ರಾಮನಗರ: ಮಹಾಮಾರಿ ಕೊರೊನಾ ದೇಶದ ಆರ್ಥಿಕ ಮತ್ತು ಆರೋಗ್ಯ ಸ್ಥಿತಿಗಳಿಗೆ ಭಾರೀ ಹೊಡೆತ ಕೊಟ್ಟಿದೆ. ಇಷ್ಟೇ ಅಲ್ಲ ಕೊರೊನಾ ಪ್ರವಾಸೋದ್ಯಮಕ್ಕೂ ಪೆಟ್ಟು ನೀಡಿದೆ. ಹೀಗೆ ಪೆಟ್ಟು ತಿಂದ ಪ್ರವಾಸೋದ್ಯಮ ಕೇಂದ್ರಗಳಲ್ಲಿ ರಾಮನಗರ ಜಿಲ್ಲೆ ಕೂಡಾ ಒಂದು.
ಹೌದು, ಕೊರೊನಾದಿಂದಾಗಿ ಎಲ್ಲೆಡೆ ಲಾಕ್‌ಡೌನ್ ಘೋಷಿಸಲಾಗಿತ್ತು. ಪರಿಣಾಮ ರಾಜ್ಯದ ಎಲ್ಲೆಡೆಯಂತೆ ರಾಮನಗರದ ಪ್ರವಾಸಿ ಕ್ಷೇತ್ರಗಳಿಗೂ ಲಾಕ್‌ಡೌನ್ ಮಾಡಲಾಗಿತ್ತು. ಸುಮಾರು ಎರಡುವರೆ ತಿಂಗಳುಗಳ ನಂತರ ಜಿಲ್ಲೆಯ ಪ್ರವಾಸ ಕ್ಷೇತ್ರಗಳಲ್ಲೂ ಲಾಕ್‌ಡೌನ್ ಸಡಿಲಿಸಲಾಗಿದೆ. ಆದ್ರೆ ಸಿಲಿಕಾನ್ ಸಿಟಿ ಬೆಂಗಳೂರು ತೀರಾ ಹತ್ತಿರದಲ್ಲಿದ್ದರೂ ಪ್ರವಾಸೋದ್ಯಮ ಮಾತ್ರ ಚೇತರಿಸಿಕೊಳ್ಳುತ್ತಿಲ್ಲ.
ಒಂದು ದಿನದ ಪ್ರವಾಸಕ್ಕೆ ಸೂಕ್ತ ತಾಣಗಳಿವೆ
ಬೆಂಗಳೂರಿಗೆ ಹತ್ತಿರದಲ್ಲೇ ಇರುವ ರಾಮನಗರ ಜಿಲ್ಲೆ ಬಹುತೇಕರಿಗೆ ನೆಚ್ಚಿನ ತಾಣವಾಗಿತ್ತು. ಒಂದು ದಿನದ ಪ್ರವಾಸ ಸುಖ ಅನುಭವಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿ ಬಂದು ಹೋಗುತ್ತಿದ್ದರು. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಪ್ರವಾಸಿ ಚಟುವಟಿಕೆಗಳು ಜೂನ್ 8ರ ನಂತರ ಮತ್ತೆ ಪುನರಾರಂಭ ಪಡೆಯಬಹುದು ಎನ್ನುವ ವಿಶ್ವಾಸವಿತ್ತು. ಆದರೆ ಆ ನಿರೀಕ್ಷೆ ಹುಸಿಯಾಗಿದೆ. ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳು ಪ್ರವಾಸಿಗರಿಗಾಗಿ ಅನ್‌ಲಾಕ್ ಆಗಿ 10 ದಿನ ಕಳೆದರೂ ಯಾರೂ ಇತ್ತ ಸುಳಿಯುತ್ತಿಲ್ಲ.
ಚುಂಚಿ ಫಾಲ್ಸ್, ಕಣ್ವ ಜಲಾಶಯ ಪ್ರಮಖ ಆಕರ್ಷಣೆ
ಇನ್ನೂ ಬಿಕೋ ಎನ್ನುತ್ತಿರುವ ಪ್ರವಾಸಿ ತಾಣಗಳು
ಇನ್ನು ಸ್ಥಳ ಪುರಾಣದ ಕುರಿತು ಪ್ರವಾಸಿಗರಿಗೆ ಅಗತ್ಯ ಮಾಹಿತಿ ನೀಡುವ 24 ಮಂದಿ ಪ್ರವಾಸಿ ಮಿತ್ರರು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರೂ ಕೂಡಾ ತಮ್ಮ ಕರ್ತವ್ಯಕ್ಕೆ ಇದುವರೆಗೆ ಮರಳಿಲ್ಲ. ಲಾಕ್‌ಡೌನ್ ಸಮಯದಲ್ಲಿ ಮನೆಯಲ್ಲಿರುವಂತೆ ಸೂಚಿಸಿದ್ದ ಅಧಿಕಾರಿಗಳು, ಮರಳಿ ಬರುವಂತೆ ಅವರಿಗೆ ಇದುವರೆಗೆ ಸೂಚಿಸಿಲ್ಲ. ಈ ಬಗ್ಗೆ ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದೇವೆ ಎನ್ನುತ್ತಾರೆ ಸ್ಥಳೀಯ ಅಧಿಕಾರಿಗಳು. ಒಟ್ಟಿನಲ್ಲಿ ರಜಾ ದಿನಗಳಂದು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಜಿಲ್ಲೆಯ ಪ್ರವಾಸಿ ತಾಣಗಳು ಈಗ ಬಿಕೋ ಎನ್ನುತ್ತಿವೆ.
-ಪ್ರಶಾಂತ್ ಹುಲಿಕೆರೆ
Published On - 6:31 pm, Thu, 18 June 20