಟುಂಬಗಳು ಈ ಭಟ್ಟಿಗಳ ಮೇಲೆ ಬದುಕು ನಿರ್ವಹಣೆ ಮಾಡುತ್ತಿವೆ. ಆದ್ರೆ ಲಾಕ್ ಡೌನ್ ನಿಂದ ಇಡೀ ಮಂಡಕ್ಕಿ ಭಟ್ಟಿ ಬೀಕೋ ಎನ್ನುತ್ತಿದೆ. ಮಂಡಕ್ಕಿ ಭಟ್ಟಿಗಳಲ್ಲಿ ಬೆಂಕಿ ಆರಿದೆ. ಆದ್ರೆ ಅದನ್ನೇ ನಂಬಿದ ಜನರ ಹೊಟ್ಟೆಯಲ್ಲಿ ಹಸಿವಿನ ಬೆಂಕಿ ಹೊತ್ತಿ ಉರಿಯುತ್ತಿದೆ.
ಈ ಪ್ರದೇಶದಲ್ಲಿ ಎರಡು ದಿನಗಳ ಪಡಿತರ ನೀಡಲಾಗಿದೆ. ಆದ್ರೆ ಅಕ್ಕಿ ಗೋಧಿ ಮಾತ್ರ ಮಕ್ಕಳ ಬಾಯಿಗೆ ಅನ್ನ ಹಾಕುವುದು ಕಷ್ಟ. ಅದಕ್ಕಾಗಿ ಇನ್ನಷ್ಚು ಪದಾರ್ಥಗಳು ಬೇಕು. ಇದೇ ಕಾರಣಕ್ಕೆ ಯಾರಾದ್ರೂ ಕಿಟ್ ಕೊಟ್ಟರೇ ಸಾಕು ಎಂದು ಇಲ್ಲಿನ ಜನ ಪರದಾಡುತ್ತಿದ್ದಾರೆ.
ಇಲ್ಲಿಗೆ ಬರೋರು ಶೇಕಡ 90 ರಷ್ಟು ಅಲ್ಪ ಸಂಖ್ಯಾತರು. ಮೇಲಾಗಿ ನಿತ್ಯ ದುಡಿದು ಬದುಕಿನ ಬಂಡಿ ಸಾಗಿಸುವ ಜನ. ಆದ್ರೆ ಲಾಕ್ ಡೌನ್ ಕೈಗೆ ಸಿಕ್ಕಿ ಇವರ ಬದುಕೇ ಸರ್ವನಾಶವಾಗಿದೆ. ಮನೆ ಬಿಟ್ಟು ಹೊರಗೆ ಬಾರದ ಸ್ಥಿತಿ ಇವರನ್ನ ತಂದು ನಿಲ್ಲಿಸಿದೆ. ಚಿಕ್ಕ ಮಕ್ಕಳು, ಹಿರಿಯರು ಹೀಗೆ ಇಕ್ಕಟ್ಟಾದ ಮನೆಯಲ್ಲಿ 24 ಗಂಟೆ ಇರುವುದು ಇವರೆಲ್ಲರಿಗೆ ಒಂದು ರೀತಿಯಲ್ಲಿ ಕೊರೊನಾ ನರಕ ದರ್ಶನ ಮಾಡಿಸಿದೆ.
ಕಳೆದ ತಿಂಗಳಿಂದ ಸಿದ್ಧ ಮಾಡಿದ ಮಂಡಕ್ಕಿಗಳನ್ನ ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಗೆ ಪೂರೈಸಬೇಕು ಎಂದುಕೊಂಡರೆ ಲಾರಿ ಸಂಚಾರವಿಲ್ಲ. ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಮಂಡಕ್ಕಿ ಇಲ್ಲಾ. ಇದರಿಂದಾಗಿ ಕೈಯಲ್ಲಿ ಕಾಸು ಇಲ್ಲದೆ ನರಳಾಡುವ ಪರಿಸ್ಥಿತಿ ಎದುರಾಗಿದೆ.
ಹತ್ತಾರು ಕೈಗಾರಿಕೆಗಳು ಬೀಗ ಹಾಕಿವೆ. ಇದೇ ರೀತಿ ಮಂಡಕ್ಕಿ ಭಟ್ಟಿಗಳು ಸ್ತಬ್ಧಬ್ದವಾಗಿವೆ. ಹೀಗೆ ಸ್ತಬ್ಧವಾಗಿದ್ರಿಂದ ನಿರಂತರವಾಗಿ ಬಡವರು ಪರಿತಪಿಸುವಂತಾಗಿದೆ. ಐದು ಸಾವಿರ ಕುಟುಂಬಗಳ ಕೈ ಖಾಲಿಯಾಗಿದೆ. ದುಡಿಯುವ ಶಕ್ತಿ ಇದ್ದರೂ ಕೊರೊನಾ ಎಂಬ ಮಹಾ ಮಾರಿಯಿಂದಾಗಿ ಮನೆ ಬಿಡುವಂತಿಲ್ಲ. ಆದ್ರೆ ಹೊಟ್ಟೆ ಅಸಿವು ಕೇಳಬೇಕಲ್ಲವೇ. ಇಂತಹ ಸಂಕಷ್ಟದಲ್ಲಿದ್ದ ಕುಟುಂಬಗಳ ಕಣ್ಣೀರು ಒರೆಸುವ ಕೆಲ್ಸ ಆದಷ್ಟು ಬೇಗನೆ ಆಗಬೇಕಿದೆ. https://www.facebook.com/Tv9Kannada/videos/650793325710417/
Published On - 11:44 am, Thu, 23 April 20